ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಜುಲೈ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಭೀತಿ ಇನ್ನೂ ದೂರಾಗಿಲ್ಲ. ಈಗಲೂ ಪ್ರತಿದಿನ ನೂರರ ಸನಿಹಕ್ಕೆ ಪಾಸಿಟಿವ್ ಕೇಸ್‍ಗಳು ಪತ್ತೆಯಾಗುತ್ತಿವೆ. ಈ ನಡುವೆ ಈವರೆಗೂ ಕೋವಿಡ್‍ನಿಂದ ಮೃತರಾದವರ ಸಂಖ್ಯೆ ಸಾವಿರಕ್ಕಿಂತಲೂ ಹೆಚ್ಚಾಗಿದೆ.
ಕರೋನ ಎರಡನೆ ಅಲೆ ಮುಗಿಯಿತು ಎಂದು ಜನರು ನಿರ್ಲಕ್ಷ್ಯ ವಹಿಸುವಂತಿಲ್ಲ. ಯಾಕೆಂದರೆ ಸಾವಿನ ಸಂಖ್ಯೆ ಸಾವಿರ ದಾಟಿ ಮುಂದುವರೆಯುತ್ತಿದೆ. ಪ್ರತಿದಿನ ಹಲವು ಸೋಂಕಿತರು ಕೊನೆಯುಸಿರೆಳೆಯುತ್ತಿದ್ದಾರೆ.
ಸಾವಿನ ಸರಣಿ ಆರಂಭ
2020ರ ಮೇ 9ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕರೋನ ಸೋಂಕಿತರು ಪತ್ತೆಯಾದರು. ಅಹಮದಾಬಾದ್‍ನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ 9 ಮಂದಿಯಲ್ಲಿ ಕರೋನ ಕಾಣಿಸಿಕೊಂಡಿತ್ತು.
2020ರ ಜುಲೈ 16ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕು ಮೊದಲ ಬಲಿ ಪಡೆಯಿತು. ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲೆಯಲ್ಲಿ ಆತಂಕ ಹೆಚ್ಚಾಯಿತು.
ಮೊದಲ ಅಲೆಯಲ್ಲಿ 22 ಸಾವಿರ ಜನರು ಸೋಂಕಿಗೆ ಒಳಗಾಗಿದ್ದರು. ಡಿಸೆಂಬರ್ ಕೊನೆವರೆಗೆ 349 ಸೋಂಕಿತರು ಶಿವಮೊಗ್ಗದಲ್ಲಿ ಮೃತರಾಗಿದ್ದರು.
ಎರಡನೆ ಅಲೆಯಲ್ಲೂ ಮರಣ ಮೃದಂಗ
2021ರ ಫೆಬ್ರವರಿಯಲ್ಲಿ ಕರೋನ ಎರಡನೆ ಅಲೆ ಕಾಣಿಸಿಕೊಂಡಿತು. ಸೋಂಕಿತರ ಸಂಖ್ಯೆಯಂತೆಯೇ ಸಾವಿಗೀಡಾಗುವವರ ಪ್ರಮಾಣದಲ್ಲೂ ಏರಿಕೆಯಾಗುತ್ತಲೆ ಇದೆ. ಈ ಅವಧಿಯಲ್ಲಿ 41 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. 662 ಮಂದಿ ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ.
2021ರ ಮೇ ತಿಂಗಳಲ್ಲಿ ಅತ್ಯಧಿಕ ಸಾವು ಸಂಭವಿಸಿದೆ. ಈ ತಿಂಗಳ 28 ದಿನದಲ್ಲಿ 500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಕೋವಿಡ್ ಮತ್ತು ಸಾವಿನ ಭೀತಿ ಹೆಚ್ಚಲು ಇದು ಕಾರಣವಾಗಿತ್ತು.
ಎರಡನೆ ಅಲೆಯಲ್ಲಿ ಸಾವಿಗೆ ವೇಗ
ಜಿಲೆಯಲ್ಲಿ ಕರೋನಾಗೆ ಮೊದಲ ಸಾವು ಸಂಭವಿಸಿದ್ದು 2020ರ ಜುಲೈ 16ರಂದು. ಆಗಸ್ಟ್ 24ಕ್ಕೆ ಸಾವಿನ ಸಂಖ್ಯೆ 100ಕ್ಕೆ ತಲುಪಿತ್ತು. ಸೆಪ್ಟಂಬರ್ 13ಕ್ಕೆ ಸಾವಿನ ಸಂಖ್ಯೆ 200, ಆಗಸ್ಟ್ 2ರಂದು ಮೃತರ ಸಂಖ್ಯೆ 300ಕ್ಕೆ ಏರಿತು.
ಎರಡನೆ ಅಲೆಯಲ್ಲಿ 2021ರ ಮೇ 3ರಂದು ಜಿಲ್ಲೆಯ ಒಟ್ಟು ಸಾವಿನ ಸಂಖ್ಯೆ 400ಕ್ಕೆ ತಲುಪಿತ್ತು. ಮೇ 10ರಂದು 500 ಮಂದಿ ಮೃತರಾದರೆ, ಮೇ 17ರಂದು 600, ಮೇ 23ರಂದು 700ಕ್ಕೆ ತಲುಪಿತು. ಮೇ 31ರಂದು ಒಟ್ಟು ಸಾವಿನ ಸಂಖ್ಯೆ 800ಕ್ಕೆ ಮುಟ್ಟಿತು. ಜೂನ್ 11ರಂದು 900, ಜೂನ್ 6ರಂದು ಒಟ್ಟು ಮೃತರ ಸಂಖ್ಯೆ ಒಂದು ಸಾವಿರಕ್ಕೆ ತಲುಪಿತು.
ಕಳೆದ ಆರು ದಿನದಲ್ಲಿ 14 ಮಂದಿ ಮೃತರಾಗಿದ್ದಾರೆ. ಹಾಗಾಗಿ ಜೂನ್ 11ರ ವರದಿ ಪ್ರಕಾರ 1014 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ.
ಕೋವಿಡ್ ಸೋಂಕಿತರ ಸಾವಿನ ಪ್ರಮಾಣದಲ್ಲಿ ಸರ್ಕಾರ ತಪ್ಪು ಲೆಕ್ಕ ತೋರಿಸುತ್ತಿದೆ ಎಂಬ ಆಪಾದನೆಗಳಿವೆ. ಹೀಗಿದ್ದೂ ಸೋಂಕಿಗೆ ತುತ್ತಾಗಿ ಮೃತಪಟ್ಟವರ ಸಂಖ್ಯೆ ಸಾವಿರ ತಲುಪಿರುವುದು ಆತಂಕದ ಸಂಗತಿಯಾಗಿದೆ.
ಈಗಾಗಲೆ ಮೂರನೆ ಅಲೆ ಭೀತಿ ಶುರುವಾಗಿದೆ. ತಜ್ಞರು ಕೂಡ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಲಾಕ್ ಡೌನ್ ತೆರವಾಯಿತು ಎಂದು ಜನರು ಮೈಮರೆತರೆ ಮರಣ ಮೃದಂಗ ಮುಂದುವರೆಯು ಸಾಧ್ಯತೆ ಇದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200