
ಶಿವಮೊಗ್ಗ ಲೈವ್.ಕಾಂ | SHIMOGA | 7 ಮೇ 2020
ಶಿವಮೊಗ್ಗ ನಗರದ ಕೆಲವು ಕಡೆ ಪೊಲೀಸರು ದಿಢೀರ್ ಸೀಲ್ಡೌನ್ ಮಾಡಿದ್ದಾರೆ. ಸಂಜೆ ವೇಳೆಗೆ ಕೆಲವು ಏರಿಯಾಗಳನ್ನು ಸೀಲ್ಡೌನ್ ಮಾಡಿದ್ದರಿಂದ ಜನರು ಭೀತಿಗೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹದ ಸುದ್ದಿಗಳು ಹರಿದಾಡಿವೆ. ಆದರೆ ಪೊಲೀಸರು ಇದನ್ನ ‘ಡೆಮೊ ಸೀಲ್ ಡೌನ್’ ಎಂದು ಬಣ್ಣಿಸಿದ್ದಾರೆ.
ಎಲ್ಲೆಲ್ಲಿ ಡೆಮೊ ಸೀಲ್ ಡೌನ್ ಮಾಡಲಾಗಿದೆ?
ನಗರದ ಸೀಗೆಹಟ್ಟಿ, ಭಾರತಿ ಕಾಲೋನಿ, ಸಿದ್ದಯ್ಯ ರಸ್ತೆ, ಆರ್.ಎಂ.ಎಲ್ ನಗರದಲ್ಲಿಸೀಲ್ಡೌನ್ ಮಾಡಲಾಗಿದೆ. ಸಂಜೆ ವೇಳೆಗೆ ಈ ಬಡಾವಣೆಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ವಾಹನಗಳ ಓಡಾಟ, ಜನ ಸಂಚಾರಕ್ಕೂ ನಿರ್ಬಂಧ ವಿಧಿಸಲಾಯಿತು. ಈ ಬೆಳವಣಿಗೆ ಸ್ಥಳೀಯರಲ್ಲಿ ಆತಂಕ ಮೂಡಿಸಿತು.

ಪೊಲೀಸ್ ಇಲಾಖೆ ಏನು ಹೇಳ್ತಿದೆ?
ನಗರದ ಕೆಲವು ಬಡಾವಣೆಯಲ್ಲಿ ದಿಢೀರ್ ಸೀಲ್ಡೌನ್ ಮಾಡಿರುವುದನ್ನು ಪೊಲೀಸರು ‘ಡೆಮೊ ಸೀಲ್ಡೌನ್’ ಎಂದು ಬಣ್ಣಿಸಿದ್ದಾರೆ. ಇದು ಅಣಕು ಸೀಲ್ಡೌನ್. ಒಂದು ವೇಳೆ ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾದರೆ ಬಡಾವಣೆಗಳನ್ನು ಯಾವ ರೀತಿ ಸೀಲ್ಡೌನ್ ಮಾಡಬೇಕು ಎಂಬುದನ್ನು ಅರಿಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಜನರು ಆತಂಕಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

‘ಶಿವಮೊಗ್ಗದಲ್ಲಿ ಪ್ರತಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಸೀಲ್ ಡೌನ್ ಇರಲಿದೆ. ಇದರ ಹೊರತು ಹೊಸತೇನು ಇಲ್ಲ. ಯಾವುದೇ ಅತಂಕ ಬೇಡ’
ಕೆ.ಎಂ.ಶಾಂತರಾಜು , ಜಿಲ್ಲಾ ರಕ್ಷಣಾಧಿಕಾರಿ
ವಾಟ್ಸಪ್, ಫೇಸ್ಬುಕ್ನಲ್ಲಿ ಊಹಾಪೋಹ
ಅಣಕು ಸೀಲ್ಡೌನ್ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹ ಹರಡಿದೆ. ಇದರಿಂದ ಜನರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಇತ್ತ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಶಿವಮೊಗ್ಗದಲ್ಲಿ ಎಲ್ಲವು ನೆಗೆಟಿವ್
ಜಿಲ್ಲೆಯಾದ್ಯಂತ ಈತನಕ 2235 ಮಂದಿ ಕರೋನ ಟೆಸ್ಟ್ಗೆ ಒಳಗಾಗಿದ್ದಾರೆ. ಮೇ 7ರಂದು ಸಂಜೆ 5.50ರವರೆಗಿನ ರಿಪೋರ್ಟ್ ಪ್ರಕಾರ, 2125 ಮಂದಿಯ ರಿಪೋರ್ಟ್ ನೆಗೆಟಿವ್ ಬಂದಿದೆ. ಮೇ 7ರಂದು 139 ಮಂದಿ ಪರೀಕ್ಷೆಗೆ ಒಳಗಾಗಿದ್ದು, 110 ಮಂದಿಯ ರಿಪೋರ್ಟ್ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ವರದಿಯಲ್ಲಿ ತಿಳಿಸಿದೆ.


ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200