ಶಿವಮೊಗ್ಗ ಕಮಿಷನರ್‌ಗೆ ಪ್ರತಿ ದಿನ ಊಟ ಬಡಿಸುತ್ತಿದ್ದ ನೌಕರ, ನಿವೃತ್ತಿ ದಿನ ಮಧ್ಯಾಹ್ನ ಆಗಿದ್ದೆ ಬೇರೆ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE | 1 AUGUST 2023

SHIMOGA : ತಮ್ಮ ಆಪ್ತ ಶಾಖೆಯ ನೌಕರೊಬ್ಬರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಕಮಿಷನರ್‌ ವಿಭಿನ್ನವಾಗಿ ಬೀಳ್ಕೊಡುಗೆ (send off) ನೀಡಿದ್ದಾರೆ. ನಿವೃತ್ತ ನೌಕರನಿಗೆ ತಾವೇ ಖುದ್ದು ಸಿಹಿ ಊಟ ಬಡಿಸಿ ಮಾದರಿಯಾಗಿದ್ದಾರೆ.

Different-send-of-for-Kariyanna-in-Shimoga-Palike-Commissioner-office-by-Mayanna-gowda.

ಪಾಲಿಕೆ ಕಮಿಷನರ್‌ ಆಪ್ತ ಶಾಖೆ ನೌಕರ ಕರಿಯಣ್ಣ ಜು.31ರಂದು ನಿವೃತ್ತರಾದರು. ಕಮಿಷನರ್‌ ಮಾಯಣ್ಣಗೌಡ ಅವರಿಗೆ ಕರಿಯಣ್ಣ ಅವರು ಪ್ರತಿ ದಿನ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಿದ್ದರು.

ಸಿಹಿ ಊಟ ತರಿಸಿ ಬಡಿಸಿದರು

ಜು.31ರ ಮಧ್ಯಾಹ್ನ ಕಮಿಷನರ್‌ ಮಾಯಣ್ಣಗೌಡ ಅವರು ಕರಿಯಣ್ಣ ಅವರಿಗಾಗಿ ಸಿಹಿ ಊಟ ತರಿಸಿದರು. ಊಟಕ್ಕೆ ಬರುವಂತೆ ಕರೆದು ಅಪ್ಪುಗೆ ನೀಡಿ, ತಾವು ಕೂರುತ್ತಿದ್ದ ಜಾಗದಲ್ಲಿ ಕರಿಯಣ್ಣ ಅವರನ್ನು ಕೂರಿಸಿ, ಕಮಿಷನರ್‌ ಅವರೆ ಊಟ ಬಡಿಸಿದರು. ಇನ್ನಷ್ಟು ಊಟ ಮಾಡಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ – ಬೀಳ್ಕೊಡುಗೆ ಬಳಿಕ ಕಚೇರಿಯಿಂದ ಹೊರ ಬಂದ ನೌಕರನಿಗೆ ಕಾದಿತ್ತು ಅಚ್ಚರಿ, ಮಾದರಿಯಾದರು ಹಿರಿಯ ಅಧಿಕಾರಿ

ಕರಿಯಣ್ಣ ಅವರ ವೃತ್ತಿ ಜೀವನದ ಕೊನೆಯ ದಿನವನ್ನು ಕಮಿಷನರ್‌ ಮಾಯಣ್ಣಗೌಡ ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದರು. ಕಮಿಷನರ್‌ ನಡೆಗೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PARISHRAMA NEET Academy Pradeep Eshwar

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಆಗಷ್ಟ್ 1, 2023

Leave a Comment