ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
ನಗರದ ಖ್ಯಾತ ವೈದ್ಯ ಧನಂಜಯ ಸರ್ಜಿ ಅವರು ರಾಜಕೀಯ ಪ್ರವೇಶದ ಮುನ್ಸೂಚನೆ ನೀಡಿದ್ದಾರೆ. ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ವಿಧಾನಸಭೆ ಚುನಾವಣೆಗೆ ಡಾ.ಧನಂಜಯ ಸರ್ಜಿ (Dhananjaya Sarji) ಸ್ಪರ್ಧಿಸುತ್ತಾರಾ? ಯಾವ ಪಕ್ಷದಿಂದ ಅಖಾಡಕ್ಕಿಳಿಯುತ್ತಾರೆ ಅನ್ನುವ ಕುತೂಹಲ ಮೂಡಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಡಾ.ಧನಂಜಯ ಸರ್ಜಿ ಅವರು ತಮ್ಮ ಹುಟ್ಟುಹಬ್ಬದ ದಿನ ಆಯೋಜಿಸಿದ್ದ ‘ಸ್ನೇಹ ಮಿಲನ’ ಕಾರ್ಯಕ್ರಮದಲ್ಲಿ, ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ. ನಿರೀಕ್ಷಿತ ಬೆಳವಣಿಗೆಯಾದರೂ ಅಧಿಕೃತ ಹೇಳಿಕೆ ಹೊರಬಿದ್ದಿರುವುದು ಇದೆ ಮೊದಲು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಡಾ.ಧನಂಜಯ ಸರ್ಜಿ ಹೇಳಿದ್ದೇನು?
ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಧನಂಜಯ ಸರ್ಜಿ (Dhananjaya Sarji) ಅವರು, ‘ವೈದ್ಯಕೀಯ ವೃತ್ತಿಯಲ್ಲಿ ನಿಸ್ವಾರ್ಥ ಸೇವೆಯಿಂದಾಗಿ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು. ಆದರೀಗ ಇಷ್ಟೊಂದು ಫ್ಲೆಕ್ಸ್ ಹಾಕುತ್ತಿರುವುದೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಕುಟುಂಬದವರು ಸೇರಿದಂತೆ ಹಲವರು, ಮುಂದಿನ ಹೆಜ್ಜೆ ಕುರಿತು ಪ್ರಶ್ನೆ ಮಾಡುತ್ತಿದ್ದಾರೆ. ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆ ನಿಮಗಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಎಲ್ಲರೂ ನಮ್ಮ ಕೆಲಸ, ಕುಟುಂಬ ಎಂದು ಯೋಚಿಸಿದರೆ ಜಿಲ್ಲೆ, ರಾಜ್ಯ, ದೇಶದ ಕಥೆ ಏನಾಗುತ್ತದೆ’ ಎಂದು ಪ್ರಶ್ನಿಸಿದ್ದಾರೆ.
‘ನರೇಂದ್ರ ಮೋದಿ ಅವರು ವಿದ್ಯಾವಂತರು, ನಿಷ್ಠಾವಂತರು ಬರಬೇಕು ಎಂದು ಹೇಳುತ್ತಿದ್ದಾರೆ. ಆದರೆ ನಮ್ಮೊಂದಿಗೆ ಹಲವರು ಚರ್ಚೆ ಮಾಡಿದರು, ಘರ್ಷಣೆಗಳಾದವು, ಒತ್ತಡ ಹಾಕಿದರು. ಈಗ ಒಂದು ಹೊಸ ಜೀವನ ಶುರು ಮಾಡಬೇಕು ಎಂದುಕೊಂಡಿದ್ದೇನೆ’ ಎಂದು ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ?
ಡಾ.ಧನಂಜಯ ಸರ್ಜಿ ಅವರ ‘ಹೊಸ ಜೀವನ’ದ ಹೇಳಿಕೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಡಾ.ಧನಂಜಯ ಸರ್ಜಿ ಸ್ಪರ್ಧೆ ಮಾಡತ್ತಾರಾ ಎಂಬ ಕುತೂಹಲ ಮೂಡಿದೆ. ಇದರ ಜೊತೆಗೆ ಹಲವು ಆಯಾಮದ ಚರ್ಚೆಯನ್ನು ಹುಟ್ಟುಹಾಕಿದೆ.
ಏನೇನೆಲ್ಲೆ ಚರ್ಚೆ ನಡೆಯುತ್ತಿದೆ?
ರಾಜಕೀಯಕ್ಕೆ ಹೊಸ ಮುಖ | ಡಾ.ಧನಂಜಯ ಸರ್ಜಿ ಅವರ ಹೆಸರು ಮತ್ತು ಮುಖ ಪರಿಚಯ ಇಲ್ಲದವರಿಲ್ಲ. ಆದರೆ ರಾಜಕಾರಣಕ್ಕೆ ಇವರದ್ದು ಹೊಸ ಮುಖ. ರಾಜಕೀಯ, ಚುನಾವಣಾ ಕಣ ಸರ್ಜಿ ಅವರಿಗೆ ನವ ಅನುಭವ.
ಎಲ್ಲರ ಅಭ್ಯರ್ಥಿ | ಡಾ.ಧನಂಜಯ ಸರ್ಜಿ ಅವರು ಜನರಿಗೆ ಹತ್ತಿರುವಾಗುತ್ತಿರುವ ರೀತಿಯು ಗಮನ ಸೆಳೆಯುತ್ತಿದೆ. ವಿವಿಧ ಸಾಮಾಜಿಕ ಚಟುವಟಿಕೆ, ಪ್ರಗತಿಪರರೊಂದಿಗಿನ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಕಾರ್ಯಕ್ರಮದ ಮೂಲಕ ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ. ಈ ಮೂಲಕ ತಾವು ಎಲ್ಲರ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.
ಪಕ್ಷವೋ? ಸ್ವತಂತ್ರ ಅಭ್ಯರ್ಥಿಯೋ? | ಪ್ರಸ್ತುತ ಸ್ವತಂತ್ರ ರಾಜಕೀಯ ಸುಲಭದ್ದಲ್ಲ. ಆದರೆ ಡಾ. ಧನಂಜಯ ಸರ್ಜಿ ಅವರು ಸ್ವತಂತ್ರವಾಗಿಯೆ ರಾಜಕಾರಣ ಮಾಡುತ್ತಾರೋ, ಪಕ್ಷ ಸೇರ್ಪಡೆಯಾಗುತ್ತಾರೋ ಎಂಬ ಕುತೂಹಲವಿದೆ.
ಡಾ.ಧನಂಜಯ ಸರ್ಜಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಪ್ರಮುಖ ಪಟ್ಟಾಭಿರಾಮ್, ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಸ್.ರುದ್ರೇಗೌಡ ಅವರು ಉಪಸ್ಥಿತರಿದ್ದರು. ಹಾಗಾಗಿ ಡಾ. ಧನಂಜಯ ಸರ್ಜಿ (Dhananjaya Sarji) ಬಿಜೆಪಿ ಸೇರುತ್ತಾರಾ ಎಂಬ ಚರ್ಚೆ ಇದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಲ್ಲಿಯು ಡಾ.ಸರ್ಜಿ ಅವರಿಗೆ ಮುಕ್ತ ಅವಕಾಶವಿದೆ ಅನ್ನುವುದನ್ನು ಪಕ್ಷದ ಮುಖಂಡರೆ ಹೇಳುತ್ತಿದ್ದಾರೆ.
ಸ್ವತಂತ್ರದಿಂದ ಕಾಂಗ್ರೆಸ್ ಗೆ ಲಾಭ | ಡಾ.ಧನಂಜಯ ಸರ್ಜಿ ಅವರು ಈತನಕ ಯಾವ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ. ಎಲ್ಲಾ ಪಕ್ಷಗಳೊಂದಿಗೆ ಸಮಾನ ಅಂತರ ಕಾಯ್ದುಕೊಂಡಿದ್ದಾರೆ. ಇತ್ತ ಬಿಜೆಪಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮತ್ತೊಮ್ಮೆ ಕಣಕ್ಕಿಳಿಯುವ ಉಮೇದಿನಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ. ಹಾಗಾಗಿ ಡಾ.ಧನಂಜಯ ಸರ್ಜಿ ಅವರು ಸ್ವತಂತ್ರವಾಗಿ ಸ್ಪರ್ಧಿಸುತ್ತಾರಾ ಎಂಬ ಚರ್ಚೆ ಇದೆ.
ಸವಾಲುಗಳ ಒಂದೆರಡಲ್ಲ | ಡಾ.ಧನಂಜಯ ಸರ್ಜಿ (Dhananjaya Sarji) ಅವರು ರಾಜಕೀಯ ಪ್ರವೇಶದ ಹೇಳಿಕೆ ಸಂಚಲನ ಮೂಡಿಸಿದೆ. ಆದರೆ ಅವರ ಮುಂದೆ ಸಾಲು ಸಾಲು ಸವಾಲುಗಳೂ ಇದ್ದಾವೆ. ರಾಜಕೀಯ ಅವರಿಗೆ ತೀರಾ ಹೊಸತು. ಈ ಕ್ಷೇತ್ರದ ಆಳ, ಅಗಲ ಅಳೆತ ಅಷ್ಟು ಸುಲಭದ್ದಲ್ಲ. ಸ್ವತಂತ್ರವಾಗಿ ಕಣಕ್ಕಿಳಿದರೆ ಏಕಾಂಗಿಯಾಗಿಯೆ ಸವಾಲು ಎದುರಿಸಬೇಕು. ಪಕ್ಷ ಸೇರ್ಪಡೆಯಾದರೆ ಮುಖಂಡರು, ಕಾರ್ಯಕರ್ತರು ಮತ್ತು ಪಕ್ಷದ ಸಿದ್ಧಾಂತಕ್ಕೆ ತಕ್ಕ ಹಾಗೆ ಕೆಲಸ ಮಾಡುವ ಅನಿವಾರ್ಯತೆ. ಇವುಗಳನ್ನು ಡಾ.ಧನಂಜಯ ಸರ್ಜಿ ಅವರು ನಿಭಾಯಿಸುವುದು ಅಷ್ಟು ಸುಲಭವಾಗುತ್ತದೆಯೆ ಗೊತ್ತಿಲ್ಲ.
ಡಾ.ಧನಂಜಯ ಸರ್ಜಿ ಅವರ ‘ಹೊಸ ಜೀವನ’, ರಾಜಕೀಯ ಪ್ರವೇಶದ ಹೇಳಿಕೆ ಸಂಚಲನ ಮೂಡಿಸಿದೆ. ಪಕ್ಷದ ವಲಯದಲ್ಲಿ ಅವರ ಕುರಿತ ಚರ್ಚೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಡಾ.ಧನಂಜಯ ಸರ್ಜಿ (Dhananjaya Sarji) ಅವರು ತಮ್ಮ ಹೆಸರು ಮತ್ತು ತಮ್ಮನ್ನು ಬ್ರಾಂಡ್ ಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದು, ಅವರು ವಿಧಾನಸಭೆ ಚುನಾವಣೆಗೆ ಧುಮುಕುವ ಸಾಧ್ಯತೆಯ ಕುರಿತು ಸಾರ್ವಜನಿಕರಲ್ಲಿ ಚರ್ಚೆ ಮತ್ತು ಕುತೂಹಲ ಹುಟ್ಟಿಸಿದೆ.
ALSO READ | ಶಿವಮೊಗ್ಗದ ಒಂದು ರೈಲು ಸೇರಿ ರಾಜ್ಯದ 5 ರೈಲುಗಳಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಳ