ಡಿಕೆಶಿ ಪ್ರಮಾಣವಚನ ಥಿಯೇಟರ್‌ನಲ್ಲಿ ಲೈವ್‌, ಹೌಸ್‌ಫುಲ್‌ ಪ್ರದರ್ಶನ, ಶಿವಮೊಗ್ಗದಲ್ಲಿ ಹೇಗಿತ್ತು ಸಂಭ್ರಮ?

ಶಿವಮೊಗ್ಗ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ ಕ್ಷಣಕ್ಕೆ ಶಿವಮೊಗ್ಗ ನಗರವು ಸಾಕ್ಷಿಯಾಯಿತು. ನಗರದಲ್ಲಿ ಅಳವಡಿಸಲಾಗಿದ್ದ ಬೃಹತ್ ಎಲ್‌ಇಡಿ ಪರದೆ, ಚಿತ್ರಮಂದಿರದ ಬೆಳ್ಳಿಪರದೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಟಿವಿ ಪರದೆಗಳ ಮೂಲಕ ಸಾರ್ವಜನಿಕರು ಮತ್ತು ಅಭಿಮಾನಿಗಳು ಪದಗ್ರಹಣ ಸಮಾರಂಭವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದರು.

ಎಲ್‌ಇಡಿ ಪರದೆ, ಹೋಳಿಗೆ ವಿತರಣೆ

ನಗರದ ಶಿವಪ್ಪ ನಾಯಕ ಪ್ರತಿಮೆ ಮುಂಭಾಗ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಸಾರ್ವಜನಿಕರಿಗಾಗಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆಯಲ್ಲಿ ಡಿ.ಕೆ.ಶಿವಕುಮಾರ್‌ ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು. ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸಿದರು.

DK-Shivakumar-Oath-taking-as-Chief-Minister-shown-in-film-theater.

ಪರದೆಯ ಮೇಲೆ ಡಿ.ಕೆ. ಶಿವಕುಮಾರ್ ಕಾಣಿಸಿಕೊಂಡಾಗಲೆಲ್ಲಾ ಅಭಿಮಾನಿಗಳು ಘೋಷಣೆ ಕೂಗಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರ ನಾಯಕರು ಕಾಣಿಸಿದಾಗಲೂ ಜಯಘೋಷ ಮೊಳಗಿದವು. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಅಲ್ಲಿದ್ದ ಸಾರ್ವಜನಿಕರಿಗೆ ಕಾಂಗ್ರೆಸ್ ಮುಖಂಡರು ಹೋಳಿಗೆ ವಿತರಿಸಿ ಸಿಹಿ ಹಂಚಿದರು.

ಬೆಳ್ಳಿ ಪರೆದಯಲ್ಲೂ ಪದಗ್ರಹಣ ಲೈವ್‌

ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರ ಪದಗ್ರಹಣ ಸಮಾರಂಭವನ್ನು ಚಿತ್ರಮಂದಿರದ ದೊಡ್ಡ ಪರದೆ ಮೇಲೆ ಲೈವ್ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ನಗರದ ಮಂಜುನಾಥ ಚಿತ್ರಮಂದಿರದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದ ನೇರ ಪ್ರಸಾರವನ್ನು ಆಯೋಜಿಸಲಾಗಿತ್ತು.

Kalleshwara-Enterprises.webp

ಈ ಅಪರೂಪದ ಕ್ಷಣವನ್ನು ಕಣ್ಣುಂಬಿಕೊಳ್ಳಲು ಚಿತ್ರಮಂದಿರ ಸಂಪೂರ್ಣ ಹೌಸ್‌ಫುಲ್ ಆಗಿತ್ತು. ಸಿನಿಮಾ ಪ್ರದರ್ಶನದಂತೆ ಕಾಂಗ್ರೆಸ್‌ ಕಾರ್ಯಕರ್ತರು, ಡಿ.ಕೆ.ಶಿವಕುಮಾರ್‌ ಅವರ ಅಭಿಮಾನಿಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದರು. ಅಲ್ಲದೆ, ಕಾರ್ಯಕ್ರಮದುದ್ದಕ್ಕೂ ನೆರೆದಿದ್ದ ನೂರಾರು ಕಾರ್ಯಕರ್ತರು ಮತ್ತು ಮುಖಂಡರು ಚಿತ್ರಮಂದಿರದಲ್ಲೇ ಡಿ.ಕೆ. ಶಿವಕುಮಾರ್ ಪರವಾಗಿ ಘೋಷಣೆಗಳನ್ನು ಕೂಗಿದರು.

ಬಸ್‌ ನಿಲ್ದಾಣದಲ್ಲು ಪದಗ್ರಹಣ ಲೈವ್‌

ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಟಿವಿಗಳಲ್ಲಿ ಪ್ರಮಾಣವಚನ ಲೈವ್‌ ಪ್ರಸಾರ

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೂ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ನೇರ ಪ್ರಸಾರಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬಸ್ ನಿಲ್ದಾಣದ ಆವರಣದಲ್ಲಿರುವ ಬೃಹತ್ ಟಿವಿ ಪರದೆಗಳಲ್ಲಿ ಕಾರ್ಯಕ್ರಮವನ್ನು ಲೈವ್ ಆಗಿ ಬಿತ್ತರಿಸಲಾಯಿತು. ಬಸ್‌ಗಳಿಗಾಗಿ ಕಾಯುತ್ತಿದ್ದ ನೂರಾರು ಪ್ರಯಾಣಿಕರು ಹಾಗೂ ಕರ್ತವ್ಯದಲ್ಲಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅತ್ಯಂತ ಆಸಕ್ತಿಯಿಂದ ಇಡೀ ಪದಗ್ರಹಣ ಸಮಾರಂಭವನ್ನು ಕಣ್ತುಂಬಿಕೊಂಡರು. ಜನರಿಗೆ ಹೋಳಿಗೆ ವಿತರಣೆ ವಿಡಿಯೋ ಕೆಳಗಿದೆ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp