ಗಾಂಧಿ ಪಾರ್ಕ್ ನಲ್ಲಿ ಡಾಗ್ ಶೋ, ಶ್ವಾನಗಳ ಆಟ, ಚಿನ್ನಾಟ, ಸೆಲ್ಫಿಗೆ ಮುಗಿಬಿದ್ದ ಜನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಶಿವಮೊಗ್ಗ ದಸರಾ ಅಂಗವಾಗಿ ಗಾಂಧಿ ಪಾರ್ಕ್ ನಲ್ಲಿ ಶ್ವಾನ ಪ್ರದರ್ಶನ (DOG SHOW) ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ವಿವಿಧ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

Shimoga Nanjappa Hospital

ವಿವಿಧ ತಳಿಯ ಶ್ವಾನಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಖ್ಯಾತ ತೀರ್ಪುಗಾರರು ಶ್ವಾನಗಳ ಚಟುವಟಿಕೆ ಗಮನಿಸಿ ತೀರ್ಪು ಘೋಷಿಸಿದ್ದು, ಬಹುಮಾನ ವಿತರಿಸಲಾಯಿತು.

ಶ್ವಾನಗಳನ್ನು ಕಂಡು ಮಕ್ಕಳು ಖುಷಿ DOG SHOW

ನಾನಾ ತಳಿಯ ಶ್ವಾನಗಳನ್ನು ಪ್ರದರ್ಶನಕ್ಕೆ (DOG SHOW) ಕರೆತರಲಾಗಿತ್ತು. ಅವುಗಳನ್ನು ಕಂಡು ಮಕ್ಕಳು ಖುಷಿ ಪಟ್ಟರು. ಹಲವರು ತಮ್ಮ ಮಕ್ಕಳನ್ನು ವಿವಿಧ ತಳಿಯ ಶ್ವಾನಗಳ ಪಕ್ಕದಲ್ಲಿ ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಂಡರು. ಮಹಿಳೆಯರು ಕೂಡ ಶ್ವಾನಗಳ ಜೊತೆಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.

ರಿಂಗ್ ನಲ್ಲಿ ಶ್ವಾನಗಳ ಆಟ, ಚಿನ್ನಾಟ DOG SHOW

ಇತ್ತ ಶ್ವಾನಗಳ ಸ್ಪರ್ಧೆಗೆ ಸಿದ್ಧಪಡಿಸಲಾಗಿದ್ದ ರಿಂಗ್ ನಲ್ಲಿ ಶ್ವಾನಗಳ ಆಟ, ಚಿನ್ನಾಟ ನೋಡುಗರನ್ನು ಸೆಳೆಯಿತು. ಶ್ವಾನಗಳು ತಮ್ಮ ತರಬೇತುದಾರರು ಹೇಳಿದ್ದನ್ನು ಕೇಳುವುದು ಅಥವಾ ಕೇಳದಯೆ ಅತ್ತಿತ್ತ ಓಡಾಡುವುದು ನೆರೆದಿದ್ದವರು ನಗೆಗಡಲಲ್ಲಿ ತೇಲಿಸಿತು.

ಬೆಕ್ಕುಗಳು ಜೊತೆ ಸೆಲ್ಫಿ

ವಿವಿಧ ತಳಿಯ ಬೆಕ್ಕುಗಳು ಕೂಡ ಪ್ರದರ್ಶನದಲ್ಲಿ ಇದ್ದವು. ಇವುಗಳ ಜೊತೆಗು ಜನರು ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡರು. ಕೆಲವರು ಬೆಕ್ಕುಗಳನ್ನು ಖರೀದಿಸಿದರು.

ಇನ್ನೊಂದಡೆ, ‘ಶ್ವಾನಗಳನ್ನು ಖರೀದಿಸಬೇಡಿ ಬೀದಿ ನಾಯಿಗಳನ್ನು ದತ್ತು ಸ್ವೀಕರಿಸಿ’ ಎಂದು ಪ್ರಾಣಿ ದಯಾ ಸಂಘಟನೆಯವರು ಮನವಿ ಮಾಡಿದರು. ಬೀದಿ ನಾಯಿ ಮರಿಗಳನ್ನು ದತ್ತು ಸ್ವೀಕರಿಸಿದವರಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಮರಿಗಳನ್ನು ಹಸ್ತಾಂತರ ಮಾಡಿದರು.

dog show in Shimoga

dog show in Shimoga

dog show in Shimoga

dog show in Shimoga

dog show in Shimoga

RL Jalappa Academy

ಕ್ಲಿಕ್ ಮಾಡಿ ಇದನ್ನೂ ಓದಿ 10 ಕೋಟಿ ರೂ. ನಾಯಿ ನೋಡಲು ಗಾಂಧಿ ಪಾರ್ಕಿನಲ್ಲಿ ಮುಗಿಬಿದ್ದ ಜನ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 2, 2022

Leave a Comment