ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 1 ಏಪ್ರಿಲ್ 2020
ಕರೋನ ಲಾಕ್’ಡೌನ್ ಹಿನ್ನೆಲೆಯಲ್ಲಿ ಆಹಾರ ಸಿಗದೆ ಕೂಲಿ ಕಾರ್ಮಿಕರು, ನಿರ್ಗತಿಕರು ಒದ್ದಾಡುತ್ತಿದ್ದಾರೆ. ಹಸಿವು ತಾಳದೆ ಒದ್ದಾಡುತ್ತಿದ್ದವರಿಗೆ, ಕೆಲವು ಸಂಘ ಸಂಸ್ಥೆಗಳು, ಸಾರ್ವಜನಿಕರು ಊಟ, ತಿಂಡಿ ಒದಗಿಸುತ್ತಿದ್ದಾರೆ. ಇನ್ಮುಂದೆ ಹೀಗೆ ಮಾಡಿದರೆ, ಕೇಸ್ ದಾಖಲಿಸಲಾಗುತ್ತದೆ ಅಂತಾ ಶಿವಮೊಗ್ಗ ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಮಹಾನಗರ ಪಾಲಿಕೆ ಕಮಿಷನರ್ ಚಿದಾನಂದ ವಟಾರೆ, ಯಾವುದೇ ಕಾರಣಕ್ಕೂ ಸಂಘ ಸಂಸ್ಥೆಗಳು, ಸಾರ್ವಜನಿಕರು, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಊಟ ನೀಡುವಂತಿಲ್ಲ. ಆಹಾರ ಸಾಮಗ್ರಿಗಳ ಕಿಟ್ ಕೂಡ ವಿತರಿಸುವಂತಿಲ್ಲ ಎಂದು ಆದೇಶಿಸಿದ್ದಾರೆ.
ಪಾಲಿಕೆಗೆ ತಂದು ತಲುಪಿಸಿ
ಆಹಾರ ಸಾಮಗ್ರಿ ಅಥವಾ ಆಹಾರವನ್ನು ನೇರವಾಗಿ ವಿತರಿಸುವ ಬದಲು ಮಹಾನಗರ ಪಾಲಿಕೆಗೆ ತಂದು ಕೊಟ್ಟು, ಸ್ವೀಕೃತಿ ಪಡೆಯಬೇಕು ಎಂದು ಸೂಚಿಸಿದ್ದಾರೆ. ಒಂದು ವೇಳೆ ಲಾಕ್’ಡೌನ್ ನಿರ್ದೇಶನ ಉಲ್ಲಂಘಿಸಿ ಆಹಾರ, ಆಹಾರ ಸಾಮಗ್ರಿ ವಿತರಿಸಿದರೆ ಐಪಿಸಿ ಸೆಕ್ಷನ್ 269, 270, 271 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಕಮಿಷನರ್ ಆದೇಶಕ್ಕೆ ತೀವ್ರ ವಿರೋಧ
ಇನ್ನು, ಕಮಿಷನರ್ ಆದೇಶದಕ್ಕೆ ಸಂಘ ಸಂಸ್ಥೆಗಳು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವ ಕುರಿತು ಯೋಜಿಸಿದ್ದಾರೆ. ಶಿವಮೊಗ್ಗದ ನಗರದ ಹಲವು ಕಡೆಗೆ ಈಗಲು ನಿರ್ಗತಿಕರು ಇದ್ದಾರೆ. ಇವರಿಗೆ ಸಂಘ, ಸಂಸ್ಥೆಗಳು, ಸಾರ್ವಜನಿಕರೆ ತಿಂಡಿ, ಊಟ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಮಿಷನರ್ ಆದೇಶಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಂತಾ ಕಾಲ ಬಂತಪ್ಪ…ಲಾಕ್ ಡೌನ್ ಉದ್ದೇಶಾನೇ ಜನರ ಜೀವ ಉಳಿಸುವುದು, ಈ ರೀತಿ ಆಹಾರ ವಿತರಿಸಿದರೆ ವೈರಸ್ ಹರಡಿ ತೊಂದರೆ ಆಗುತ್ತೆ ಅನ್ನುವುದು ನಿಜ..ಆದರೆ ಹಸಿವಿನಿಂದ ಸಾಯ್ತಾರಲ್ಲ, ಅದಕ್ಕೆ ಆಹಾರವನ್ನ ಪಾಲಿಕೆಗೆ ಕೊಟ್ಟು,ಅವರು ಅದನ್ನ ಹಸಿದವರಿಗೆ ಕೊಡುವಷ್ಟರಲ್ಲಿ, ಹಸಿದುಕೊಡವರ ಜೀವ ಹರೋಹರ..ಅದನ್ನೇ ಸಂಘ ಸಂಸ್ಥೆಯವರಿಗೆ ಕೆಲವು ನಿರ್ದೇಶನಗಳನ್ನ ನೀಡಿ, ಸಿಬ್ಬಂಧಿಯೊಬ್ಬರ ಉಸ್ತುವಾರಿಯಲ್ಲಿ ವಿತರಿಸಿ ಹಸಿದ ಜೀವಕ್ಕೆ ಸಾಂತ್ವನ ಹೇಳಬಹುದಲ್ವಾ…