ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ತೆರೆಯಸಿರಿ ಕಲಾಸಂಘದ ವತಿಯಿಂದ ಏಪ್ರಿಲ್ 3ರಿಂದ 19ರವರೆಗೆ ನಗರದ ಬಸವನಹಳ್ಳಿ ಮಹಿಳಾಶ್ರಮದಲ್ಲಿ ಬೇಸಿಗೆ ರಂಗ ಶಿಬಿರ (summer camp) ಆಯೋಜಿಸಲಾಗಿದೆ.
ಶಿಬಿರದಲ್ಲಿ ಮಕ್ಕಳಿಗೆ ನಾಟಕ ತಯಾರಿ ಮತ್ತು ಪ್ರದರ್ಶನ, ಯಕ್ಷಗಾನ ಹೆಜ್ಜೆಗಳು, ನವರಸಾಭಿನಯ, ಮೆಮೊರಿ ಟೆಕ್ನಿಕ್, 100 ಇಯರ್ ಕ್ಯಾಲೆಂಡರ್, ರಂಗಾಟಗಳು, ಯೋಗ ಮತ್ತು ವ್ಯಾಯಾಮ, ಜನಪದ ಜಾತ್ರೆ, ಡೊಳ್ಳು ಕುಣಿತ, ವೀರಗಾಸೆ, ಪಟ್ಟದ ಕುಣಿತ, ಪೂಜಾ ಕುಣಿತ, ಕಥೆ, ಕವನ, ದೇಹ ಭಾಷೆ, ರಂಗಗೀತೆಗಳು ಸೇರಿದಂತೆ ವಿಶೇಷ ವಿಷಯಗಳ ಕುರಿತು ಹೇಳಿ ಕೊಡಲಾಗುವುದು.
ಇದನ್ನೂ ಓದಿ : ಸೊರಬಕ್ಕೆ ನೂತನ ಜಲವಾಹನ, ಪೊಲೀಸ್ ಜೀಪ್‌ಗಳು
ನಿಗದಿತ ಶುಲ್ಕ ನೀಡಿ ರಂಗತರಬೇತಿ ಶಿಬಿರಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. 6 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಪ್ರತಿಭಾ ನೀನಾಸಂ ಅವರ ದೂರವಾಣಿ ಸಂಖ್ಯೆ 7760135885 ಮತ್ತು 7760121024 ಮಾಡಿಕೊಳ್ಳಬಹುದಾಗಿದೆ.

LATEST NEWS
- ಶಿವಮೊಗ್ಗದಲ್ಲಿ ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 31 ಮಾರ್ಚ್ 2026

- ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಬೇಸಿಗೆ ಶಿಬಿರ, ಸರ್ಕಾರಿ ಶಾಲೆ ಮಕ್ಕಳಿಗೆ ಶೇ.50ರಷ್ಟು ರಿಯಾಯಿತಿ

- ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಗೆ ಪ್ರಶಸ್ತಿ

- ಹಾಸ್ಟೆಲ್‌ನಲ್ಲಿ ಸಾಲು ಸಾಲು ಸಮಸ್ಯೆ, ಶಿವಮೊಗ್ಗ ಡಿ.ಸಿ.ಗೆ ದೂರು ನೀಡಿದ ವಿದ್ಯಾರ್ಥಿಗಳು

- 6 ರಿಂದ 16 ವರ್ಷದ ಮಕ್ಕಳಿಗೆ ರಂತ ತರಬೇತಿ ಶಿಬಿರ, ಎಲ್ಲಿ? ಏನೇನು ಕಲಿಸಲಾಗುತ್ತದೆ?

About The Editor
ನಿತಿನ್ ಆರ್.ಕೈದೊಟ್ಲು













