Date: 10/10/2025
ಶಿವಮೊಗ್ಗ: ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಆರ್.ಎಂ.8 ಕೊಳವೆ ಮಾರ್ಗದ ಲಿಂಕಿಂಗ್ ಮಾಡಲಾಗುತ್ತದೆ. ಆದ್ದರಿಂದ ಈ ಕೊಳವೆ ಮಾರ್ಗದಿಂದ ವಿವಿಧ ಬಡಾವಣೆಗೆ ಅ.11ರಂದು ನೀರು ಸರಬರಾಜು (Drinking Water) ವ್ಯತ್ಯಯವಾಗಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಶಾಂತಿನಗರ, ನವುಲೆ, ಚಾನಲ್ ಏರಿಯಾ, ಬಸವೇಶ್ವರನಗರ, ಕುವೆಂಪುನಗರ, ದೇವರಾಜ್ ಅರಸು ಬಡಾವಣೆ, ಬೊಮ್ಮನಕಟ್ಟೆ, ಜೆ.ಹೆಚ್.ಪಟೇಲ್ ಬಡಾವಣೆ, ತ್ಯಾವರೆಚಟ್ನಹಳ್ಳಿ, ಸೋಮಿನಕೊಪ್ಪ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜು ವ್ಯತ್ಯವಾಗಲಿದೆ.
ಇದನ್ನೂ ಓದಿ » ಅಡಿಕೆ ಧಾರಣೆ | 10 ಅಕ್ಟೋಬರ್ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?