ಕುವೆಂಪು ವಿವಿ ಮುಚ್ಚಲು ನಡೀತಿದ್ಯ ಹುನ್ನಾರ? ಡಿ.ಎಸ್.ಅರುಣ್‌ ಆತಂಕ, ಕಾರಣಗಳೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS, 30 JANUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗ : ಉನ್ನತ ಶಿಕ್ಷಣ ಸಚಿವರ ನಿರ್ಲಕ್ಷ್ಯ, ಕುಲಪತಿ, ಕುಲಸಚಿವರ ದರ್ಪ ಗಮನಿಸಿದರೆ ಕುವೆಂಪು ವಿಶ್ವವಿದ್ಯಾಲಯವನ್ನು (Kuvempu University) ಮುಚ್ಚುವ ಹುನ್ನಾರ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್‌.ಅರುಣ್ ಅನುಮಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಎಸ್.ಅರುಣ್, ಕುವೆಂಪು ವಿವಿಯ ಆಡಳಿತ ವೈಫಲ್ಯದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಡಿ.ಎಸ್‌‌.ಅರುಣ್ ಏನೆಲ್ಲ ಹೇಳಿದರು?

#f1f1f1 - POINT 1ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಸಹ ಕುಲಾಧಿಪತಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್‌ ಗೈರಾಗಿದ್ದಾರೆ. ಸಚಿವರ ಸಮಯ ಕೇಳಿಯೇ ಘಟಿಕೋತ್ಸವದ ದಿನಾಂಕ ನಿಗದಿ ಮಾಡಲಾಗಿತ್ತು. ಆದರೂ ಸಚಿವರು ಗೈರಾಗಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಬೇಕು. ರಾಜ್ಯಪಾಲರು ಘಟಿಕೋತ್ಸವಕ್ಕೆ ಬಂದಿದ್ದಕ್ಕೆ ಉನ್ನತ ಶಿಕ್ಷಣ ಸಚಿವರು ಗೈರಾಗಿರುವ ಅನುಮಾನವಿದೆ ಎಂದು ಅರುಣ್‌ ಆರೋಪಿಸಿದರು.

DS-Arun-Press-meet-in-Shimoga-city-about-kuvempu-university.

ರಾಜ್ಯದ ಮುತ್ಸದ್ಧಿ ರಾಜಕಾರಣಿ, ಅವರದ್ದೇ ಪಕ್ಷದ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಕುವೆಂಪು ವಿವಿ ಮತ್ತು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಒಂದೇ ದಿನ ಗೌರವ ಡಾಕ್ಟರೇಟ್ ನೀಡಲಾಯಿತು. ಅದು ಮಹತ್ವದ ದಿನ. ಆದರೆ ಉನ್ನತ ಶಿಕ್ಷಣ ಸಚಿವರು ಮತ್ತು ಕೃಷಿ ಸಚಿವರು ಘಟಿಕೋತ್ಸವಕ್ಕೆ ಗೈರಾಗಿದ್ದಾರೆ. ಇದಕ್ಕೆ ಕಾರಣ ತಿಳಿಸಬೇಕು.

ಡಿ.ಎಸ್.ಅರುಣ್‌, ವಿಧಾನ ಪರಿಷತ್‌ ಸದಸ್ಯ

#f1f1f1 - POINT 2ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಲವು ಹಗರಣಗಳಾಗಿವೆ. ವರ್ಷಕ್ಕೆ 10 ಸಿಂಡಿಕೇಟ್ ಸಭೆಗಳಾಗಬೇಕು. ಆದರೆ ಈವರೆಗೆ ಕೇವಲ ಎರಡು ಸಭೆಗಳಾಗಿವೆ. ಕುಲಪತಿ, ಕುಲಸಚಿವರ ದರ್ಪದ ನಡವಳಿಕೆ ಗಮನಿಸಿದರೆ ವಿವಿ ಭವಿಷ್ಯವೇನು ಎಂಬ ಆತಂಕವಾಗುತ್ತದೆ. ಯುಯುಸಿಎಂಎಸ್ ಪೋರ್ಟಲ್ ದುರುಪಯೋಗ ಮಾಡಿಕೊಂಡಿದ್ದಾರೆ. ಕೆಲವರು ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಕರೆ ಮಾಡಿ ‘ನಮ್ಮನ್ನು ನೋಡಿಕೊಳ್ಳಿ’ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

#f1f1f1 - POINT 3ಫೆ.8ರವರೆಗೆ ಮೊದಲ ಸೆಮಿಸ್ಟರ್‌ ಪರೀಕ್ಷೆ ನಿಗದಿಯಾಗಿದೆ. ಆದರೆ ಫೆ.1ರಿಂದ ಮೂರನೆ ಸೆಮ್‌ನ ತರಗತಿ ಪ್ರಾರಂಭವಾಗುತ್ತದೆ. ವಿದ್ಯಾರ್ಥಿಗಳು ತರಗತಿಗು ಹೋಗಬೇಕು, ಪರೀಕ್ಷೆಯನ್ನು ಎದುರಿಸಬೇಕು. ಇಂತಹ ವಿಚಿತ್ರವಾದ ಶೈಕ್ಷಣಿಕ ಕ್ಯಾಲೆಂಡರ್‌ ರೂಪಿಸಲಾಗಿದೆ. ಬೇರೆ ವಿವಿಗಳ ದಾಖಲಾತಿ ಅವಧಿ ಮುಗಿದ ಮೇಲೆ ಇಲ್ಲಿ ಫಲಿತಾಂಶ ಪ್ರಕಟವಾಗುತ್ತದೆ. ಇದರಿಂದ ಬೇರೆ ವಿವಿಗಳಲ್ಲಿ ವಿದ್ಯಾರ್ಥಿಗಳು ಅಡ್ಮಿಷನ್‌ ಆಗಲು ಅವಕಾಶವಿಲ್ಲದಾಗಿದೆ.

DS Arun, Legislative council member about Kuvempu University

ಅಂಕಪಟ್ಟಿಯ ಗುಣಮಟ್ಟ ಗಮಸಿದರೆ ನಾಚಿಕೆ ಅನಿಸುತ್ತದೆ. ಸಾಮಾನ್ಯ ಹಾಳೆಯಲ್ಲಿ ಅಂಕಪಟ್ಟಿ ಮುದ್ರಿಸಿ ವಿತರಣೆ ಮಾಡುತ್ತಿದ್ದಾರೆ.

ಡಿ.ಎಸ್.ಅರುಣ್‌, ವಿಧಾನ ಪರಿಷತ್‌ ಸದಸ್ಯ

#f1f1f1 - POINT 4ಲೆಕ್ಕಪತ್ರ ಪರಿಶೀಲಿಸಿದಾಗ ವಿಶ್ವವಿದ್ಯಾಲಯದಲ್ಲಿ ಕಾಯಂ ಮತ್ತು ಗುತ್ತಿಗೆ ನೌಕರರು ಸೇರಿ ಒಟ್ಟು  800ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ ಎಂಬ ದಾಖಲೆ ಇದೆ. ಆದರೆ ಯಾರಿಗೆ ಎಷ್ಟು ವೇತನ ನೀಡಲಾಗುತ್ತಿದೆ ಎಂಬುದರ ಸ್ಪಷ್ಟತೆ ಇಲ್ಲ. ಸ್ಥಳೀಯ ವಿದ್ಯಾ ಸಂಸ್ಥೆಯಲ್ಲಿ 2500 ವಿದ್ಯಾರ್ಥಿಗಳನ್ನು 50 ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಆದರೆ ವಿವಿಯಲ್ಲಿ 3500 ವಿದ್ಯಾರ್ಥಿಗಳಿಗೆ 800 ಸಿಬ್ಬಂದಿ ಅಗತ್ಯವಿದೆಯೆ ಎಂದು ಅರುಣ್‌ ಪ್ರಶ್ನಿಸಿದರು.

DS Arun, Legislative council member about Kuvempu University

#f1f1f1 - POINT 5ಕುವೆಂಪು ವಿವಿಯಲ್ಲಿ ಸಾಲು ಸಾಲು ಹಗರಣಗಳಿವೆ. ಅದರ ಕುರಿತು ಚರ್ಚೆಗೆ ಉನ್ನತ ಶಿಕ್ಷಣ ಸಚಿವರು ಲಭ್ಯರಿಲ್ಲ. ಘಟಿಕೋತ್ಸವಕ್ಕು ಬರುತ್ತಿಲ್ಲ. ಕುಲಪತಿ ಅವರದ್ದು ಓಡಾಟ ಹೆಚ್ಚು. ಆಗಾಗ ವಿದೇಶ ಪ್ರವಾಸದಲ್ಲಿರುತ್ತಾರೆ. ಹಾಗಾಗಿ ಆಡಳಿತ ಬಿಗಿಯಾಗಿಲ್ಲ. ವಿವಿಯ ಸಮಸ್ಯೆಗಳ ಕುರಿತು  ಕುಲಸಚಿವರು ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾಗಿದ್ದಾರೆಯೇ. ಇದನ್ನೆಲ್ಲ ಗಮನಿಸಿದಾಗ ಕುವೆಂಪು ವಿವಿ ಮುಚ್ಚುವ ಹುನ್ನಾರ ನಡೆದಿರುವ ಶಂಕೆ ವ್ಯಕ್ತವಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಪ್ರಮುಖರಾದ ಮಾಲ್ತೇಶ್‌, ಅಣ್ಣಪ್ಪ, ಶ್ರೀನಾಗ್‌ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ » ಭದ್ರಾವತಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ, ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಏನೆಲ್ಲ ಹೇಳಿದರು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment