ಶಿವಮೊಗ್ಗ – ಭದ್ರಾವತಿ ಹೈವೆಯಲ್ಲಿ ಅಪಘಾತಕ್ಕೆ ಗುಂಡಿಗಳಷ್ಟೆ ಕಾರಣವಲ್ಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಶಿವಮೊಗ್ಗ – ಭದ್ರಾವತಿ ಹೈವೇ ರಸ್ತೆ ಅಪಘಾತಗಳ ಆಗರವಾಗಿದೆ. ದಿನ ಒಂದಿಲ್ಲೊಂದು ಅಪಾಘತ ಸಂಭವಿಸಿ, ರಸ್ತೆ ರಕ್ತ ಹೀರುತ್ತಿದೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಗುಂಡಿಗಳಷ್ಟೆ ಕಾರಣವಲ್ಲ. ಇವುಗಳಿಂದ ಉತ್ಪಾದನೆ ಆಗುತ್ತಿರುವ ಧೂಳು (DUST) ಕೂಡ ವಾಹನ ಸವಾರರಲ್ಲಿ ಜೀವ ಹಿಂಡುತ್ತಿದೆ.

Shimoga Nanjappa Hospital

ಸಿಮೆಂಟು, ಜೆಲ್ಲಿ, ಮಣ್ಣು

ಶಿವಮೊಗ್ಗ – ಭದ್ರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳಿಗೇನು ಲೆಕ್ಕವಿಲ್ಲ. ಇವುಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಜನರು ಸಿಟ್ಟಾದರೆ ಸಾಕು, ಅಧಿಕಾರಿಗಳು ಗುಂಡಿಗಳ ಬಾಯಿ ಮುಚ್ಚಿಸುತ್ತಾರೆ.

PART 1 | ಶಿವಮೊಗ್ಗ – ಭದ್ರಾವತಿ ನಡುವೆ ಇರುವುದು ಹೈವೆ ರಸ್ತೆನೋ, ಯಮಲೋಕದ ದಾರಿನೋ?

ಸಿಮೆಂಟು, ಜೆಲ್ಲಿ, ಮಣ್ಣು ತುಂಬಿ ರಸ್ತೆ ಸಮತಟ್ಟಾಗಿ ಕಾಣುವಂತೆ ಮಾಡುತ್ತಾರೆ. ನಿತ್ಯ ನೂರಾರು ಬಸ್ಸು, ಲಾರಿಗಳು ಓಡಾಡುವ ರಸ್ತೆಯಾದ್ದರಿಂದ ಸಿಮೆಂಟು, ಮಣ್ಣು, ಜೆಲ್ಲಿಯಲ್ಲಾ ಗುಂಡಿ ಬಿಟ್ಟು ರಸ್ತೆಯಲ್ಲಿ ಹರಡಿಕೊಳ್ಳುತ್ತದೆ.

ಇಕ್ಕೆಲಗಳಲ್ಲೂ ಜಾರಿ ಬೀಳುವ ಭಯ

ಜೆಲ್ಲಿ ಕಲ್ಲುಗಳು, ಮರಳು ರಸ್ತೆಯ ಇಕ್ಕೆಲಗಳಿಗು ಹರಡಿಕೊಂಡು ವಾಹನ ಸವಾರರ ಆತಂಕ ದುಪ್ಪಟ್ಟಾಗಿಸುತ್ತಿದೆ. ಜೆಲ್ಲಿ, ಮರಳು ಇದ್ದಲ್ಲಿ ದ್ವಿಚಕ್ರ ವಾಹನ ಸವಾರರು ಮೈಯಲ್ಲ ಕಣ್ಣಾಗಿಸಿಕೊಳ್ಳಬೇಕಿದೆ. ಇತರೆ ವಾಹನ ಸವಾರರು ತುರ್ತಾಗಿ ಬ್ರೇಕ್ ಒತ್ತಿದ್ದರೂ ಜಾರಿಕೊಂಡೆ ಮುಂದಕ್ಕೆ ಹೋಗುತ್ತವೆ.

PART 2 |  ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಅಪಘಾತ ಆದರಷ್ಟೆ ಗುಂಡಿ ಬಂದ್, ಇಲ್ಲಿದೆ ನೋಡಿ ಉದಾಹರಣೆ

‘ಧೂಳು ಸಾರ್, ಬರೀ ಧೂಳು’

ಮಣ್ಣು, ಜೆಲ್ಲಿಯ ತೇಪೆ ಮತ್ತು ಮಳೆಯಿಂದಾಗಿ ಅಕ್ಕಪಕ್ಕ ಜಾಗದಿಂದ ಬರುವ ಮಣ್ಣು ಹೆದ್ದಾರಿಯನ್ನು ಧೂಳುಮಯಗೊಳಿಸಿದೆ. ಭಾರೀ ವಾಹನಗಳು ವೇಗವಾಗಿ ಸಾಗಿದರೆ ಅದರ ಹಿಂದೆಯೆ ಮುಗಿಲೆತ್ತರಕ್ಕೆ ಧೂಳು ಎದ್ದು ನಿಲ್ಲುತ್ತದೆ. ದ್ವಿಚಕ್ರ ವಾಹನ ಸವಾರರು, ಕಾರು, ಆಟೋ ಸೇರಿದಂತೆ ಸಣ್ಣಪುಟ್ಟ ವಾಹನ ಸವಾರರಿಗೆ ಮುಂದಿನ ರಸ್ತೆಯೆ ಕಾಣದಂತೆ ಮಾಡುತ್ತಿದೆ. ಇದರಿಂದಾಗಿಯು ಅಪಘಾತಗಳು ಸಂಭವಿಸುತ್ತಿವೆ.

ಈ ಧೂಳಲ್ಲಿ (DUST) ಬೈಕ್ ಓಡಿಸುವುದಕ್ಕೆ ಸಾಧ್ಯವಿದೆಯಾ? ವಾರಕ್ಕೆ ಒಂದು ಸರ್ತಿ ಈ ರಸ್ತೆಯಲ್ಲಿ ಓಡಾಡಬೇಕಾಗುತ್ತದೆ. ಪ್ರತಿ ಭಾರಿ ಬಂದಾಗಲೂ ಗುಂಡಿ, ಧೂಳಿನಿಂದ ತಪ್ಪಿಸಿಕೊಂಡು ಹೋಗುವುದೆ ದೊಡ್ಡ ಕೆಲಸವಾಗಿದೆ. ಜೀವ ಭಯದಲ್ಲಿ ಓಡಾಡುತ್ತಿದ್ದೇವೆ.ಜೀವನ್, ಮೆಡಿಕಲ್ ರೆಪ್ರೆಸೆಂಟೆಟಿವ್

ನಿತ್ಯ ಒಂದಿಲ್ಲೊಂದು ಅಪಘಾತ

ಗುಂಡಿ, ಅವುಗಳಿಂದ ಉತ್ಪತ್ತಿಯಾಗುತ್ತಿರುವ ಧೂಳಿನಿಂದಾಗಿ (DUST) ಶಿವಮೊಗ್ಗ – ಭದ್ರಾವತಿ ರಾಷ್ಟ್ರೀಯ ಹೆದ್ದಾರಿ ನಿತ್ಯ ಒಂದಿಲ್ಲೊಂದು ಅಪಘಾತಕ್ಕೆ ಸಾಕ್ಷಿಯಾಗುತ್ತಿದೆ. ರಸ್ತೆಯ ಅಕ್ಕಪಕ್ಕದ ನಿವಾಸಿಗಳಿಗಂತೂ ಗಾಯಾಳುಗಳನ್ನು ಆಂಬುಲೆನ್ಸ್ ಹತ್ತಿಸಿ ಆಸ್ಪತ್ರೆಗೆ ಕಳುಹಿಸುವುದು ರೂಢಿಯಾಗಿದೆ.

Sarji Hospital

ಕ್ಲಿಕ್ ಮಾಡಿ ಇದನ್ನೂ ಓದಿ |  ತಾಳಗುಪ್ಪ – ಬೆಂಗಳೂರು ರೈಲು ಹತ್ತುವಾಗ ಕಾಲು ಜಾರಿ ಬಿದ್ದು ತಂದೆ, ಮಗ ಸಾವು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 13, 2022

Leave a Comment