ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಶಿವಮೊಗ್ಗ ನಗರ ಹಸಿರುಮಯವಾಗಿದೆ. ವಿವಿಧ ಕಲಾಕೃತಿಗಳು ಮತ್ತು ಜಗಮಗಿಸುವ ಲೈಟುಗಳಿಂದ ಅಮೀರ್ ಅಹಮದ್ ಸರ್ಕಲ್ ಕಂಗೊಳಿಸುತ್ತಿದೆ. (Decoration)
ಸೆ.15ರಂದು ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿದೆ. ನಗರದ ವಿವಿಧೆಡೆ ಮುಸ್ಲಿಂ ಸಮುದಾಯದವರು ವಾಸಿಸುವ ಬಡಾವಣೆಗಳಲ್ಲಿ ವಿವಿಧ ಬಗೆಯ ಅಲಂಕಾರ ಮಾಡಲಾಗಿದೆ.
ಎ.ಎ.ಸರ್ಕಲ್ ಜಗಮಗ
ಶಿವಮೊಗ್ಗ ನಗರದ ಅಮೀರ್ ಅಹಮದ್ ಸರ್ಕಲ್ನಲ್ಲಿ ವಿಭಿನ್ನವಾಗಿ ಅಲಂಕಾರ ಮಾಡಲಾಗಿದೆ. ಈ ಬಾರಿ ಮೆಕ್ಕಾ, ಮದೀನಾ ಮಾದರಿಗಳು ಸೇರಿದಂತೆ ವಿವಿಧ ಕಲಾಕೃತಿಗಳನ್ನು ಇರಿಸಿ ಅಲಂಕಾರ ಮಾಡಲಾಗಿದೆ. ಇಡೀ ಸರ್ಕಲ್ಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಅಲಂಕಾರವನ್ನು ಕಣ್ತುಂಬಿಕೊಳ್ಳಲು ಮುಸ್ಲಿಂ ಸಮುದಾಯದವರು ಕುಟುಂಬ ಸಹಿತ ಎ.ಎ.ಸರ್ಕಲ್ನಲ್ಲಿ ಜಮಾಯಿಸಿದ್ದಾರೆ. ಇತರೆ ಧರ್ಮಿಯರು ಕೂಡ ಅಲಂಕಾರ ವೀಕ್ಷಿಸಿ, ಮೊಬೈಲ್ಗಳಲ್ಲಿ ದೃಶ್ಯ ಸೆರೆಹಿಡಿಯುತ್ತಿದ್ದರು. ಇನ್ನು, ಅಮೀರ್ ಅಹಮದ್ ಸರ್ಕಲ್ನಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನೆಹರು ರಸ್ತೆಯ ಒಂದು ಬದಿಯಲ್ಲಿ ರಸ್ತೆ ಬಂದ್ ಮಾಡಲಾಗಿದೆ.

ನಗರದ ವಿವಿಧೆಡೆ ಅಲಂಕಾರ
ಮುಸ್ಲಿಂ ಸಮುದಾಯದವರು ಹೆಚ್ಚಿರುವ ಬಡಾವಣೆಗಳಲ್ಲಿ ಈದ್ ಮೆರವಣಿಗೆ ಹಿನ್ನೆಲೆ ಅಲಂಕಾರ ಮಾಡಲಾಗಿದೆ. ನಗರದ ಕೆ.ಆರ್.ಪುರಂ, ಟಿಪ್ಪು ನಗರ, ಅಮೀರ್ ಅಹಮದ್ ಕಾಲೋನಿ, ಬೈಪಾಸ್ ರಸ್ತೆ ಸೇರಿದಂತೆ ಹಲವು ಕಡೆ ವಿವಿಧ ರೀತಿಯ ಅಲಂಕಾರ ಮಾಡಲಾಗಿದೆ.
ಇನ್ನು, ಅಹಿತಕರ ಘಟನೆಗಳನ್ನು ತಡೆಯಲು ನಗರದ ವಿವಿಧೆಡೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.





ಇದನ್ನೂ ಓದಿ » ಶಿವಮೊಗ್ಗದಲ್ಲಿ ಈದ್ ಮಿಲಾದ್, ಪೊಲೀಸರಿಂದ ರೂಟ್ ಮಾರ್ಚ್, ಬಂದೋಬಸ್ತ್ಗೆ ಸಾವಿರ ಸಾವಿರ ಸಿಬ್ಬಂದಿ

Eid Milad Decoration in Shimoga city
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






