SHIMOGA NEWS, 22 SEPTEMBER 2024 : ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಮೆರವಣಿಗೆ (Procession) ನಡೆಯಿತು. ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಗಾಂಧಿ ಬಜಾರ್ ಜಾಮಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆ ನಗರದ ವಿವಿಧೆಡೆ ಸಾಗಿತು. ಮುಸ್ಲಿಂ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಗೀತೆಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಆನೆ, ಕುದುರೆ ಏರಿ ಬಂದರು
ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ವಿವಿಧ ಡಿಜೆ ಹಾಡುಗಳಿಗೆ ಡಾನ್ಸ್ ಮಾಡಿ ಸಂಭ್ರಮಿಸಿದರು. ಕೆಲವರು ವಿವಿಧ ಧಾರ್ಮಿಕ ಗೀತೆಗಳನ್ನು ಹಾಡುತ್ತ, ವಾದ್ಯಗಳನ್ನು ಬಾರಿಸುತ್ತಾ ಸಾಗಿದರು. ಯುವಕರು ರಾಜ ಪೋಷಾಕು ಧರಿಸಿ, ಕುದುರೆ ಏರಿ ಬಂದು ಗಮನ ಸೆಳೆದರು. ಆನೆಯ ಪ್ರತಿಕೃತಿ ನಿರ್ಮಿಸಿ, ಅದರ ಮೇಲೆ ಕುಳಿತು ಬಂದು ಖುಷಿಪಟ್ಟರು. ಪ್ರತಿಕೃತಿ ಹತ್ತಿರಕ್ಕೆ ಬರುವವರೆಗೆ ಅದು ಅಸಲಿಯೋ, ನಕಲಿಯೋ ಎಂದು ಜನರು ಗೊಂದಲಕ್ಕೀಡಾಗಿದ್ದರು.
ಇನ್ನು, ವಾಹನಗಳಲ್ಲಿ ವಿವಿಧ ಕಲಾಕೃತಿಗಳು, ಧಾರ್ಮಿಕ ಕೇಂದ್ರಗಳ ಕಲಾಕೃತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಇಕ್ಕೆಲದಲ್ಲಿ ನಿಂತು ಮೆರವಣಿಗೆ ವೀಕ್ಷಣೆ
ರಸ್ತೆಯ ಎರಡು ಬದಿಯಲ್ಲಿ ನಿಂತು ಮುಸ್ಲಿಂ ಸಮುದಾಯದವರು ಮೆರವಣಿಗೆ ಕಣ್ತುಂಬಿಕೊಂಡರು. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಇನ್ನು, ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ನೀರು, ಚಾಕ್ಲೆಟ್, ಡ್ರೈ ಫ್ರೂಟ್ ವಿತರಣೆ ಮಾಡಲಾಯಿತು.
ಅಮೀರ್ ಅಹಮದ್ ಸರ್ಕಲ್‌ನಲ್ಲಿ ಧಾರ್ಮಿಕ ಸಭೆ ನಡೆಸಲಾಯಿತು. ಇನ್ನು, ಅಹಿತಕರ ಘಟನೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ » ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್‌ಗೆ ವಿಮಾನ, ಟೈಮಿಂಗ್ ಏನು? ಟಿಕೆಟ್ ಬುಕಿಂಗ್ ಹೇಗೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200