ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 DECEMBER 2020
ಶಿವಮೊಗ್ಗ – ಭದ್ರಾವತಿ ಅವಳಿ ನಗರದ ನಡುವೆ ಬಸ್ ಸಂಚಾರ ಪುನಾರಂಭವಾಗಿದೆ. ಆದರೆ ಪ್ರಯಾಣಿಕರು ಮತ್ತು ಬಸ್ಸುಗಳ ಸಂಖ್ಯೆ ಕಡಿಮೆ ಇದೆ. ಇನ್ನು, ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಬಸ್ಸುಗಳಿಗೆ ಬಿಗಿ ಭದ್ರತೆ ಒದಗಿಸಲಾಗುತ್ತಿದೆ.
ಇದನ್ನೂ ಓದಿ | ಸರ್ಕಾರಿ ಬಸ್ ಬಂದ್, ಶಿವಮೊಗ್ಗದಿಂದ ವಿವಿಧೆಡೆಗೆ ಖಾಸಗಿ ಬಸ್ ಸಂಚಾರ ಶುರು, ಎಲ್ಲಿಗೆಲ್ಲ ತೆರಳುತ್ತಿವೆ ಬಸ್ಸುಗಳು?
ಬೆಳಗ್ಗೆಯಿಂದ ಸಂಚಾರ ಆರಂಭ
ಸಾರಿಗೆ ನೌಕರರ ಮುಷ್ಕರದ ನಡುವೆಯು ಶಿವಮೊಗ್ಗ ಮತ್ತು ಭದ್ರಾವತಿ ನಡುವೆ ಬಸ್ ಸಂಚಾರ ಆರಂಭವಾಗಿದೆ. ಬೆಳಗ್ಗೆಯಿಂದ ಎರಡು ಬಸ್‍ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಭಾನುವಾರ ಮತ್ತು ಮುಷ್ಕರದ ಕಾವು ಇನ್ನು ತಗ್ಗದೆ ಇರುವ ಹಿನ್ನೆಲೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಎರಡು ಬಸ್ಸುಗಳನ್ನು ಮಾತ್ರ ಬಿಡಲಾಗಿದೆ. ಈ ನಡುವೆ ದಾವಣಗೆರೆ ಜಿಲ್ಲೆಯ ಹರಿಹರಕ್ಕೂ ಶಿವಮೊಗ್ಗದಿಂದ ಒಂದು ಬಸ್ ಹೋಗಿದೆ.
ಬಿಗಿ ಭದ್ರತೆಯಲ್ಲಿ ಸಂಚಾರ
ಮಾಚೇನಹಳ್ಳಿ ಬಳಿ ಬಸ್‍ಗೆ ಕಲ್ಲು ತೋರಿದ್ದರಿಂದ ಗಾಜು ಪುಡಿ ಪುಡಿಯಾಗಿತ್ತು. ಹಾಗಾಗಿ ಈಗ ಶಿವಮೊಗ್ಗ ಭದ್ರಾವತಿ ನಡುವೆ ಸಂಚರಿಸುವ ಬಸ್ಸುಗಳಿಗೆ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳನ್ನು ಒಳಗೊಂಡ ತಂಡ ಪ್ರತಿ ಬಸ್‍ಗೆ ಜೀಪ್‍ನಲ್ಲಿ ಎಸ್ಕಾರ್ಟ್ ಮಾಡುತ್ತಿದೆ. ಬಸ್ಸುಗಳು ಮತ್ತು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ವಿಡಿಯೋ ರಿಪೋರ್ಟ್ ಇಲ್ಲಿದೆ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422