ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಜನವರಿ 2022
ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಇವತ್ತು ಸಿಟಿ ರೌಂಡ್ಸ್ ನಡೆಸುತ್ತಿದ್ದಾರೆ. ನಗರದ ವಿವಿಧೆಡೆ ತೆರಳಿ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಿಂದ ಆಲ್ಕೋಳ ರಸ್ತೆ, ಸುವರ್ಣ ಸಂಸ್ಕೃತಿ ಭವನ, ಶಿವಶಂಕರ್ ಗ್ಯಾರೇಜ್ ಹಿಂಭಾಗದ ಕನ್ಸರ್’ವೆನ್ಸಿ, ಮಿಷನ್ ಕಾಂಪೌಂಡ್ ಪಾರ್ಕ್, ಫ್ರೀಡಂ ಪಾರ್ಕ್, ಚಾನಲ್ ಮುಂಭಾಗ, ಮಾಸ್ತಾಂಬಿಕ ಪಾರ್ಕ್, ಮಲ್ಲೇಶ್ವರ ನಗರ ಪಾರ್ಕ್, ಫ್ಯಾಮಿಲಿ ವೆಲ್’ಫೇರ್ ಪಾರ್ಕ್’ಗಳಲ್ಲಿ ಪರಿಶೀಲನೆ ನಡೆಯಲಿದೆ.
ಬೆಳಗ್ಗೆಯಿಂದ ಪರಿಶೀಲನಾ ಕಾರ್ಯ ಆರಂಭವಾಗಿದ್ದು, ಮೇಯರ್ ಸುನೀತಾ ಅಣ್ಣಪ್ಪ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಕಮಿಷನರ್ ಚಿದಾನಂದ ವಟಾರೆ ಸೇರಿದಂತೆ ಹಲವರು ಪರಿಶೀಲನಾ ತಂಡದಲ್ಲಿದ್ದಾರೆ.