ಶಿವಮೊಗ್ಗ ಚುನಾವಣೆ, ಸ್ಟ್ರಾಂಗ್‌ ರೂಂ ಸೇರಿದ ಮತ ಯಂತ್ರ, ಎಲ್ಲಿದೆ ಸ್ಟ್ರಾಂಗ್‌ ರೂಂ? ಹೇಗಿದೆ ವ್ಯವಸ್ಥೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 MAY 2024

ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿದೆ. ಮತಯಂತ್ರಗಳು ಸ್ಟ್ರಾಂಗ್‌ ರೂಂ ಸೇರಿವೆ. ಜೂನ್‌ 4ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಸ್ಟ್ರಾಂಗ್‌ ರೂಂನಲ್ಲಿ ಮತಯಂತ್ರಗಳು

ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಮತಯಂತ್ರಗಳನ್ನು ಆಯಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಾಪಿಸಿದ್ದ ಮಸ್ಟರಿಂಗ್‌ ಕೇಂದ್ರಗಳಿಗೆ ಮರಳಿ ತರಲಾಯಿತು. ಅಲ್ಲಿ ಡಿಮಸ್ಟರಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್‌ ರೂಂಗೆ ತರಲಾಗಿದೆ. ಬೆಳಗಿನ ಜಾವದವರೆಗೂ ಸ್ಟ್ರಾಂಗ್‌ ರೂಂನಲ್ಲಿ ಮತಯಂತ್ರಗಳನ್ನು ಇರಿಸಿ ಕೊಠಡಿಗಳನ್ನು ಬಂದ್‌ ಮಾಡಲಾಯಿತು.

ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟ್ರಾಂಗ್‌ ರೂಂ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟ್ರಾಂಗ್‌ ರೂಂ ಸ್ಥಾಪಿಸಲಾಗಿದೆ. ಕಲಾ ಕಾಲೇಜು ಕಟ್ಟಡದ ವಿವಿಧ ಕೊಠಡಿಗಳಲ್ಲಿ ಮತ ಯಂತ್ರಗಳನ್ನು ಭದ್ರವಾಗಿ ಇರಿಸಲಾಗಿದೆ. ಮತಗಟ್ಟೆ ಸಂಖ್ಯೆವಾರು ಮತ ಯಂತ್ರಗಳನ್ನು ಇರಿಸಿ, ಕೊಠಡಿಯ ಬಾಗಿಲುಗಳನ್ನು ಬಂದ್‌ ಮಾಡಲಾಗಿದೆ. ಬಾಗಿಲಿನ ಮುಂದೆ ಪ್ಲೈವುಡ್‌ ಅಳವಡಿಸಲಾಗಿದೆ. ಮತ ಯಂತ್ರ ಇರಿಸಿರುವ ಕೊಠಡಿಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ.

ಮತಯಂತ್ರಗಳಿರುವ ಸ್ಟ್ರಾಂಗ್‌ ರೂಂಗೆ ಮೂರು ಹಂತದ ಭದ್ರತೆ ಇದಗಿಸಲಾಗಿದೆ. ಕಟ್ಟಡದ ಒಳಗೆ ಸಂಬಂಧಿಸಿದ ಅಧಿಕಾರಿಗಳ ಹೊರತು ಬೇರೆಲ್ಲರಿಗು ಪ್ರವೇಶ ನಿಷೇಧಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಲೋಕಸಭೆಗೆ ಕಳೆದ ಬಾರಿಗಿಂತಲು ಹೆಚ್ಚು ಮತದಾನ, ಎಷ್ಟಾಗಿದೆ ವೋಟಿಂಗ್‌?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 8, 2024

Leave a Comment