ಎಕ್ಸಲೆನ್ಸ್‌ ಅವಾರ್ಡ್‌, ಶಿವಮೊಗ್ಗದ ಸಾಧಕರ ಪಟ್ಟಿ ಬಿಡುಗಡೆ, ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ?

ಶಿವಮೊಗ್ಗ: ಜಿಲ್ಲೆಯ ಆರ್ಯವೈಶ್ಯ ಸಮುದಾಯದ ವಿವಿಧ ಕ್ಷೇತ್ರದ ಸಾಧಕರಿಗೆ ಆರ್ಯವೈಶ್ಯ ಎಕ್ಸಲೆನ್ಸ್ ಅವಾರ್ಡ್ಸ್–2026 ಪ್ರದಾನ ಮಾಡಲಾಗುವುದು. ನವೆಂಬರ್ 22 ರಂದು ಬೆಳಿಗ್ಗೆ 10ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಭೂಪಾಳಮ್ ಶಶಿಧರ್ ತಿಳಿಸಿದರು. (ಈ ಸುದ್ದಿಯನ್ನು ಇನ್ನು 85 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಮಟ್ಟದಲ್ಲಿ ಪ್ರಥಮ ಬಾರಿಗೆ ಈ ಪುರಸ್ಕಾರ ಆಯೋಜಿಸಲಾಗಿದೆ. ಶಿಕ್ಷಣ, ಉದ್ಯಮ, ಕ್ರೀಡೆ, ಮಹಿಳಾ ಸಬಲೀಕರಣ, ಸಮಾಜಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಗುವುದು ಎಂದರು.

DS-Arun-Press-meet-about-Excellence-Award

ಯಾರೆಲ್ಲ ಆಯ್ಕೆಯಾಗಿದ್ದಾರೆ?

ಶಿಕ್ಷಣ ಕ್ಷೇತ್ರದಲ್ಲಿ ಉಜ್ವಲ ರವಿ, ಉದ್ಯಮ ಕ್ಷೇತ್ರದಲ್ಲಿ ಎಂ.ಡಿ. ಅಶೋಕ್ ಹಾಗೂ ಎಂ.ಆರ್. ಗಿರೀಶ್, ಕ್ರೀಡಾ ಕ್ಷೇತ್ರದಲ್ಲಿ ಹೆಚ್.ಎನ್. ಶಶಾಂಕ್, ಮಹಿಳಾ ಸಬಲೀಕರಣ ವಿಭಾಗದಲ್ಲಿ ರಾಧಿಕಾ ಜಗದೀಶ್, ಸಮಾಜಸೇವೆಯಲ್ಲಿ ಮೃತ್ಯುಂಜಯ ಸೌಕಾರ್ ಕಾರ್ತಿಕ್, ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ ಪಿ.ಎನ್. ಸುರೇಶ್ ಕುಮಾರ್, ಕಲೆ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಪ್ರಣೀಲ್ ಕೆ. ಸತಾರೆ, ರಕ್ಷಿತ ಸಿ.ಡಿ. ಹಾಗೂ ಸಿಂಚನ ಮತ್ತು ಕೃಷಿ ಕ್ಷೇತ್ರದಲ್ಲಿ ಅರವಿಂದ್ ಎಲ್. ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಹಾಸಭೆಯ ವಿಭಾಗೀಯ ಉಪಾಧ್ಯಕ್ಷ ಭಾಗೇಪಲ್ಲಿ ನಟರಾಜ್, ವಿಧಾನ ಪರಿಷತ್‌ ಸದಸ್ಯ ಡಿ.ಎಸ್. ಅರುಣ್, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಬೆಂಗಳೂರಿನಲ್ಲಿ GAVS ಸಮಾವೇಶ

ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಯುವಕರನ್ನು ಉದ್ಯಮಿಗಳನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಆರ್ಯವೈಶ್ಯ ಮಹಾಸಭಾದಿಂದ ಡಿಸೆಂಬರ್ 25 ರಿಂದ 27 ರವರೆಗೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ಗ್ಲೋಬಲ್ ಆಕ್ಸಿಲರೇಟರ್ ವಿಷನ್ ಸಮಿಟ್ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ 28 ರಾಷ್ಟ್ರಗಳ ಹೂಡಿಕೆದಾರರು ಪಾಲ್ಗೊಳ್ಳಲಿದ್ದಾರೆ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಉದ್ಘಾಟಿಸಲಿದ್ದಾರೆ. ಆಂಧ್ರಪ್ರದೇಶದ ಸಚಿವ ಟಿ.ಜಿ. ಭರತ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದರೊಂದಿಗೆ ₹15 ಲಕ್ಷ ಬಹುಮಾನದ ಟೆಕ್4ಭಾರತ್ ಹ್ಯಾಕಥಾನ್ ಸಹ ಆಯೋಜಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾಂತ್ರಿಕ ಸಮಿತಿ ಅಧ್ಯಕ್ಷ ಎಂ.ಜೆ. ಮಂಜುನಾಥ್, ಡಿ.ಎಂ. ಅರವಿಂದ್, ಸುಪ್ರಿಯಾ ಚೇತನ್, ಬದ್ರಿ ನಾರಾಯಣ್, ಎಚ್.ಜಿ. ದತ್ತಕುಮಾರ್, ಬೆಲಗೂರು ಮಂಜುನಾಥ್ ಹಾಗೂ ಸುಮಲತಾ ಆರ್. ಭೂಪಾಳಮ್ ಉಪಸ್ಥಿತರಿದ್ದರು.