ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 JANUARY 2024
SHIMOGA : ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿ, ಅಸಲಿ ಪ್ಯಾನ್ ಕರ್ಡ್ ಬಳಸಿ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಸಾಲಕ್ಕೆ ಅರ್ಜಿ ಸಲ್ಲಿಸಲಾಗಿದೆ. ಫೈನಾನ್ಸ್ ಸಂಸ್ಥೆಯೊಂದರಲ್ಲಿ 14 ಸಾವಿರ ರೂ. ಸಾಲವನ್ನು ಪಡೆಯಲಾಗಿದೆ.
ಕೊರಿಯರ್‌ನಲ್ಲಿ ಬಂತು ಕ್ರೆಡಿಟ್ ಕಾರ್ಡ್
ಶಿವಮೊಗ್ಗದ ವ್ಯಾಪಾರಿಯೊಬ್ಬರ (ಹೆಸರು ಗೌಪ್ಯ) ತಿಲಕನಗರದ ಮನೆ ವಿಳಾಸಕ್ಕೆ ನ.13ರಂದು ಬೆಳಗ್ಗೆ ಮತ್ತು ಮಧ್ಯಾಹ್ನದ ಪ್ರತ್ಯೇಕ ಕೊರಿಯರ್ ತಲುಪಿತ್ತು. ಒಂದರಲ್ಲಿ ಬ್ಯಾಂಕ್ ಖಾತೆ ತೆರೆದಿರುವ ಮಾಹಿತಿ ಇತ್ತು. ಮತ್ತೊಂದರಲ್ಲಿ ಕ್ರೆಡಿಟ್ ಕಾರ್ಡ್ ಬಂದಿತ್ತು. ಎರಡು ಬ್ಯಾಂಕ್‌ಗಳಿಗೆ ತೆರಳಿ ತಾವು ಖಾತೆ ತೆರೆದಿಲ್ಲ ಮತ್ತು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿ ಖಾತೆಗಳನ್ನು ಬಂದ್ ಮಾಡಿಸಿದ್ದರು.
ರಿಜಿಸ್ಟರ್ ಪೋಸ್ಟ್‌ನಲ್ಲಿ ಬಂತು ಆಧಾರ್ ಕಾರ್ಡ್
ಡಿ.3ರಂದು ವ್ಯಾಪಾರಿಯ ಮನೆ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್‌ನಲ್ಲಿ ಆಧಾರ್ ಕಾರ್ಡ್ ಬಂದಿತ್ತು. ಅದರಲ್ಲಿ ವ್ಯಾಪಾರಿಯ ಹೆಸರು, ವಿಳಾಸ ಹೊರತು ಉಳಿದ ಮಾಹಿತಿಗಳು ತಪ್ಪಾಗಿದ್ದವು. ಫೋಟೊ, ತಂದೆ ಹೆಸರು ತಪ್ಪಾಗಿತ್ತು. ಹೊಸ ಆಧಾರ್ ನಂಬರ್ ಕೂಡ ಕಾರ್ಡ್‌ನಲ್ಲಿ ದಾಖಲಾಗಿತ್ತು. ಇದೇ ಆಧಾರ್ ಕಾರ್ಡ್ ನೀಡಿ ಫೈನಾನ್ಸ್ ಸಂಸ್ಥೆಯೊಂದರಿಂದ 14,400 ರೂ. ಸಾಲ ಪಡೆದಿರುವುದು ಸಿಬಿಲ್ ಸ್ಕೋರ್ ಚೆಕ್ ಮಾಡಿದಾಗ ಗೊತ್ತಾಗಿದೆ. ಈ ಹಿನ್ನೆಲೆ ವ್ಯಾಪಾರಿಯು ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಅಪರಿಚಿತ ವ್ಯಕ್ತಿಯು ತಮ್ಮ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿ, ಅಸಲಿ ಪ್ಯಾನ್ ಕಾರ್ಡ್ ಉಪಯೋಗಿಸಿ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದಾರೆ. ಸಾಲವನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನೀವೂ ಎಚ್ಚರ ವಹಿಸಿ
ಆನ್‌ಲೈನ್ ವಂಚನೆ, ಈ ಪ್ರಕರಣದಲ್ಲಿ ವರದಿಯಾದಂತೆ ನಕಲಿ ಆಧಾರ್, ಪ್ಯಾನ್ ಕಾರ್ಡ್ ನೀಡಿ ಖಾತೆ ತೆರೆದು ಸಾಲ ಪಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಸಾರ್ವಜನಿಕರು ಆಗಿಂದಾಗ್ಗೆ ಬ್ಯಾಂಕ್‌ನಲ್ಲಿ ತಮ್ಮ ಖಾತೆಗಳನ್ನು ಪರಿಶೀಲಿಸಬೇಕು. ಸಿಬಿಲ್ ಸ್ಕೋರ್ ಚೆಕ್ ಮಾಡಿಕೊಳ್ಳುತ್ತಿರಬೇಕು. ಈಗ ಸಿಬಿಲ್ ಪರಿಶೀಲನೆಗೆ ಆ್ಯಪ್‌ಗಳಿವೆ. ಇನ್ನು, ಚಾರ್ಟೆಡ್ ಅಕೌಂಟೆಂಟ್‌ಗಳ ಮೂಲಕವು ಸಿಬಿಲ್ ಸ್ಕೋರ್, ಖಾತೆಗಳ ವಿವರಗಳನ್ನು ಪಡೆಯುವುದು ಸೂಕ್ತ.
ಇದನ್ನೂ ಓದಿ – ವಿದೇಶದಲ್ಲಿ ಕೆಲಸ, ಒಂದೂವರೆ ವರ್ಷದಿಂದ ನಂಬಿ ಕುಳಿತ ಶಿವಮೊಗ್ಗದ ಯುವಕರು, ಮುಂದೇನಾಯ್ತು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422