ಶಿವಮೊಗ್ಗ : ವಿಮಾನಯಾನದ ಅನುಭವ ಪಡೆಯಲು ಈ ಹಿಂದೆ ರೈತರೊಬ್ಬರು ಶಿವಮೊಗ್ಗ ವಿಮಾನ (Airport) ನಿಲ್ದಾಣದಿಂದ ಬೆಂಗಳೂರಿಗೆ ಹೋಗಿ ಬಂದಿದ್ದ ವಿಡಿಯೋ ವೈರಲ್ ಆಗಿತ್ತು . ಈಗ ತೋಟದ ಮಾಲೀಕರೊಬ್ಬರು ತಮ್ಮ ತೋಟಕ್ಕೆ ಕೂಲಿ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರನ್ನು ವಿಮಾನದಲ್ಲಿ ಕರೆದೊಯ್ದು ಅವರ ಆಸೆ ಈಡೇರಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹತ್ತು ಮಹಿಳೆಯರು ತಮ್ಮ ತೋಟದ ಮಾಲೀಕನೊಂದಿಗೆ ಗೋವಾಗೆ ಹಾರಿದ್ದಾರೆ.
ಸ್ಟಾರ್ ಏರ್‌ಲೈನ್ಸ್‌ನಲ್ಲಿ ಗೋವಾಗೆ
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಶಿರಗಾನಹಳ್ಳಿಯ ರೈತ ವಿಶ್ವನಾಥ್ ತಮ್ಮ ತೋಟಕ್ಕೆ ಕೆಲಸ ಬರುತ್ತಿದ್ದ ಮಹಿಳೆಯರನ್ನು ವಿಮಾನದಲ್ಲಿ ಕರೆದೊಯ್ದಿದ್ದಾರೆ. ‘ಒಮ್ಮೆಯಾದರು ವಿಮಾನದಲ್ಲಿ ಹಾರಬೇಕುʼ ಎಂಬುದು ಕೆಲಸಕ್ಕೆ ಬರುತ್ತಿದ್ದ ಮಹಿಳೆಯರ ಬಯಕೆಯಾಗಿತ್ತು. ಹಾಗಾಗಿ ವಿಶ್ವನಾಥ್ ವಿಮಾನಯಾನದ ಟ್ರಿಪ್ ಪ್ಲಾನ್ ಮಾಡಿದ್ದರು.
ನಾನು ಆಗಾಗ ವಿಮಾನದಲ್ಲಿ ಹೋಗಿ ಬರುತ್ತಿದ್ದೆ. ನಮ್ಮ ತೋಟದಲ್ಲಿ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರು ನಮ್ಮನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗಿ ಎಂದು ಕೇಳಿದ್ದರು. ತಿರುಪತಿಗೆ ಹೋಗಿ ಬರುವ ಯೋಜನೆ ಇತ್ತು. ಆದರೆ ಟಿಕೆಟ್ ಸಿಗದಿದ್ದರಿಂದ ಗೋವಾ ಟಿಕೆಟ್ ಬುಕ್ ಮಾಡಿದ್ದೇವೆ. ಫೆ.20ರಂದು ವಿಮಾನದಲ್ಲಿಯೇ ಶಿವಮೊಗ್ಗಕ್ಕೆ ಹಿಂತಿರುಗುತ್ತೇವೆ.
ವಿಶ್ವನಾಥ್, ತೋಟದ ಮಾಲೀಕ
ವಿಮಾನ ನಿಲ್ದಾಣದಲ್ಲಿ ಗ್ರೂಪ್ ಫೋಟೊ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರೈತ ವಿಶ್ವನಾಥ್ ತಮ್ಮೊಂದಿಗೆ ಬಂದಿದ್ದ ಹತ್ತು ಮಹಿಳೆಯರ ಗ್ರೂಪ್ ಫೋಟೊ ತೆಗೆಸಿಕೊಂಡು ಖುಷಿ ಪಟಿದ್ದಾರೆ. ಅಲ್ಲದೆ ವಿಮಾನದಲ್ಲಿ ಎಲ್ಲರು ಒಟ್ಟಿಗೆ ಪ್ರಯಾಣಿಸುವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ, ಫೋಟೊಗಳು ಈಗ ವೈರಲ್ ಆಗಿವೆ. ಗೋವಾಗೆ ತೆರಳಿರುವ ಮಹಿಳೆಯರು ಪ್ರಮುಖ ಪ್ರವಾಸಿ ತಾಣಗಳು, ಬೀಚ್‌ಗೆ ಹೋಗಿ ಬರುವ ಯೋಜನೆ ಮಾಡಿಕೊಂಡಿದ್ದಾರೆ.
ವಿಶ್ವನಾಥ್ ಅವರು 15 ಎಕೆರೆ ಅಡಿಕೆ ತೋಟ ಹೊಂದಿದ್ದಾರೆ. ಈ ಮಹಿಳೆಯರು ತೋಟಕ್ಕೆ ನಿತ್ಯ ಕೆಲಸಕ್ಕೆ ಬರುತ್ತಿದ್ದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಉದ್ಯೋಗ ಮೇಳ, ದಿನಾಂಕ ಪ್ರಕಟ, ಹೆಸರು ನೋಂದಣಿ ಶುರು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200