ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ನಾರಾಯಣಗುರು ವಿಚಾರ ವೇದಿಕೆ ಮಹಿಳಾ ಘಟಕ
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
SHIMOGA : ನಾರಾಯಣಗುರು ವಿಚಾರ ವೇದಿಕೆ ಜಿಲ್ಲಾ ಮಹಿಳಾ ಘಟಕ ಅಸ್ತಿತ್ವಕ್ಕೆ ಬಂದಿದೆ. ಜಿಲ್ಲಾಧ್ಯಕ್ಷರಾಗಿ ಪ್ರಭಾವತಿ ಚಂದ್ರಕಾಂತ್ ಆರೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಾನಸ ಸತೀಶ್, ಖಜಾಂಚಿಯಾಗಿ ನಳಿನಾ ಉಮೇಶ್ ಆಯ್ಕೆಯಾಗಿದ್ದಾರೆ. ಎಸ್.ಎನ್.ಜಿ.ವಿ ರಾಜ್ಯಾಧ್ಯಕ್ಷ ಸತ್ಯ ಜಿತ್ ಸೂರತ್ಕಲ್ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಗೌರವ ಅಧ್ಯಕ್ಷರಾಗಿ ಗೀತಾಂಜಲಿ ದತ್ತಾತ್ರೇಯ, ಜಯಂತಿ ಕೃಷ್ಣಮೂರ್ತಿ, ಸುಮತಿ ಆರ್. ಪೂಜಾರಿ, ಉಪಾಧ್ಯಕ್ಷರಾಗಿ ಗೀತಾ ರಾಘವೇಂದ್ರ, ಸೀತಮ್ಮ ರಾಜಪ್ಪ, ಸುಮಿತ್ರಾ, ಮೋಹನ್, ಸಂಘಟನಾ ಕಾರ್ಯದರ್ಶಿಗಳಾಗಿ ಶೃತಿ ರವಿ, ಕಸ್ತೂರಿ ಸಾಗರ, ಶಾಲಿನಿ, ನಾಗರಾಜ್, ಶ್ವೇತಾ ಬಂಡಿ, ಅಶ್ವಿನಿ ಸತೀಶ್, ಚೈತ್ರಾ ಪ್ರದೀಪ್, ನಿರ್ಮಲ ನವೀನ್, ಪ್ರಿಯಾಂಕ ಪ್ರವೀಣ್ ಹಿರೇ ಇಡಗೋಡು, ನೇಮಕವಾಗಿದ್ದಾರೆ.
ಇದನ್ನೂ ಓದಿ – ಭದ್ರಾವತಿಯ ಇಬ್ಬರು ಶಿಕ್ಷಕರು ಅಮಾನತು, ಕಾರಣವೇನು?
ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ
THIRTHAHALLI : ಕೋಳಿ ಅಂಕದ ಮೇಲೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿ ಕೋಳಿಗಳು, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ದಾಳಿ ನಡೆಸಿದ ವೇಳೆ ಅಂಕದಲ್ಲಿದ್ದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕೋಣಂದೂರು ಸಮೀಪದ ಕಟ್ಟೆಗದ್ದೆಯಲ್ಲಿ ಭಾನುವಾರ ಕೋಳಿ ಅಂಕ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಗಜಾನನ ವಾಮನ ಸುತಾರ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.
ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ಇ-ಬಸ್ ಟಿಕೆಟ್ ರೇಟ್ ಕಡಿತ, ವೀಕೆಂಡ್‌ಗೆ ಪ್ರತ್ಯೇಕ ದರ ಫಿಕ್ಸ್
ಮಳೆಗಾಗಿ ಹಣಗೆರೆಯಲ್ಲಿ ವಿಶೇಷ ಪೂಜೆ
THIRTHAHALLI : ಮಳೆ (rain) ಕೈಕೊಟ್ಟಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಮಳೆಗಾಗಿ ಪ್ರಾರ್ಥಿಸಿ ತೀರ್ಥಹಳ್ಳಿ ತಾಲೂಕಿನ ಹಣಗೆರೆಯ ಶ್ರೀ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಶ್ರೀ ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಹಣಗೆರೆ – ಕರೆಹಳ್ಳಿ ಗ್ರಾಮಸ್ಥರು ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.