ಶಿವಮೊಗ್ಗದ ಶ್ರೀಗಂಧ ಕೋಠಿಗೆ ಮುತ್ತಿಗೆ, ಧರಣಿ, ಪೊಲೀಸರ ಜೊತೆ ಮಾತಿನ ಚಕಮಕಿ

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 07 JANUARY 2021

ಮೈಸೂರು ಪೇಪರ್ ಮಿಲ್ಸ್‍ಗೆ (ಎಂಪಿಎಂ) ನೀಡಿದ್ದ ಅರಣ್ಯದ ಲೀಸ್ ಅವಧಿಯನ್ನು ವಿಸ್ತರಿಸಿರುವುದನ್ನು ವಿರೋಧಿಸಿ ಶಿವಮೊಗ್ಗದ ಶ್ರೀಗಂಧ ಕೋಠಿಗೆ ಇವತ್ತು ಮುತ್ತಿಗೆ ಹಾಕಲಾಯಿತು. ನಮ್ಮೂರಿಗೆ ಅಕೇಶಿಯ ಮರ ಬೇಡ ಹೋರಾಟ ಸಮಿತಿ ವತಿಯಿಂದ ಮತ್ತಿಗೆ ಹಾಕಲಾಯ್ತು.

ಮೆರವಣಿಗೆ, ಮುತ್ತಿಗೆ, ಮಾತಿನ ಚಕಮಕಿ

ಒಕ್ಕೂಟದ ವತಿಯಿಂದ ಬೆಕ್ಕಿನ ಕಲ್ಮಠದಿಂದ ಶ್ರೀಗಂಧ ಕೋಠಿಯಲ್ಲಿರುವ ಸಿಸಿಎಫ್‍ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಪೊಲೀಸರು ಹೋರಾಟಗಾರರನ್ನು ತಡೆದರು. ಈ ವೇಳೆ, ನೂಕಾಟ, ತಳ್ಳಾಟ ಸಂಭವಿಸಿತು.

ಗೇಟ್ ಮುಂದೆ ಧರಣಿ

ಸಿಸಿಎಫ್‍ ಕಚೇರಿಯ ಗೇಟ್ ಮುಂದೆಯೇ ಧರಣಿ ಆರಂಭಿಸಿದರು. ಈ ವೇಳೆ ಎಂಪಿಎಂಗೆ ನೀಡಿರುವ ಅರಣ್ಯದ ಭೂಮಿಯ ಗುತ್ತಿಗೆ ಅವಧಿಯನ್ನು ವಿಸ್ತರಣೆ ಮಾಡಿರುವುದನ್ನು ಖಂಡಿಸಿದರು.

ಧರಣಿಯ ವಿಡಿಯೋ ರಿಪೋರ್ಟ್ ಇಲ್ಲಿದೆ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್  shivamoggalive@gmail.com

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : January 7, 2021 at 6:39 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜನವರಿ 7, 2021

Leave a Comment