ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
FATAFAT, 31 AUGUST 2024
ಮಕ್ಕಳು, ತಾಯಂದಿರಿಗೆ ರಾಧಾ – ಕೃಷ್ಣ ವೇಷಭೂಷಣ ಸ್ಪರ್ಧೆ
ಶಿವಮೊಗ್ಗ ಲೈವ್.ಕಾಂ : ಸ.1ರಂದು ರಾಧಾ-ಕೃಷ್ಣ-ಯಶೋಧೆಯ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳು-ತಾಯಂದಿರು-ಮಗುವಿಗೆ ಸ್ಪರ್ಧೆ ನಡೆಯಲಿದೆ. ಸಂಜೆ 4 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. ಗೋಪಾಲಗೌಡ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಮಕ್ಕಳು ತಾಯಂದಿರು ಭಾಗವಹಿಸಬಹುದು. ತಾಯಿ ಮತ್ತು ಮಕ್ಕಳಿಂದ ಸ್ತೋತ್ರ, ಕಥೆ ಹೇಳಿಸಲಾಗುವುದು. ಹೆಚ್ಚಿನ ಮಾಹಿತಿಗೆ – 9964597654
ಶ್ರೀ ಕೃಷ್ಣ ಗಾನ ವೈಭವ ದಿವ್ಯ ಸತ್ಸಂಗ
ಶಿವಮೊಗ್ಗ ಲೈವ್.ಕಾಂ : ಶುಭ ಮಂಗಳ ಕಲ್ಯಾಣ ಮಂದಿರದಲ್ಲಿ ಸೆ.1ರಂದು ಸಂಜೆ 5.30ಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ಗಾನ ವೈಭವ ದಿವ್ಯ ಸತ್ಸಂಗ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಭಜನಾ ಮಂಡಳಿ ಕಾರ್ಯದರ್ಶಿ ಶಬರೀಶ್ ಕಣ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶ್ರೀಗಂಧ ಸಾಂಸ್ಕೃತಿ ಸಂಸ್ಥೆ ಮತ್ತು ಭಜನಾ ಪರಿಷತ್ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮೈ ಸ್ಕೂಲ್‌ನಲ್ಲಿ ಕೃಷ್ಣ – ರಾಧೆ ವೇಷಭೂಷಣ

ಶಿವಮೊಗ್ಗ ಲೈವ್.ಕಾಂ : ನಗರದ ಅಚ್ಚುತರಾವ್ ಬಡಾವಣೆಯ ಮೊದಲನೇ ಅಡ್ಡರಸ್ತೆಯ ಮೈ ಸ್ಕೂಲ್‌ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಕೃಷ್ಣ – ರಾಧೆಯರ ವೇಷಭೂಷಣದಲ್ಲಿ ಕಂಗೊಳಿಸಿದರು. ಈ ಸಂದರ್ಭ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಉಪಸ್ಥಿತರಿದ್ದರು.
ಕಾರಣಗಿರಿ ದೇಗುಲದಲ್ಲಿ ಶ್ರೀ ಕೃಷ್ಣ ಲೋಕ 
ಶಿವಮೊಗ್ಗ ಲೈವ್.ಕಾಂ : ಹೊಸನಗರದ ಕಾರಣಗಿರಿಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಗ್ರಾಮ ಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಲೋಕ ಕಾರ್ಯಕ್ರಮ ನಡೆಯಿತು. 25ಕ್ಕೂ ಹೆಚ್ಚಿನ ಮಂದಿ ಭಗವದ್ಗೀತೆಯ ಹದಿನೆಂಟು ಅಧ್ಯಾಯ ಪಾರಾಯಣ ಮಾಡಿದರು. ಇದೇ ವೇಳೆ ಕೃಷ್ಣ ಲೋಕ ಉದ್ಘಾಟನೆ ನಡೆಯಿತು. ವಿಷ್ಣು ಸಹಸ್ರನಾಮ ಪಠಣ ನಡೆಯಿತು.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಸಂಸ್ಕೃತೋತ್ಸವ, ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ವಿಜ್ಞಾನ ಕುರಿತು ಚರ್ಚೆ


