SHIMOGA NEWS, 27 OCTOBER 2024 : ಮೊಹರೆ ಹಣಮಂತರಾಯ ಪತ್ರಿಕಾ ಪ್ರಶಸ್ತಿ ಪಡೆದ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್.ಮಂಜುನಾಥ್ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡ ಮೀಡಿಯಂ ವಾಹಿನಿ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು (Felicitation).
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಇಬ್ಬರಿನ್ನು ಸನ್ಮಾನಿಸಿದರು.
![]() |
ಯಾರೆಲ್ಲ ಏನೆಲ್ಲ ಮಾತನಾಡಿದರು?
ಪ್ರತಿಫಲ ಇಲ್ಲದೆ ಕೆಲಸ ಮಾಡಿದರೆ ಮತ್ತು ನೈಜ ಹೋರಾಟದಿಂದ ಸ್ಥಾನಮಾನ, ಗೌರವ ಪಡೆಯಲು ಸಾಧ್ಯ. ಎನ್.ಮಂಜುನಾಥ್ ವ್ಯಕ್ತಿಯಾಗಿ ಕೆಲಸ ಮಾಡದೆ ಶಕ್ತಿಯಾಗಿ ಕೆಲಸ ಮಾಡಿದವರು. ಕ್ರಾಂತಿಯೊಂದಿಗೆ ದೀಪ ಬೆಳಗಿಸಿದರು. ಪತ್ರಿಕೋದ್ಯಮದ ನೂರಾರು ಮನಸುಗಳಿಗೆ ಆಶ್ರಯ ನೀಡಿ ಅವರಲ್ಲಿ ಪತ್ರಿಕೋದ್ಯಮದ ದೀಪ ಹಚ್ಚಿದರು.
ಬಿ.ವಿ.ಮಲ್ಲಿಕಾರ್ಜುನಯ್ಯ, ಐಎಫ್ಡಬ್ಲುಜೆ ಅಧ್ಯಕ್ಷ
ಎಡೆಬಿಡದ ಕೆಲಸದ ಮಧ್ಯೆಯೂ ಹೊನ್ನಾಳಿ ಚಂದ್ರಶೇಖರ್ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಾಟಕೋತ್ಸವ, ಶಿಬಿರಗಳನ್ನು ಆಯೋಜಿಸುತ್ತ ಯುವ ನಾಟಕಕಾರರನ್ನು ಹುರಿದುಂಬಿಸುತ್ತಿದ್ದಾರೆ. ಇಂಥವರನ್ನು ಅಕಾಡೆಮಿ ಗುರುತಿಸುವ ಮೂಲಕ ಪತ್ರಕರ್ತರೂ ಆಗಿರುವ ಚಂದ್ರಶೇಖರ್ ಅವರನ್ನು ಗೌರವಿಸಿದೆ. ಇದು ಪತ್ರಿಕಾ ಕ್ಷೇತ್ರಕ್ಕೆ ಹೆಮ್ಮೆಯ ವಿಷಯ.
ಸಂತೋಷ್ ಕಾಚಿನಕಟ್ಟೆ, ಹಿರಿಯ ವರದಿಗಾರ, ವಿಜಯ ಕರ್ನಾಟಕ
ಪತ್ರಿಕೋದ್ಯಮದ ಆಚೆಗು ವಿವಿಧ ಕ್ಷೇತ್ರಗಳಲ್ಲಿ ಎನ್.ಮಂಜುನಾಥ್ ಹೋರಾಟ ಮಾಡಿದ್ದಾರೆ. ಶಿವಮೊಗ್ಗದ ಪತ್ರಕರ್ತರು ರಾಜ್ಯದ ವಿವಿಧೆಡೆ ಕೆಲಸ ಮಾಡುತ್ತಿದ್ದರೆ ಅದಕ್ಕೆ ಮಂಜುನಾಥ್ ಪ್ರಮುಖ ಕಾರಣ. ಇವರಲ್ಲಿ ತರಬೇತಿ ಪಡೆದ ಪತ್ರಕರ್ತರ ಸಂಖ್ಯೆ ಅತಿ ಹೆಚ್ಚು. ಪತ್ರಿಕಾ ಭವನ ನಿರ್ಮಾಣದಲ್ಲಿ ಮಂಜುನಾಥ್ ಅವರ ಪಾತ್ರ ಅತಿ ಮಹತ್ವದ್ದು. ನೈತಿಕ ಪತ್ರಿಕೋದ್ಯಮ ಮಾಡುತ್ತಾ, ಪತ್ರಿಕಾ ರಂಗದ ಎಲ್ಲಾ ಕೆಲಸಕ್ಕೂ ಸದಾ ಪ್ರೋತ್ಸಾಹ ಕೊಡುವ ಗುಣ ಅವರದ್ದು.
ಗೋಪಾಲ ಯಡಗೆರೆ, ಹಿರಿಯ ವರದಿಗಾರ, ಕನ್ನಡಪ್ರಭ
ಮಂಜುನಾಥ್ ಎಲ್ಲರ ಭಾವನೆಗಳಿಗೂ ಬೆಲೆ ಕೊಡುತ್ತಾರೆ. ಯುವ ಪತ್ರಕರ್ತರಿಗೂ ಹಿರಿಯರಷ್ಟೇ ಆತ್ಮೀಯರಾಗಿದ್ದಾರೆ. ಸವಾಲಿನ ಪತ್ರಿಕಾ ಕೆಲಸವನ್ನು ತಮ್ಮ ಶ್ರಮ ಹಾಗೂ ದಿಟ್ಟ ಆಲೋಚನೆಗಳ ಮೂಲಕ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಇಂತಹ ಮಹತ್ತರ ಕೆಲಸ ಗಮನಿಸಿ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.
ಜೇಸುದಾಸ್, ಹಿರಿಯ ವರದಿಗಾರ, ಜೀ ನ್ಯೂಸ್
ವಿವಿಧ ತಾಲೂಕಿನ ಪತ್ರಕರ್ತರು, ರೈತ ಮುಖಂಡ ಕೆ.ಟಿ.ಗಂಗಾಧರ್, ವಕೀಲ ಕೆ.ಪಿ.ಶ್ರೀಪಾಲ್, ಕಾಂಗ್ರೆಸ್ ಮುಖಂಡ ಎಲ್. ಸತ್ಯನಾರಾಯಣರಾವ್ ಸಹಿತ ಹಲವರು ಎನ್.ಮಂಜುನಾಥ್ ಮತ್ತು ಹೊನ್ನಾಳಿ ಚಂದ್ರಶೇಖರ್ ಅವರನ್ನು ಗೌರವಿಸಿದರು.
ಇದನ್ನೂ ಓದಿ » ಅಡಿಕೆ ಧಾರಣೆ | ಈ ವಾರ ಶಿವಮೊಗ್ಗದಲ್ಲಿ ಯಾವ್ಯಾವ ಅಡಿಕೆಗೆ ಎಷ್ಟಿತ್ತು ರೇಟ್?
ಟೆಲೆಕ್ಸ್ ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲೆನಾಡು ಮಿತ್ರ ಪತ್ರಿಕೆ ಸಂಪಾದಕ ನಾಗರಾಜ ನೇರಿಗೆ ನಿರೂಪಣೆ ಮಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವೈದ್ಯನಾಥ ಅಧ್ಯಕ್ಷತೆ ವಹಿಸಿದ್ದರು.
Felicitation : N. Manjunath and Honnali Chandrashekhar were felicitated at Patrika Bhavan. Manjunath, Krantidipa editor, received Mohare Hanamantharaya Journalism Award. Chandrashekhar, Kannada Medium News channel editor, received Karnataka Nataka Academy Award. Shivamogga Press Trust and Karnataka Working Journalists Association organized the event. B.V. Mallikarjunayya felicitated the awardees.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200