ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 AUGUST 2023
SHIMOGA : ತರಗತಿ ಕೊಠಡಿಯಲ್ಲೇ ನಡೆಯಿತು ದೀಪಾವಳಿ. ವಿಜೃಂಭಣೆಯಿಂದ ನೆರವೇರಿತು ಗಣೇಶ ಚತುರ್ಥಿ. ಜೋರಿತ್ತು ಮದುವೆ ಸಂಭ್ರಮ. ಕಣ್ಮನ ಸೆಳೆಯಿತು ನಾಡಹಬ್ಬ (Festival).
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗದ ಕಮಲಾ ನೆಹರು ಕಾಲೇಜಿನಲ್ಲಿ ಒಂದೇ ದಿನ ಎಲ್ಲ ಹಬ್ಬಗಳನ್ನು ಆಚರಿಸಿ ವಿದ್ಯಾರ್ಥಿನಿಯರು ಸಂಭ್ರಮಿಸಿದರು. ಸಾಂಸ್ಕೃತಿಕ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡಾ ವಿಭಾಗದ ಸಮಾರೋಪ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿನಿಯರು ವಿವಿಧ ಹಬ್ಬಗಳನ್ನು ಆಚರಿಸಿ ಖುಷಿ ಪಟ್ಟರು.
ತರಗತಿ ಕೊಠಡಿಗೊಂದು ಹಬ್ಬ
ಹಬ್ಬಗಳ ಕಾನ್ಸೆಪ್ಟ್ ಇಟ್ಟುಕೊಂಡು ಈ ಬಾರಿ ಸಮಾರೋಪ ಸಮಾರಂಭ ನಡೆಸಲಾಯಿತು. ಪ್ರತಿ ತರಗತಿಯ ಕೊಠಡಿಯಲ್ಲಿ ಒಂದೊಂದು ಹಬ್ಬದ (Festival) ಆಚರಣೆ ಮಾಡಲಾಯಿತು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿಯರು ಯುಗಾದಿ ಹಬ್ಬ, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯರು ದೀಪಾವಳಿ ಹಬ್ಬ, ತೃತೀಯ ಬಿ.ಎ ತರಗತಿಯಲ್ಲಿ ಗಣೇಶ ಚತುರ್ಥಿ, ಪ್ರಥಮ ಬಿ.ಎ. ಕೊಠಡಿಯಲ್ಲಿ ಮದುವೆ ಹಬ್ಬ, ದ್ವಿತೀಯ ಬಿ.ಎ. ತರಗತಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ, ತೃತೀಯ ಬಿ.ಕಾಂ ವಿದ್ಯಾರ್ಥಿನಿಯರು ನಾಡ ಹಬ್ಬ ದಸರಾ ಆಚರಣೆ ಮಾಡಿದರು.
ಇದನ್ನೂ ಓದಿ – ಫೋಟೊಗಳಲ್ಲಿ ಶಿವಮೊಗ್ಗದ ಗುಡ್ಡೇಕಲ್ ಹರೋಹರ ಜಾತ್ರೆ ವೈಭವ, ಹೇಗಿದೆ ಜಾತ್ರೆ? – PHOTO ALBUM
ತರಗತಿಯಲ್ಲೇ ಪಟಾಕಿ ಸಿಡಿಸಿ ಪೂಜೆ
ಹಬ್ಬದ ಕಾನ್ಸೆಪ್ಟ್ ಇದ್ದಿದ್ದರಿಂದ ವಿದ್ಯಾರ್ಥಿನಿಯರು ತರಗತಿಯ ಕೊಠಡಿಗಳನ್ನು ಹೂವು, ತಳಿರು ತೋರಣಗಳಿಂದ ಸಿಂಗರಿಸಿದ್ದರು. ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು. ದೀಪಾವಳಿ ಹಬ್ಬದ ಕಾನ್ಸೆಪ್ಟ್ ಇದ್ದ ಕೊಠಡಿಯಲ್ಲಿ ಪಟಾಕಿ ಹಚ್ಚಿ ಖುಷಿ ಪಟ್ಟರು. ಮದುವೆ ಹಬ್ಬದ ಕಾನ್ಸೆಪ್ಟ್ ಹಿನ್ನಲೆ ವಿದ್ಯಾರ್ಥಿನಿಯರು ನವ ಜೋಡಿಗಳಂತೆ ಸಿದ್ಧವಾಗಿದ್ದರು. ವಿವಾಹ ಸಂಪ್ರದಾಯಗಳನ್ನು ಮಾಡಿದರು. ತರಗತಿಯ ಇತರೆ ವಿದ್ಯಾರ್ಥಿನಿಯರು ‘ನವ ಜೋಡಿʼಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸಿನಿಮಾ ಹಾಡುಗಳಿಗೆ ವಿದ್ಯಾರ್ಥಿನಿಯರು ಹೆಜ್ಜೆ ಹಾಕಿ ಖುಷಿಪಟ್ಟರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವಿದ್ಯಾರ್ಥಿನಿಯರ ಜೊತೆ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.