ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ಕಾಶ್ಮೀರದಲ್ಲಿ ಉಗ್ರರ ದಾಳಿ ವೇಳೆ ಸಾವನ್ನಪ್ಪಿದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಅವರ ಅಂತ್ಯಕ್ರಿಯೆ (Final Rites) ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಪುತ್ರ ಅಭಿಜಯ್ ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.
ಧಾರ್ಮಿಕ ವಿಧಿವಿಧಾನ, ಸರ್ಕಾರಿ ಗೌರವ
ಅಂತ್ಯಕ್ರಿಯೆಗು ಮುನ್ನ ರೋಟರಿ ಚಿತಾಗಾರದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಗೌರವ ಸಲ್ಲಿಸಲಾಯತು. ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಮನ ಸಲ್ಲಿಸಿದರು. ರಾಜ್ಯ ಸರ್ಕಾರದ ವತಿಯಿಂದ ಸಚಿವ ಮಧು ಬಂಗಾರಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿ ಹಲವರು ಇದ್ದರು.
ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗ ಸಿಟಿಯಲ್ಲಿ ಮಂಜುನಾಥ ರಾವ್ ಅಂತಿಮ ಯಾತ್ರೆ, ಹೇಗಿತ್ತು? ಯಾರೆಲ್ಲ ಇದ್ದರು?
ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ಗುಂಡಾ ಭಟ್ಟರ ನೇತೃತ್ವದಲ್ಲಿ ನಾರಾಯಣ ಬಲಿ ಹೋಮ ನಡೆಸಲಾಯಿತು. ಆ ನಂತರ ಪುತ್ರ ಅಭಿಜಯ್, ಮಂಜುನಾಥ ರಾವ್ ಅವರ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ (Final Rites) ಮಾಡಿದರು.



LATEST NEWS
- ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್‌ಗೆ ಕಾದಿತ್ತು ಶಾಕ್, ಆಗಿದ್ದೇನು?

- ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್ ರಚನೆ, ಯಾರಿಗೆ ಯಾವ ಜವಾಬ್ದಾರಿ?

- ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

- ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

- ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

About The Editor
ನಿತಿನ್ ಆರ್.ಕೈದೊಟ್ಲು















ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಕಾಮೆಂಟ್ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?