
ಶಿವಮೊಗ್ಗ ಲೈವ್.ಕಾಂ | SHIMOGA | 22 ಏಪ್ರಿಲ್ 2020
ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಬೆಳಗ್ಗೆ ವಾಕಿಂಗ್ ಹೋದವರಿಗೆ ಶಿವಮೊಗ್ಗ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ವಾಕಿಂಗ್ ಹೋಗುತ್ತಿದ್ದವರನ್ನು ತಡೆದು ತಿಳಿ ಹೇಳಿದ್ದಾರೆ. ಕೆಲವರಿಗೆ ನಿಂತಲ್ಲೇ ಜಾಗಿಂಗ್ ಮಾಡಿಸಿ, ಫಿಟ್ನೆಸ್ ಶಿಕ್ಷೆ ನೀಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಸಂಜೀವ್ ಕುಮಾರ್ ಅವರು ಬೆಳಗ್ಗೆ ರೌಂಡ್ಸ್ ಹೋಗಿದ್ದರು. ಈ ವೇಳೆ ಆಲ್ಕೊಳ, ಗುಡ್‌ಲಕ್ ಸರ್ಕಲ್ ಸುತ್ತಮುತ್ತ ಜನರು ವಾಕಿಂಗ್ ಮಾಡುತ್ತಿದ್ದರು. ಇವರನ್ನು ತಡೆದು ವಾಕಿಂಗ್ ಮಾಡದಂತೆ ಮನವಿ ಮಾಡಿದ್ದಾರೆ. ಹಿರಿಯ ನಾಗರೀಕರಿಗೆ ತಿಳಿ ಹೇಳಿ ಕಳುಹಿಸಿದ್ದಾರೆ.
ಯುವಕರಿಗೆ ಫಿಟ್‌ನೆಸ್ ಶಿಕ್ಷೆ
ಇನ್ನು ವಾಕಿಂಗ್, ಜಾಗಿಂಗ್ ಮಾಡುತ್ತಿದ್ದ ಯುವಕರನ್ನು ಕರೆದು ಫಿಟ್ನೆಸ್ ಪರೀಕ್ಷೆ ಮಾಡಿದ್ದಾರೆ. ನಿಂತಲ್ಲೇ ಜಾಗಿಂಗ್ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಾಕ್‌ಡೌನ್ ಸಂದರ್ಭ ಅನಗತ್ಯವಾಗಿ ಜನರು ಮನೆಯಿಂದ ಹೊರಗೆ ಓಡಾಡದಂತೆ ಸೂಚಿಸಲಾಗಿದೆ. ಹೀಗಿದ್ದು ಜನರು ಹಲವು ಕಡೆ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುತ್ತಿದ್ದಾರೆ. ಕ್ರಿಕೆಟ್, ಬ್ಯಾಡ್ಮಿಂಟನ್ ಆಟವಾಡುತ್ತಿದ್ದಾರೆ. ಕರೋನ ಸೋಂಕು ಹರಡುವ ಆತಂಕದ ಹಿನ್ನೆಲೆ ಇವೆಲ್ಲವನ್ನು ನಿಷೇಧಿಸಲಾಗದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]