ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 1 NOVEMBER 2023
SHIMOGA : ತಾಂತ್ರಿಕ ದೋಷದಿಂದಾಗಿ ಶಿವಮೊಗ್ಗ – ಬೆಂಗಳೂರಿಗೆ ವಿಮಾನ ಟೇಕಾಫ್ (Take off) ಆಗದೆ ಪ್ರಯಾಣಿಕರು ಪರದಾಡುವಂತಾಯಿತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 11.25ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ಟೇಕ್ ಆಫ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಹ್ಯಾಂಗರ್ ಜಾಗದಲ್ಲೇ ವಿಮಾನ ನಿಂತಿತ್ತು. ವಿಮಾನ ಹತ್ತಲು ಸಜ್ಜಾಗಿ ಬಂದಿದ್ದ ಸುಮಾರು 60 ಪ್ರಯಾಣಿಕರು ನಿರಾಸೆಯಿಂದ ಮತ್ತು ಗೊಂದಲದಿಂದ ಟರ್ಮಿನಲ್ನಲ್ಲೇ ಉಳಿಯಬೇಕಾಯಿತು.
ಇದನ್ನೂ ಓದಿ-ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್ಗೆ ವಿಮಾನ, ವೇಳಾಪಟ್ಟಿ, ಟಿಕೆಟ್ ದರ ಪ್ರಕಟ, ಎಷ್ಟಿದೆ?
ವಿಮಾನ ಸಂಖ್ಯೆ 6E7731 ಬೆಳಗ್ಗೆ 9.53ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ ಬೆಳಗ್ಗೆ 11.09ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಿತ್ತು. ಬೆಳಗ್ಗೆ 11.25ಕ್ಕೆ ಹೊರಡಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಟೇಕಾಫ್ ಆಗಲಿಲ್ಲ.
ವಿಮಾನದಲ್ಲಿ ಸಣ್ಣ ತಾಂತ್ರಿಕ ಸಮಸ್ಯೆ ಎದುರಾದರು ಪೈಲೆಟ್ಗಳು ವಿಮಾನವನ್ನು ಟೇಕ್ ಆಫ್ ಮಾಡುವುದಿಲ್ಲ. ದೋಷ ಸರಿಯಾದ ಮೇಲಷ್ಟೆ ವಿಮಾನ ಹಾರಾಟಕ್ಕೆ ಮುಂದಾಗುತ್ತಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ವೈಮಾನಿಕ ಕ್ಷೇತ್ರದಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ.






