SHIVAMOGGA LIVE NEWS | 25 FEBRURARY 2023
SHIMOGA : ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರು ಅಮೀರ್ ಅಹಮದ್ ವೃತ್ತದಲ್ಲಿ ವಿಮಾನದ ಮಾದರಿ (Flight Model) ಇರಿಸಿದ್ದಾರೆ. ಇದನ್ನು ನೋಡಲು, ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಸರ್ಕಲ್ ಗೆ ಆಗಮಿಸುತ್ತಿದ್ದಾರೆ.
ಅಮೀರ್ ಅಹಮದ್ ಸರ್ಕಲ್ ನಲ್ಲಿ ಇವತ್ತು ಏರ್ ಇಂಡಿಯಾ ವಿಮಾನದ ಮಾದರಿಯನ್ನು ಇಡಲಾಗಿದೆ. ಸರ್ಕಲ್ ನ ಮಧ್ಯದಲ್ಲಿ ವಿಮಾನ ಹಾರಲು ಸಿದ್ಧವಾಗಿರುವ ರೀತಿಯ ಮಾಡಲ್ (Flight Model) ಇರಿಸಲಾಗಿದೆ.
ನಗರಾದ್ಯಂತ ಅಲಂಕಾರ
ಶಿವಮೊಗ್ಗ ವಿಮಾನ ನಿಲ್ದಾಣ ಸೇರಿದಂತೆ ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆ.27ರಂದು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಇದು ಸರ್ಕಾರ ಕಾರ್ಯಕ್ರಮ. ಆದರೆ ಬಿಜೆಪಿ ಕಾರ್ಯಕರ್ತರು ಇದನ್ನು ಬಿಜೆಪಿ ಕಾರ್ಯಕ್ರಮ ಎಂಬಂತೆ ಬಿಂಬಿಸಿದ್ದಾರೆ. ನಗರಾದ್ಯಂದ ಬಿಜೆಪಿ ಧ್ವಜ, ಬಂಟಿಂಗ್ಸ್ ಕಟ್ಟಿದ್ದಾರೆ.
ಇದನ್ನೂ ಓದಿ –ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲಿ ಶಕ್ತಿಶಾಲಿ ಆಂಜನೇಯ, ಕೊನೆತನಕ ಉಳಿದಿದ್ದ ಗುಡಿ ದಿಢೀರ್ ತೆರವಾಗಿದ್ದೇಕೆ?
ಗಾಂಧಿ ಬಜಾರ್ ಬಳಿ ಬಿಜೆಪಿ ಬಿ.ಹೆಚ್.ರಸ್ತೆ, ನೆಹರೂ ರಸ್ತೆ, ವಿದ್ಯಾನಗರದಲ್ಲಿ ಬಿ.ಹೆಚ್.ರಸ್ತೆ, ಎಲ್ಲಾ ಪ್ರಮುಖ ವೃತ್ತಗಳಲ್ಲಿ ಬಿಜೆಪಿ ಧ್ವಜ, ಬಂಟಿಂಗ್ಸ್, ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಎಲ್ಲೆಲ್ಲೂ ವಿಮಾನ ನಿಲ್ದಾಣ ಉದ್ಘಾಟನೆಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ.
ಇದನ್ನೂ ಓದಿ – ಪ್ರವಾಸಿ ತಾಣವಾಯ್ತು ಶಿವಮೊಗ್ಗ ವಿಮಾನ ನಿಲ್ದಾಣ, ಗೇಟ್ ಬಳಿ ಕಾದು ನಿಲ್ಲುತ್ತಿದ್ದಾರೆ ನೂರಾರು ಜನ