SHIVAMOGGA LIVE NEWS | 21 FEBRUARY 2023
SHIMOGA : ಸೋಗಾನೆ ವಿಮಾನ ನಿಲ್ದಾಣಕ್ಕೆ ಡಿಜಿಸಿಎ ಲೈಸೆನ್ಸ್ ನೀಡಿದೆ. ಇವತ್ತಿನಿಂದಲೆ ವಿಮಾನಗಳ (FLIGHT) ಟ್ರಯಲ್ ರನ್ ನಡೆಯಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ ಅವರು, ಕಳೆದ ರಾತ್ರಿ ವಿಮಾನಯಾನ ಪ್ರಾಧಿಕಾರದ ವತಿಯಿಂದ ಲೈಸೆನ್ಸ್ ಸಿಕ್ಕಿದೆ. ರಾಜ್ಯ ಸರ್ಕಾರವೆ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಹೈಟೆಕ್ ಟರ್ಮಿನಲ್, ಒಳಗೆ ಹೇಗಿದೆ? ಏನೇನು ಸೌಲಭ್ಯವಿದೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಇವತ್ತಿನಿಂದಲೆ ಟ್ರಯಲ್ ರನ್
ಇನ್ನು, ವಿಮಾನ ನಿಲ್ದಾಣದಲ್ಲಿ ಇವತ್ತಿನಿಂದಲೆ ಟ್ರಯಲ್ ರನ್ ನಡೆಯಲಿದೆ. ರಕ್ಷಣಾ ಪಡೆಗಳ ವಿಮಾನಗಳು (Flight) ಇವತ್ತಿನಿಂದ ಹಾರಾಟ ನಡೆಸಲಿವೆ ಎಂದು ತಿಳಿಸಿದರು.
ಇನ್ಮುಂದೆ ಪ್ರೆವೇಶ ನಿರ್ಬಂಧ
ಲೈಸೆನ್ಸ್ ನೀಡುತ್ತಿದ್ದಂತೆ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಸಂಸದನಾಗಿ ನನ್ನ ಪ್ರವೇಶಕ್ಕು ಅನುಮತಿ ಇರುವುದಿಲ್ಲ. ಎಲ್ಲವು ನಿಯಮಾನುಸಾರ ಆಗಬೇಕಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.