ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಜೂನ್ 2020
ಇವತ್ತಿನಿಂದ ಶಿವಮೊಗ್ಗದ ಫುಡ್ ಕೋರ್ಟ್‍ಗಳು ಪುನಃ ಆರಂಭವಾಗಿವೆ. ಗೋಪಿ ಸರ್ಕಲ್ ಸಮೀಪದ ಸಸ್ಯಹಾರ ಮತ್ತು ಮಾಂಸಾಹಾರ ಫುಡ್ ಕೋರ್ಟ್‍ಗಳು ಓಪನ್ ಆಗಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಫುಡ್ ಕೊರ್ಟ್‍ಗಳನ್ನು ಸ್ವಚ್ಛ ಮಾಡಲಾಗಿದೆ. ಕೆಲ ಮಳಿಗೆಗಳ ಮುಂದೆ ಸಾಮಾಜಿಕ ಅಂತರದ ಮಾರ್ಕ್ ಹಾಕಲಾಗಿದೆ. ‘ಇವತ್ತಿನಿಂದ ಎಲ್ಲವು ಪುನಃ ಆರಂಭವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತದೆ’ ಎಂದು ಫುಡ್ ಕೋರ್ಟ್ ಕಾರ್ಯದರ್ಶಿ ನಾರಾಯಣ್ ತಿಳಿಸಿದ್ದಾರೆ.
ಫುಡ್ ಕೋರ್ಟ್‍ನ ಕೆಲವು ಅಂಗಡಿಗಳಷ್ಟೇ ತೆರೆದಿವೆ. ಬೆಳಗ್ಗೆಯಿಂದಲೇ ಅಡುಗೆ ಮಾಡಲಾಗುತ್ತಿದೆ. ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ಆಹಾರ ಸಿದ್ಧಪಡಿಸಲಾಗುತ್ತಿದೆ. ಲಾಕ್‍ಡೌನ್ ಬಳಿಕ ಇದೇ ಮೊದಲ ಬಾರಿಗೆ ಫುಡ್ ಕೊರ್ಟ್ ಓಪನ್ ಆಗುತ್ತಿರುವುದರಿಂದ, ಗ್ರಾಹಕರ ಸಂಖ್ಯೆ ನಿರೀಕ್ಷಿಸಿದಷ್ಟಿಲ್ಲ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]