ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 16 APRIL 2021
ಸಾರಿಗೆ ನೌಕರರ ಮುಷ್ಕರ ಇವತ್ತು ಹತ್ತನೆ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ನೌಕರರ ವರ್ಗಾವಣೆ ಮತ್ತು ಅಮಾನತು ಪಟ್ಟಿಯು ದೊಡ್ಡದಾಗುತ್ತಿದೆ.
ಇದನ್ನೂ ಓದಿ – ಗೋಪಿ ಸರ್ಕಲ್ನಲ್ಲಿ ಮೇಣದ ಬತ್ತಿ ಹಿಡಿದು ಸಾರಿಗೆ ನೌಕರರ ಪ್ರತಿಭಟನೆ, ಗೂಢಚರ್ಯೆಗೆ ಆಕ್ರೋಶ
ಶಿವಮೊಗ್ಗ ವಿಭಾಗದ ನಾಲ್ವರನ್ನು ವರ್ಗಾವಣೆ ಮಾಡಲಾಗಿದೆ. ಇನ್ನೂ ನಾಲ್ವರನ್ನು ಅಮಾನತು ಮಾಡಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್.ನವೀನ್ ಆದೇಶಿಸಿದ್ದಾರೆ.
ಅಮಾನತು ಆದವರು ಯಾರು?
ಮುಷ್ಕರದ ನಡುವೆಯು ಕೆಲವು ಕೆಎಸ್ಆರ್ಟಿಸಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಏಪ್ರಿಲ್ 12ರಂದು ಸಾಗರ ಘಟಕದಿಂದ ತರಬೇತಿ ಚಾಲಕ ಪ್ರಶಾಂತ್ ನಾರಾಯಣ ನಾಯ್ಕ ಅವರು ಸಾಗರದಿಂದ ಬಸ್ ಚಲಾಯಿಸಿಕೊಂಡು ಬಂದಿದ್ದರು. ಸಾಗರ ಪಟ್ಟಣ ವ್ಯಾಪ್ತಿಯ ಡಿವೈಎಸ್ಪಿ ಕಚೇರಿ ಎದುರು 20ಕ್ಕೂ ಹೆಚ್ಚು ಜನ ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣ ಸಂಬಂಧ ಚಾಲಕ ವೀರೇಶ್ ಹಂಡೆಗಾರ ಮತ್ತು ಚಾಲಕ ಕಂ ನಿರ್ವಾಹಕ ಶಿವಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ಇನ್ನು, ಏಪ್ರಿಲ್ 12ರಂದು ಶಿವಮೊಗ್ಗದಿಂದ ಭದ್ರಾವತಿಗೆ ಚಾಲಕ ಟಿ.ಡಿ.ಮಂಜುನಾಥ್ ಮತ್ತು ನಿರ್ವಾಹಕ ಶ್ರೀಧರ್ ಅವರು ಬಸ್ ತೆಗೆದುಕೊಂಡು ಹೋಗುತ್ತಿದ್ದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚಾಲಕ ಕಂ ನಿರ್ವಾಹಕರಾದ ತ್ಯಾವರನಾಯ್ಕ್ ಮತ್ತು ಹೆಚ್.ಇ.ಪ್ರಕಾಶ್ ಅವರನ್ನು ಅಮಾನತು ಮಾಡಲಾಗಿದೆ.
ಯಾರೆಲ್ಲರ ವರ್ಗಾವಣೆ ಮಾಡಲಾಗಿದೆ?
ಮಹಿಳಾ ಕಂಡಕ್ಟರ್ಗಳಾದ ಕವಿತಾ, ಗೌರಮ್ಮ ಅವರನ್ನು ಶಿವಮೊಗ್ಗದಿಂದ ಸಾಗರಕ್ಕೆ ವರ್ಗಾಯಿಸಲಾಗಿದೆ. ಭದ್ರಾವತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕಿ ವಸಂತ ಕುಮಾರಿ, ಚಾಲಕಿ ಕಂ ನಿರ್ವಾಹಕಿ ಶಕುಂತಲಮ್ಮ ಅವರನ್ನು ಸಾಗರಕ್ಕೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ KSRTC ವಿಭಾಗಕ್ಕೆ ಕೋಟಿ ಕೋಟಿ ಆದಾಯ ಖೋತಾ, ಖಾಸಗಿ ಟ್ರಾವೆಲ್ಸ್ಗೆ ಬಂಪರ್
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422