ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022
ಉದ್ಯೋಗಿಯೊಬ್ಬ ತನ್ನ ಕಂಪನಿಗೆ ಸುಮಾರು 3 ಲಕ್ಷ ರೂ. ವಂಚಿಸಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತ ತಲೆ ಮರೆಸಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಉದ್ಯೋಗಿಯ ಹುಡುಕಾಟ ನಡೆಯುತ್ತಿದೆ.
ಆಸ್ಪತ್ರೆಗಳಿಗೆ ಸಾಫ್ಟ್ ವೇರ್ ಒದಗಿಸುವ ಕರ್ಪೊರೇಟ್ ಕಂಪನಿಯ ಉದ್ಯೋಗಿಯೊಬ್ಬ ವಂಚನೆ ಆರೋಪ ಎದುರಿಸುತ್ತಿದ್ದಾನೆ.
ಏನಿದು ವಂಚನೆ ಪ್ರಕರಣ?
ಸಾಫ್ಟ್ ವೇರ್ ಕಂಪನಿಯ ಫೀಲ್ಡ್ ಎಗ್ಸಿಕ್ಯೂಟಿವ್ ಕಬೀರ್ ಅಸ್ಲಾಂ ಎಂಬುವವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.
ಗ್ರಾಹಕರಿಂದ ಹಣ ಸಂಗ್ರಹ ಮಾಡಿ, ಅದನ್ನು ಕಂಪನಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವ ಜವಾಬ್ದಾರಿಯನ್ನು ಫಿಲ್ಡ್ ಎಗ್ಸಿಕ್ಯೂಟಿವ್ ಕಬೀರ್ ಅಸ್ಲಾಂಗೆ ವಹಿಸಲಾಗಿತ್ತು. ಜನವರಿ ತಿಂಗಳಲ್ಲಿ ಕಂಪನಿ ಪರವಾಗಿ ಗ್ರಾಹಕರಿಂದ 8.02 ಲಕ್ಷ ರೂ. ಹಣ ಸಂಗ್ರಹಿಸಲಾಗಿತ್ತು.
ಆದರೆ ಕಂಪನಿಯ ಬ್ಯಾಂಕ್ ಸ್ಟೇಟ್ ಮೆಂಟ್ ಪರಿಶೀಲಿಸಿದಾಗ 4.86 ಲಕ್ಷ ರೂ. ಮಾತ್ರ ಪಾವತಿ ಮಾಡಿರುವುದು ಗೊತ್ತಾಗಿದೆ. ಉಳಿದ 3.15 ಲಕ್ಷ ರೂ. ಖಾತೆಗೆ ಜಮೆ ಆಗರಲಿಲ್ಲ. ಈ ಕುರಿತು ಕಂಪನಿಯ ಹಿರಿಯ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಆಗ ಕಬೀರ್ ಅಸ್ಲಾಂ ಪೂರ್ಣ ಹಣ ಪಾವತಿ ಮಾಡಿರುವುದಾಗಿ ತಿಳಿಸಿದ್ದ. ಬ್ಯಾಂಕ್ ರಸೀದಿಗಳನ್ನು ಕೂಡ ಒದಗಿಸಿದ್ದ.
ಪೂರ್ಣ ಪರಿಶೀಲನೆ ನಡೆಸಿದಾಗ ಕಂಪನಿಗೆ ವಂಚನೆ ಆಗಿರುವುದು ಗೊತ್ತಾಗಿದೆ. ಕಬೀರ್ ಅಸ್ಲಾಂನನ್ನು ಸಂಪರ್ಕಿಸುವ ಪ್ರಯತ್ನ ವಿಫಲವಾಗಿದೆ. ಆದ್ದರಿಂದ ಕಂಪನಿಯ ಹಿರಿಯ ಅಧಿಕಾರಿಗಳು ದೂರು ನೀಡಿದ್ದಾರೆ. 3.15 ಲಕ್ಷ ರೂ. ಹಣ ವಂಚನೆ ಮಾಡಿರುವ ಸಂಬಂಧ ಕಾನೂನು ಕ್ರಮ ಕೈಗೊಳ್ಳುಬೇಕು. ಬ್ಯಾಂಕ್ ಒಳಗೆ ನಕಲಿ ರಶೀದಿ ಒದಗಿಸಿರುವ ಸಾಧ್ಯತೆ ಇದ್ದು, ಆ ಬಗ್ಗೆಯು ತನಿಖೆ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ | ವಿನೋಬನಗರದ ಮೈಕ್ರೋ ಫೈನಾನ್ಸ್ ಸಂಸ್ಥೆಗೆ ವಂಚಿಸಿ ಪರಾರಿಯಾದ ಸಿಬ್ಬಂದಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422