ಶಿವಮೊಗ್ಗ: ಮಂಡಿನೋವು ಹಾಗೂ ಕೀಲುನೋವಿನಿಂದ ಬಳಲುತ್ತಿರುವವರಿಗಾಗಿ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಸೆಪ್ಟೆಂಬರ್ 1 ರಿಂದ 7 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
ಯಾರೆಲ್ಲ ಚಿಕಿತ್ಸೆ ಪಡೆಯಬಹುದು?
ಕೂತು ಏಳಲು ಕಷ್ಟಪಡುವವರಿಗೆ, ಮೆಟ್ಟಿಲು ಹತ್ತಲು ಹಾಗೂ ದಿನನಿತ್ಯದ ಕೆಲಸಗಳನ್ನು ಮಾಡಲು ತೊಂದರೆ ಅನುಭವಿಸುತ್ತಿರುವವರಿಗೆ ವೈದ್ಯಕೀಯ ಸಲಹೆ ದೊರೆಯಲಿದೆ. ವಯೋಸಹಜ ನೋವಿನಿಂದ ನರಳುತ್ತಿರುವ ಹಿರಿಯ ನಾಗರಿಕರಿಗೆ ಅನುಭವಿ ವೈದ್ಯರ ತಂಡದಿಂದ ಅಗತ್ಯ ಚಿಕಿತ್ಸೆ, ಮಾರ್ಗದರ್ಶನ ಸಿಗಲಿದೆ ಎಂದು ನಂಜಪ್ಪ ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಚಿತ ಸಮಾಲೋಚನೆ, ಶೇ.20 ರಿಯಾಯಿತಿ
ನುರಿತ ಮೂಳೆ ಶಸ್ತ್ರಚಿಕಿತ್ಸಕರಿಂದ ಉಚಿತ ಸಮಾಲೋಚನೆ ಲಭ್ಯವಿರುತ್ತದೆ. ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಸಮಾಲೋಚನೆ ಪಡೆಯುವವರಿಗೆ ಮಾತ್ರ ನೋಂದಣಿ ಶುಲ್ಕ ಅನ್ವಯಿಸಲಿದೆ. ಇನ್ನು, ರಕ್ತ ಪರೀಕ್ಷೆ ಹಾಗೂ ರೋಗನಿರ್ಣಯ ಪರೀಕ್ಷೆಗಳಿಗೆ ಶೇ.20 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಮೂಳೆ ತಜ್ಞರ ಜೊತೆಗೆ ಫಿಸಿಯೋಥೆರಪಿಸ್ಟ್, ಆಹಾರ ತಜ್ಞರು ಹಾಗೂ ಸೈಕಾಲಜಿಸ್ಟ್‌ಗಳು ಶಿಬಿರದಲ್ಲಿ ಉಪಸ್ಥಿತರಿರಲಿದ್ದಾರೆ. ಮಂಡಿನೋವಿನ ಸಮಸ್ಯೆಯಿಂದ ಬಳಲುತ್ತಿರುವ ವಯಸ್ಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ನಂಜಪ್ಪ ಲೈಫ್ ಕೇರ್ ಆಡಳಿತ ಮಂಡಳಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 08182-267300 ಸಂಖ್ಯೆಯನ್ನು ಸಂಪರ್ಕಿಸಬಹುದು.