ಸರ್ಕಾರದಿಂದ ಕಾರ್ಮಿಕರಿಗೆ ಉಚಿತ ಸುರಕ್ಷತಾ ಕಿಟ್‌, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿರುವ ಕಾರ್ಮಿಕರಿಗೆ ಉಚಿತವಾಗಿ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಅರ್ಹ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೇಷನ್, ಎಲೆಕ್ಟ್ರೀಷಿಯನ್, ವೆಲ್ಡರ್, ಕಾರ್ಪೆಂಟರ್, ಪೇಂಟಿಂಗ್ ಹಾಗೂ ಪ್ಲಂಬಿಂಗ್ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಈವರೆಗೆ ಕಿಟ್ ಪಡೆಯದವರು ಅರ್ಹರಾಗಿದ್ದಾರೆ. ಆಸಕ್ತರು ತಮ್ಮ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು.

SHIMOGA-NEWS-UPDATE

ಚಾಲ್ತಿಯಲ್ಲಿರುವ ಕಟ್ಟಡ ಕಾರ್ಮಿಕರ ನೋಂದಣಿ ಗುರುತಿನ ಚೀಟಿ ಮತ್ತು ಫಲಾನುಭವಿಯ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದರೊಂದಿಗೆ ಈಗಾಗಲೇ ಸುರಕ್ಷತಾ ಕಿಟ್ ಪಡೆದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನ ಎಂದು ಉಪವಿಭಾಗದ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.