ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 SEPTEMBER 2023
SHIMOGA : ರಾಗಿಗುಡ್ಡದಲ್ಲಿ ಇವತ್ತು ಸಾಲು ಸಾಲು ಗಣಪತಿ ವಿಸರ್ಜನೆ ಪೂರ್ವ ಮೆರವಣಿಗೆ (Procession) ನಡೆಯಲಿದೆ. ಈ ಹಿನ್ನೆಲೆ ಮುಖ್ಯ ರಸ್ತೆಯಲ್ಲಿ ಅಲಂಕಾರ ನೆರವೇರಿಸಲಾಗಿದೆ. ಇನ್ನು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ರಾಗಿಗುಡ್ಡ ಬಡಾವಣೆಯಲ್ಲಿ ಇವತ್ತು ಒಟ್ಟಿಗೆ ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಬಡಾವಣೆಯ ವಿವಿಧ ಬೀದಿಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿಗಳನ್ನು ಒಟ್ಟಿಗೆ ಮೆರವಣಿಗೆ (Procession) ಮಾಡಲಾಗುತ್ತದೆ. ಹಾಗಾಗಿ ದೊಡ್ಡ ಸಂಖ್ಯೆಯ ಜನರು ಸೇರುವ ನಿರೀಕ್ಷೆ ಇದೆ.
ಬಡಾವಣೆಯಲ್ಲಿ ಅಲಂಕಾರ
ಗಣಪತಿಗಳ ಮೂರ್ತಿಗಳ ಮೆರವಣಿಗೆ ಹಿನ್ನಲೆ ರಾಗಿಗುಡ್ಡ ಮುಖ್ಯ ರಸ್ತೆಯಲ್ಲಿ ಅಲಂಕಾರ ಮಾಡಲಾಗಿದೆ. ಕೇಸರಿ ಬಂಟಿಂಗ್ಸ್ ಕಟ್ಟಲಾಗಿದೆ. ಅಲ್ಲಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಎಲ್ಲೆಡೆ ಸೀರಿಯಲ್ ಸೆಟ್ ಲೈಟಿಂಗ್ ಹಾಕಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಸಾಫ್ಟ್‌ವೇರ್ ಇಂಜಿನಿಯರ್‌ಗೆ 99 ಲಕ್ಷ ರೂ. ಪಂಗನಾಮ, ಮ್ಯಾಟ್ರಿಮೋನಿ ಯುವತಿಯೆ ಕಾರಣ, ಹೇಗದು?
ಪೊಲೀಸ್ ಪಥ ಸಂಚಲನ
ಮೆರವಣಿಗೆ ಹಿನ್ನೆಲೆಯಲ್ಲಿ ರಾಗಿಗುಡ್ಡದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶನಿವಾರ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ ನಡೆಸಲಾಯಿತು. ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ರೂಟ್ ಮಾರ್ಚ್ ನಡೆಯಿತು. ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್‌ಪಿ ಸುರೇಶ್, ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್, ಸಿವಿಲ್, ಡಿಎಆರ್, ಕೆಎಸ್‌ಆರ್‌ಪಿ ಸಿಬ್ಬಂದಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್
ಗಣಪತಿಗಳ ಮೆರವಣಿಗೆ ಹಿನ್ನೆಲೆ ರಾಗಿಗುಡ್ಡದಲ್ಲಿ ಬಂದೋಸ್ತ್‌ಗೆ ದೊಡ್ಡ ಸಂಖ್ಯೆಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 4 ಡಿವೈಎಸ್‌ಪಿ, 9 ಇನ್ಸ್‌ಪೆಕ್ಟರ್, 15 ಸಬ್ ಇನ್ಸ್‌ಪೆಕ್ಟರ್, 31 ಎಎಸ್‌ಐ, 189 ಹೆಡ್ ಕಾನ್ಸ್‌ಟೇಬಲ್ ಮತ್ತು ಕಾನ್ಸ್‌ಟೇಬಲ್‌ಗಳು, 110 ಗೃಹರಕ್ಷಕ ದಳ ಸಿಬ್ಬಂದಿ, 1 ಡಿಎಆರ್ ತುಕಡಿ, 6 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರಾಗಿಗುಡ್ಡದಲ್ಲಿ ಬ್ರೀಫಿಂಗ್ ನಡೆಸಿದರು.
ಇದನ್ನೂ ಓದಿ – GOOD NEWS – ಶಿವಮೊಗ್ಗಕ್ಕೆ ಪ್ರಧಾನ ಮಂತ್ರಿ ಇ-ಬಸ್, ಎಲ್ಲ ಬಡಾವಣೆಗು ಕನೆಕ್ಷನ್, ಏನಿದು ಯೋಜನೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422