SHIMOGA | ಗಾಂಧಿ ಬಜಾರ್‌ನಲ್ಲಿ ಅಂಗಡಿ ಧಗಧಗ, ಸುಟ್ಟು ಕರಕಲಾಯ್ತು ಲಕ್ಷಾಂತರ ಮೌಲ್ಯದ ವಸ್ತುಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 JANUARY 2021

ಗಾಂಧಿ ಬಜಾರ್‍ನ ನಾವೆಲ್ಟಿ ಶಾಪ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್‍ ಸರ್ಕಿಟ್‍ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ.

ಈಗ ಹೇಗಿದೆ ಪರಿಸ್ಥಿತಿ?

ಕನ್ನಿಕಾ ಪರಮೇಶ್ವರಿ ದೇಗುಲದ ಮುಂದೆ ಇರುವ ಮಾತಾಶ್ರೀ ನಾವೆಲ್ಟಿ ಸೆಂಟರ್‍ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅಂಗಡಿಯಲ್ಲಿ  ಸೌಂದರ್ಯವರ್ಧಕಗಳು ಇದ್ದಿದ್ದರಿಂದ ಬೆಂಕಿ ತೀವ್ರ ಸ್ವರೂಪದಲ್ಲಿ ವ್ಯಾಪಿಸಿತ್ತು. ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗಿದೆ. ಇಡೀ ಕಟ್ಟಡ ಸಂಪೂರ್ಣ ಸುಟ್ಟು ಹೋಗಿದೆ.

240121 Fire At Gandhi Bazaar 1 1

ಅಕ್ಕಪಕ್ಕದ ಕಟ್ಟಡಗಳಿಗೂ ಬಿಸಿ

ಬೆಂಕಿಯ ಪರಿಣಾಮ ಅಕ್ಕಪಕ್ಕದ ಕಟ್ಟಡಗಳಿಗೂ ಬಿಸಿ ತಟ್ಟಿದೆ. ಮಾತಾಶ್ರೀ ನಾವೆಲ್ಟಿ ಪಕ್ಕದ ಕಟ್ಟಡದಲ್ಲಿ ಮನೆಗಳಿವೆ. ರಾತ್ರಿ ಆ ಮನೆಗಳಲ್ಲಿ ಇದ್ದವರು ಆತಂಕದಿಂದ ಹೊರಗೆ ಬಂದಿದ್ದರು. ಇನ್ನು ಮತ್ತೊಂದು ಕಡೆ ಹಳೆಯ ಕಟ್ಟಡವಿದ್ದು, ಮಳಿಗೆಗಳಿವೆ. ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ವ್ಯಾಪಿಸಬಹುದು ಎಂಬ ಆತಂಕವಿತ್ತು.

ಇದನ್ನೂ ಓದಿ | ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಭಾರಿ ಅಗ್ನಿ ಅವಘಡ

ಪ್ರವಾಸಕ್ಕೆ ಹೊರಟವರು ಗಮನಿಸಿದರು

ಪ್ರವಾಸಕ್ಕೆ ಹೊರಟಿದ್ದ ಶಿವಮೊಗ್ಗದ ನರೇಂದ್ರ ಅವರು ಹೊಗೆ ಗಮನಿಸಿದ್ದಾರೆ. ಸ್ಥಳೀಯರನ್ನು ಎಚ್ಚರಿಸಿ, ನಾವೆಲ್ಟಿ ಶಾಪ್‍ನ ಮಾಲೀಕರನ್ನು ಕರೆಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಬೆಂಕಿ ಆರಿಸಲು ಸ್ಥಳೀಯರ ಯತ್ನ

ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ಅಕ್ಕಪಕ್ಕದ ಮನೆಗಳಿಂದ ಬಕೆಟ್‍ನಲ್ಲಿ ನೀರು ತಂದು ಸುರಿಯಲಾಯಿತು. ಆದರೆ ಬೆಂಕಿ ನಿಯಂತ್ರಣಕ್ಕೆ  ಬರಲಿಲ್ಲ. ಮಳಿಗೆಯ ಒಳಗಿದ್ದ ಸೌಂದರ್ಯವರ್ಧಕಗಳು ಬೆಂಕಿಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿತು. ಅಂಗಡಿಯ ಹಿಂಭಾಗದಲ್ಲೂ ಬೆಂಕಿಯ ಕೆನ್ನಾಲಗೆ ಕಾಣಿಸುತ್ತಿತ್ತು.

ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸ

ಮಳಿಗೆಯಲ್ಲಿ ಬೆಂಕಿ ಆರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಅಂಗಡಿಯ ರೋಲಿಂಗ್ ಶಟರ್‍ ನೀರು ಒಳಗೆ ಹೋಗದಂತೆ ತಡೆಯುತ್ತಿತ್ತು. ಜೀವದ ಹಂಗು ತೊರೆದು ರೋಲಿಂಗ್ ಶಟರ್ ಸರಿಸಿ, ನೀರು ಹಾಯಿಸಲಾಯಿತು. ಒಂದರ ಹಿಂದೆ ಒಂದು ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿದವು. ಅಗ್ನಿಶಾಮಕ ಇಲಾಖೆ ಡಿಎಫ್‍ಒ ಅಶೋಕ್ ಕುಮಾರ್ ಅವರು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

ಗಾಂಧಿ ಬಜಾರ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದರಿಂದ ತೀವ್ರ ಆತಂಕ ಸೃಷ್ಟಿಯಾಗಿತ್ತು. ಬೆಳಗ್ಗೆಯಿಂದ ಜನರು ಮಳಿಗೆ ಬಳಿಗೆ ಬಂದು ಆತಂಕ, ಕುತೂಹಲದಿಂದ ಗಮನಿಸುತ್ತಿದ್ದಾರೆ.

VIDEO REPORT

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment