ಇನ್ಮುಂದೆ ಶಿವಮೊಗ್ಗ ಗಾಂಧಿ ಬಜಾರ್ ಮಧ್ಯಾಹ್ನ 3 ಗಂಟೆಗೆ ಬಂದ್, ಏನೆಲ್ಲ ಇರುತ್ತೆ? ಏನಿರಲ್ಲ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಜುಲೈ 2020

ಕರೋನ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಶಿವಮೊಗ್ಗದ ಗಾಂಧಿ ಬಜಾರ್‍ನಲ್ಲಿ ವರ್ತಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಜುಲೈ 12ರಿಂದ ಪ್ರತಿದಿನ ಮಧ್ಯಾಹ್ನ 3 ಗಂಟೆಯ ಬಳಿಕ ಗಾಂಧಿ ಬಜಾರ್‍ನಲ್ಲಿ ಬಂದ್ ಮಾಡಲು ನಿರ್ಧರಿಸಲಾಗಿದೆ.

ಒಂದು ತಿಂಗಳು ಸ್ವಯಂ ನಿರ್ಬಂಧ

ಕೋರನ ಹಿನ್ನೆಲೆಯಲ್ಲಿ ಗಾಂಧಿ ಬಜಾರ್‍ನ ವರ್ತಕರು ಸ್ವಯಂ ನಿರ್ಬಂಧಕ್ಕೆ ನಿರ್ಧಿರಿಸಿದ್ದಾರೆ. ಜುಲೈ 13 ರಿಂದ ಆಗಸ್ಟ್ 12ರವರೆಗೆ ಮಧ್ಯಾಹ್ನ 3 ಗಂಟೆಯ ಬಳಿಕ ಗಾಂಧಿ ಬಜಾರ್‍ನ ಎಲ್ಲ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ದಿನಕರ್ ತಿಳಿಸಿದ್ದಾರೆ.

ಔಷಧಿ, ಹಾಲು ಇರತ್ತೆ, ಫುಟ್‍ ಪಾತ್ ವ್ಯಾಪರವಿಲ್ಲ

ಸ್ವಯಂ ನಿರ್ಬಂಧ ವಿಧಿಸಿಕೊಂಡರೂ, ಗಾಂಧಿ ಬಜಾರ್‍ನಲ್ಲಿ ಔಷಧಿ ಮತ್ತು ಹಾಲು ಮಾರಾಟಕ್ಕೆ ಅವಕಾಶ ಇರಲಿದೆ. ಅಗತ್ಯ ವಸ್ತುಗಳಾಗಿರೋದರಿಂದ ಹಾಲು ಮತ್ತು ಓಷಧ ಮಾರಾಟ ಮಾಡುವ ಅಂಗಡಿಗಳ ಬಾಗಿಲು ತೆಗೆಯಲಾಗುತ್ತದೆ ಎಂದು ವಿಜಯ್ ಕುಮಾರ್ ದಿನಕರ್ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಫುಟ್ ಪಾತ್ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

https://www.facebook.com/liveshivamogga/videos/4009072402499715/?t=8

ಸಂತೆಯೂ ಬಂದ್

ಗಾಂಧಿ ಬಜಾರ್‍ನಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತದೆ. ಆದರೆ ಸ್ವಯಂ ನಿರ್ಬಂಧದ ಕಾರಣ ಸಂತೆ ನಡೆಸುವುದಕ್ಕೆ ಅವಕಾಶವಿಲ್ಲ. ಸಂತೆಯನ್ನು ಕಡ್ಡಾಯವಾಗಿ ರದ್ದುಪಡಿಸಲಾಗಿದೆ. ಇನ್ನು, ಗಾಂಧಿ ಬಜಾರ್‍ನಲ್ಲಿ ಪ್ರತಿ ಅಂಗಡಿಯವರು ಮಾಸ್ಕ್‍ ಮತ್ತು ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment