ಗ್ರಾಮ ಪಂಚಾಯಿತಿ ಮಟ್ಟದಿಂದ ನಡೆಯಲಿದೆ ಹೋರಾಟ, ಮಿನಿಸ್ಟರ್‌ ಹೇಳಿದ್ದೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಯಲ್ಲಿರುವ ಗಾಂಧೀಜಿ ಹೆಸರು ತೆಗೆಯುವ ಕೇಂದ್ರದ ನಿರ್ಧಾರ ಖಂಡಿಸಿ ಶೀಘ್ರವೇ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಿಂದ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕೇಂದ್ರ ಸರ್ಕಾರದ ನೀತಿಗಳಿಂದ ಗೋಡ್ಸೆ ಪದ್ಧತಿ ಸಾಮಾನ್ಯ ಗ್ರಾಪಂ ಮಟ್ಟದಲ್ಲೂ ಬೆಳೆಯುತ್ತಿದೆ. ಅದನ್ನು ಮಟ್ಟಹಾಕಬೇಕಾದರೆ ಗ್ರಾಪಂನಿಂದ ಮೇಲ್ಮಟ್ಟದವರೆಗೆ ಹೋರಾಟ ಶುರು ಮಾಡಬೇಕು ಎಂದರು.

Minister-Madhu-Bangarappa-in-shimoga-press-trust

ಯೋಜನೆಯ ಹೆಸರು ಬದಲಾವಣೆ ಮಾಡುವ ಜತೆಗೆ ಮಾನವ ದಿನ ಇಳಿಕೆ ಮಾಡಿ ಬಡವರ ಅನ್ನವನ್ನೂ ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಾನೂನು ಹೋರಾಟ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡ್ವಕೇಟ್‌ ಜನರಲ್ ಅವರ ಸಲಹೆ ಪಡೆಯಲಿದ್ದಾರೆ ಎಂದರು.

ಜವಳಿ ಮತ್ತು ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ.ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾ‌ರ್, ಗ್ಯಾರಂಟಿ ಅನುಷ್ಠಾನಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್‌. ಚಂದ್ರಭೂಪಾಲ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಎಸ್.ರವಿಕುಮಾರ್, ಕಲಗೋಡು ರತ್ನಾಕ‌ರ್, ಜಿ.ಡಿ.ಮಂಜುನಾಥ, ಚಿನ್ನಯ್ಯ, ಶರತ್ ಮರಿಯಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಇದನ್ನೂ ಓದಿ » ಪುನಿತ್‌ ರಾಜ್‌ಕುಮಾರ್‌ ಫ್ಯಾನ್ಸ್‌ಗೆ ಸರ್ಕಾರದಿಂದ ಗುಡ್‌ ನ್ಯೂಸ್‌

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment