ಗಾಂಧಿ ಬಜಾರ್‌ನಲ್ಲಿ ಕಬ್ಬಿನ ಹಾಲಿನ ದುಡ್ಡು ಕೊಡಲು ಮುಂದಾದ ಗೃಹಿಣಿಗೆ ಕಾದಿತ್ತು ಆಘಾತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 12 FEBRUARY 2024

SHIMOGA : ಗಾಂಧಿ ಬಜಾರ್‌ನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣವಿದ್ದ ಪರ್ಸ್‌ ಕಳ್ಳತನವಾಗಿದೆ. 37,500 ರೂ. ಬೆಲೆಯ 6.780 ಗ್ರಾಂ ತೂಕದ ಚಿನ್ನದ ಹ್ಯಾಂಗಿಗ್ಸ್‌ ಮತ್ತು ಕಿವಿ ಮಾಟಿ ಕಳುವಾಗಿದೆ.

ಆಗಷ್ಟೆ ಖರೀದಿ ಮಾಡಿದ್ದ ಚಿನ್ನಾಭರಣ

ಹಾರನಹಳ್ಳಿಯ ಸವಿತಾ ಎಂಬುವವರು ತಮ್ಮ ಸಹೋದರಿಯ ಜೊತೆಗೆ ಗಾಂಧಿ ಬಜಾರ್‌ ಮುಖ್ಯರಸ್ತೆಯ ಚಿನ್ನಾಭರಣ ಅಂಗಡಿಯಲ್ಲಿ ಹ್ಯಾಂಗಿಂಗ್ಸ್‌ ಮತ್ತು ಕಿವಿ ಮಾಟಿ ಖರೀದಿಸಿದ್ದರು. ಬಳಿಕ ಗಾಂಧಿ ಬಜಾರ್‌ನಲ್ಲಿ ಕಬ್ಬಿನ ಹಾಲಿನ ಜ್ಯೂಸ್‌ ಸೆಂಟರ್‌ನಲ್ಲಿ ಜ್ಯೂಸ್‌ ಕುಡಿಯಲು ತೆರಳಿದ್ದರು.

ದುಡ್ಡು ಕೊಡಲು ಬ್ಯಾಗ್‌ಗೆ ಕೈ ಹಾಕಿದಾಗ ಶಾಕ್‌

ಕಬ್ಬಿನ ಹಾಲಿನ ಅಂಗಡಿಯವರಿಗೆ ದುಡ್ಡು ಕೊಡಲು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಪರ್ಸ್‌ ತೆಗೆಯಲು ನೋಡಿದಾರು. ಆಗ ಬ್ಯಾಗ್‌ನ ಜಿಪ್‌ ಸ್ವಲ್ಪ ತೆಗೆದಿರುವಂತೆ ಇತ್ತು. ಒಳಗಿದ್ದ ಪರ್ಸ್‌ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಆದೇ ಪರ್ಸ್‌ನಲ್ಲಿ ಆಗಷ್ಟೆ ಖರೀದಿಸಿದ್ದ ಹ್ಯಾಂಗಿಂಗ್ಸ್‌ ಮತು ಕಿವಿ ಮಾಟಿ ಇಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – KSRTC ಪ್ರಯಾಣಿಕರೆ ಹುಷಾರ್‌, ನಿಲ್ದಾಣದಲ್ಲಿ ಮತ್ತೆ ಟಾರ್ಗೆಟ್‌ ಆಯ್ತು ವ್ಯಾನಿಟಿ ಬ್ಯಾಗ್‌, ಬಸ್‌ ಹತ್ತಿದ್ದ ಶಿಕ್ಷಕಿಗೆ ಬಿಗ್ ಶಾಕ್

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment