SHIVAMOGGA LIVE NEWS |6 FEBRUARY 2023
ಗೋಪಾಳದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ವಿರೋಧ
GOPALA : ಇಲ್ಲಿನ 100 ಅಡಿ ರಸ್ತೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆಗೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಸ್ಥಳೀಯರು ಅಬಕಾರಿ ಆಯುಕ್ತರು ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಗೋಪಾಳ ಬಸ್ ನಿಲ್ದಾಣ ಸಮೀಪ 100 ಅಡಿ ರಸ್ತೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸಲಾಗುತ್ತಿದೆ. ಸಮೀಪದಲ್ಲೇ ಶಾಲೆಗಳು, ದೇವಸ್ಥಾನ, ಬ್ಯಾಂಕ್ ಸೇರಿದಂತೆ ಜನ ಸಂಚಾರ ಹೆಚ್ಚಿರುತ್ತದೆ. ಬಾರ್ ಅಂಡ್ ರೆಸ್ಟೋರೆಂಟ್ ತೆಗೆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ. ಇಲ್ಲಿ ಅನುಮತಿ ನೀಡುವುದ ಬೇಡ ಎಂದು ಒತ್ತಾಯಿಸಿದರು. ಹೌಸಿಂಗ್ ಬೋರ್ಡ್ ನಿವಾಸಿಗಳು, ವನಸಿರಿ ಗೋಪಾಳ ನಿವಾಸಿಗಳ ಸಂಘದ ಮುಖಂಡರ ನಿಯೋಗ ಮನವಿ ಸಲ್ಲಿಸಿತು.
ಶಿವಮೊಗ್ಗಕ್ಕೆ ಸಿಎಂ ಭೇಟಿ, ಪೂರ್ವಭಾವಿ ಮೀಟಿಂಗ್
DC OFFICE : ಫೆ.8ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಮೊಗ್ಗದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 700 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 288 ಮನೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಎನ್.ಇ.ಎಸ್. ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಯಾವುದೆ ಲೋಪದೋಷ ಆಗಬಾರದು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ಸಿಎಂ ಭೇಟಿ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಕಾರಿಗಳ ಜೊತೆ ಪೂರ್ವಭಾವಿ ಸಭೆ ನಡೆಸಲಾಯಿತು.
ಇದನ್ನೂ ಓದಿ – SHIMOGA JOBS | ಫೀಲ್ಡ್ ಸೇಲ್ಸ್, ನೀಟ್ ಅಕಾಡೆಮಿ ಮತ್ತು ಶಿವಮೊಗ್ಗ ಅಂಚೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ
ಗುಡ್ಡೇಕಲ್ ದೇವಸ್ಥಾನದಲ್ಲಿ ತೈಪೂಸಂ ಉತ್ಸವ
GUDDEKAL : ಶಿವಮೊಗ್ಗದ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತೈಪೂಸಂ ಉತ್ಸವ ನಡೆಯಿತು. ಭಕ್ತರು ವಿನೋಬನಗರದಿಂದ ಗುಡ್ಡೇಕಲ್ ವರೆಗೆ ಕಾವಡಿ ಹೊತ್ತು ಮೆರವಣಿಗೆ ನಡೆಸಿದರು. ದೇವಸ್ಥಾನದಲ್ಲಿ 508 ಬಿಂದಿಗೆಯ ಹಾಲಿನ ಅಭಿಷೇಕ ನಡೆಸಲಾಯಿತು. ಮೆರವಣಿಗೆಯಲ್ಲಿ ಮಹಿಳೆಯರು ಹಾಲಿನ ಬಿಂದಿಗೆ ಹೊತ್ತು ಸಾಗಿದರು. GOPALA
ಇದನ್ನೂ ಓದಿ – ‘ಸಿಟಿ ಸೆಂಟರ್’ ಮಾದರಿ ರೆಡಿಯಾಗಲಿದೆ ಶಿವಮೊಗ್ಗ ಜಿಲ್ಲೆಯ 3 ರೈಲ್ವೆ ನಿಲ್ದಾಣಗಳು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200