ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 28 ಜನವರಿ 2020
ಸಿಟಿಯ ಪ್ರಮುಖ ಜಾಗದಲ್ಲಿರುವ ಮಹಾನಗರ ಪಾಲಿಕೆ ಕಾಂಪ್ಲೆಕ್ಸ್, ಈಗ ಗುಂಡು ಹಾಕೋರಿಗೆ, ಧಮ್ಮು ಎಳೆಯೋರಿಗೆ ಅಡ್ಡೆಯಾಗಿದೆ. ಮಹಾನಗರ ಪಾಲಿಕೆ ಕಚೇರಿ ಸಮೀಪದಲ್ಲೇ ಈ ಚಟುವಟಿಕೆಗಳು ನಡೆಯುತ್ತಿದ್ದರು, ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸದೆ ಇರುವುದು ವಿಪರ್ಯಾಸ.
ಶಿವಮೊಗ್ಗದ ಗೋಪಿ ಸರ್ಕಲ್ ಬಳಿ ಇರುವ ದೇವರಾಜ ಅರಸು ಕಾಂಪ್ಲೆಸ್ ಒಳಭಾಗ, ಮದ್ಯಪಾನಿಗಳಿಗೆ ಫೇವರೆಟ್ ಲೊಕೇಷನ್ ಆಗಿದೆ. ಗೇಟು ದಾಟಿ ಒಳಗೆ ಕಾಲಿಟ್ಟರೆ, ಮದ್ಯದ ಬಾಟಲಿ, ಪ್ಯಾಕೆಟ್’ಗಳೇ ಕಾಣ್ಣಿಗೆ ಬೀಳುತ್ತವೆ. ಗುಟ್ಕಾ ಪ್ಯಾಕೆಟ್’ಗಳು, ಸಿಗರೇಟುಗಳು ಕಾಣಸಿಗುತ್ತವೆ.
ದೇವರಾಜ ಅರಸು ಕಾಂಪ್ಲೆಕ್ಸ್’ನಲ್ಲಿ ಮಳಿಗೆಗಳು ಬಂದ್ ಆಗಿವೆ. ಬಾಡಿಗೆ ಕಾರಣಕ್ಕೆ ತಕರಾರು ಸೃಷ್ಟಿಯಾಗಿ, ಇಲ್ಲಿರುವ ಎಲ್ಲ ಮಳಿಗೆಗಳನ್ನು ಖಾಲಿ ಮಾಡಿಸಲಾಗಿದೆ. ಮಹಾನಗರ ಪಾಲಿಕೆಯೆ ಮಳಿಗೆಗಳಿಗೆ ಬೀಗ ಜಡಿದು, ಸೀಲ್ ಮಾಡಿದೆ. ಹಾಗಾಗಿ ಈ ಕಾಂಪ್ಲೆಕ್ಸ್’ನಲ್ಲಿ ಜನರಿರುವುದಿಲ್ಲ.
‘ಬೆಳಗಿನ ಹೊತ್ತು ಕಾಂಪ್ಲೆಕ್ಸ್’ನಲ್ಲಿ ವಾಹನಗಳ ಪಾರ್ಕಿಂಗ್ ಇರುತ್ತದೆ. ಜನ ಓಡಾಡುತ್ತಿರುತ್ತಾರೆ. ಕತ್ತಲದ ಮೇಲೆ ಯಾರು ಬಂದು ಹೋಗುವರು ತಿಳಿಯುವುದಿಲ್ಲ. ಕೆಲವೊಮ್ಮೆ ಬಾಟಿಲಿಗಳನ್ನು ಒಡೆದು ಹೋಗಿದ್ದು ಇದೆ.’ ಅಂತಾರೆ ಕಾಂಪ್ಲೆಕ್ಸ್ ಸನಿಹದಲ್ಲಿ ಮಳಿಗೆ ಹೊಂದಿರುವ ವ್ಯಾಪಾರಿ.
ದೇವರಾಜ ಅರಸು ಕಾಂಪ್ಲೆಕ್ಸ್ ಪ್ರವೇಶಕ್ಕೆ ಎರಡು ಗೇಟುಗಳಿವೆ. ಗೋಪಿ ಸರ್ಕಲ್’ ಕಡೆಯಿಂದ ಒಂದು ಗೇಟು, ಕಸ್ತೂರಬಾ ಕಾಲೇಜಿಗೆ ಹೋಗುವ ರಸ್ತೆಯ ಕಡೆಯಿಂದ ಮತ್ತೊಂದು ಗೇಟಿದೆ. ಮಳಿಗೆಗಳು ಇದ್ದಾಗ ರಾತ್ರಿ ಗೇಟುಗಳನ್ನು ಬಂದ್ ಮಾಡಲಾಗುತ್ತಿತ್ತು. ಆದರೆ ಈಗ ಗೇಟುಗಳು ಸದಾ ತೆರೆದಿರುತ್ತದೆ. ಪಾಲಿಕೆ ಕಾಂಪ್ಲೆಕ್ಸ್’ಗೆ ಭದ್ರತೆಯೆ ಇಲ್ಲದೆ ಇರುವುದರಿಂದ, ಮದ್ಯವ್ಯಸಿನಿಗಳು, ಸಿಗರೇಟು ಸೇದುವವರಿಗೆ ಪ್ರಶಸ್ತ ಸ್ಥಳವಾಗಿದೆ. ಅಲ್ಲದೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂದು ಆರೋಪಿಸಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422