ಶಿವಮೊಗ್ಗದಲ್ಲಿ ಹರೋಹರ ಜಾತ್ರೆ ಶುರು, ಬೆಳಗ್ಗೆಯಿಂದಲೆ ಕಾವಡಿ ಹೊತ್ತು ಬರ್ತಿದ್ದಾರೆ ಭಕ್ತರು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 8 AUGUST 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಗುಡ್ಡೇಕಲ್‌ನ (Guddekal) ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ (Shree Baala Subramanya Swamy Temple) ದೇವಸ್ಥಾನದ ಆಡಿಕೃತ್ತಿಕೆ ಜಾತ್ರೆಗೆ ವಿಜೃಂಭಣೆಯ ಚಾಲನೆ ಸಿಕ್ಕಿದೆ. ಬೆಳಗ್ಗೆಯಿಂದಲೆ ಕಾವಡಿ ಹೊತ್ತು ಹರಕೆ ತೀರಿಸಲು ಭಕ್ತರು (Devotees) ಆಗಮಿಸುತ್ತಿದ್ದಾರೆ.

ಇವತ್ತಿನಿಂದ ಎರಡು ದಿನ ಆಡಿಕೃತ್ತಿಕೆ ಜಾತ್ರೆ ನಡೆಯಲಿದೆ. ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಲಾಯಿತು. ನಗರದ ವಿವಿಧೆಡೆಯಿಂದ ಭಕ್ತರು ಕಾವಡಿ ಹೊತ್ತು ಬಂದು, ಗುಡ್ಡ ಹತ್ತಿ ಹರಕೆ ತೀರಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ಕೂಡ ಕಾವಡಿ ಹೊತ್ತು ಬರುತ್ತಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ನಗರದ ವಿವಿಧೆಡೆ ಆ.8ರಂದು ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್‌ ವ್ಯತ್ಯಯ

ಆಡಿಕೃತ್ತಿಕೆ ಜಾತ್ರೆ ಹಿನ್ನೆಲೆ ಗುಡ್ಡೇಕಲ್‌ ದೇವಸ್ಥಾನದ ಮುಂಭಾಗ ತಿಂಡಿ –ತಿನಿಸು, ಆಟಿಕೆ, ಅಲಂಕಾರಿಕ ವಸ್ತುಗಳು, ನಾವೆಲ್ಟಿ ಸೇರಿದಂತೆ ವಿವಿಧ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇನ್ನು, ಜಾತ್ರೆ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. 

ಇದನ್ನೂ ಓದಿ: ಗುಡ್ಡೇಕಲ್‌ ಜಾತ್ರೆ, ಶಿವಮೊಗ್ಗದಲ್ಲಿ ಒಂದು ದಿನ ಮಾರ್ಗ ಬದಲಾವಣೆ, ಯಾವ್ಯಾವ ವಾಹನ ಯಾವ ರೂಟ್‌ನಲ್ಲಿ ಓಡಾಡಬೇಕು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment