ಶಿವಮೊಗ್ಗ ಗುಡ್ಡೇಕಲ್ ಹರೋಹರ ಜಾತ್ರೆ ಕ್ಯಾನ್ಸಲ್, ಯಾವತ್ತು ನಡೆಯಬೇಕಿತ್ತು? ರದ್ದಾಗಿದ್ದೇಕೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜುಲೈ 2020

ಶಿವಮೊಗ್ಗದ ಪ್ರಸಿದ್ಧ ಆಡಿಕೃತ್ತಿಕೆ ಜಾತ್ರೆಗೂ ಕರೋನ ಬಿಸಿ ತಟ್ಟಿದೆ. ಈ ಬಾರಿ ಜಾತ್ರೆಯನ್ನೇ ರದ್ದುಗೊಳಿಸಲಾಗಿದೆ.

ನಗರದ ಗುಡ್ಡೇಕಲ್‍ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ಆಡಿಕೃತ್ತಿಗೆ ಜಾತ್ರೆ ನಡೆಯುತ್ತಿತ್ತು. ಆದರೆ ಈ ಬಾರಿ ಕರೋನ ಸೋಂಕು ಹರಡುವ ಭಿತಿಯಿಂದ, ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

107896968 1161943040833781 1157525956218881973 o.jpg? nc cat=105& nc sid=8024bb& nc ohc=fIr1bzhwJtAAX8k33ru& nc ht=scontent.fblr1 4

ಈ ಕುರಿತು ಹೇಳಿಕೆ ನೀಡಿರುವ ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಂ.ಲೋಕೇಶ್, ಆಗಸ್ಟ್ 11 ಮತ್ತು 12ರಂದು ನಡೆಯಬೇಕಿದ್ದ ಆಡಿಕೃತ್ತಿಗೆ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಆ ದಿನ ದೇವಸ್ಥಾನ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಡಿಕೃತ್ತಿಗೆ ಜಾತ್ರೆ ವೇಳೆ ಶಿವಮೊಗ್ಗದ ವಿವಿಧೆಡೆಯಿಂದ ಕಾವಡಿಗಳನ್ನು ಹೊತ್ತು ಭಕ್ತರು ಬಂದು ದೇವಸ್ಥಾನದಲ್ಲಿ ಹರಕೆ ತೀರಿಸುತ್ತಿದ್ದರು. ಗುಡ್ಡೇಕಲ್ ದೇವಸ್ಥಾನಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment