ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಅಕ್ಟೋಬರ್ 2021
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಗುಡುಗು, ಮಿಂಚು ಸಹಿತ ವರುಣ ಅಬ್ಬರಿಸುತ್ತಿದ್ದಾನೆ. ಇದರಿಂದ ಜನ ಜೀವನಕ್ಕೆ ಅಡ್ಡಿ ಉಂಟಾಗಿದೆ.
ಎಂಟು ಗಂಟೆ ಹೊತ್ತಿಗೆ ಶಿವಮೊಗ್ಗ ನಗರದಲ್ಲಿ ಮಳೆ ಶುರುವಾಗಿದೆ. ಒಂದು ಗಂಟೆಗೂ ಹೆಚ್ಚು ಹೊತ್ತು ನಿರಂತರ ಮಳೆ ಸುರಿಯುತ್ತಿದೆ. ಮಿಂಚು, ಗುಡುಗು ಅಬ್ಬರ ಜೋರಿದೆ.
ಹೊಂಡ, ಗುಂಡಿ ತುಂಬ ನೀರು
ಶಿವಮೊಗ್ಗ ನಗರದಾದ್ಯಂತ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಇದರಿಂದ ರಸ್ತೆ ತುಂಬೆಲ್ಲ ಹೊಂಡ, ಗುಂಡಿ ತೋಡಲಾಗಿದೆ. ಮಳೆಯಿಂದಾಗಿ ಗುಂಡಿಗಳ ತುಂಬೆಲ್ಲ ನೀರು ಭರ್ತಿಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ವ್ಯಾಪಾರಿಗಳಿಗೆ ಫುಲ್ ಲಾಸ್
ಬೆಳಗ್ಗೆಯಿಂದ ಬಿಸಿಲಿತ್ತು, ಸಂಜೆ ವೇಳೆಗೆ ಮೋಡ ಕವಿದಿದ್ದು, ಏಕಾಏಕಿ ಮಳೆ ಶುರುವಾಗಿದೆ. ಇದರಿಂದ ಸಂಜೆ ಮೇಲಿನ ವ್ಯಾಪಾರ, ವಹಿವಾಟಿಗೆ ಭಾರಿ ಪೆಟ್ಟು ಬಿದ್ದಿದೆ. ಶಿವಮೊಗ್ಗದ ತಳ್ಳುಗಾಡಿ ವ್ಯಾಪಾರಿಗಳು, ತನಿಸುಗಳ ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಅಂಗಡಿಗಳಿಗೆ ಜನರ ಬಾರದಂತಾಗಿದೆ.
ಮನೆಗಳಿಗೆ ಹೋಗಲಾರದ ಸಂಕಷ್ಟ
ಇನ್ನು, ಮಳೆಯ ಮುನ್ಸೂಚನೆ ಇಲ್ಲದೆ ಸಿಟಿಗೆ ಬಂದವರು, ಕೆಲಸ ಮುಗಿಸಿ ಹೊರಟವರು ಮನೆ ಸೇರಲು ಕಷ್ಟಪಡುವಂತಾಗಿದೆ. ದ್ವಿಚಕ್ರ ವಾಹನ, ಬಸ್ಸುಗಳುಗಳಲ್ಲಿ ಸಂಚಾರಿಸವವರು ಮಳೆಯಿಂದ ರಕ್ಷಣೆಗಾಗಿ ಕಟ್ಟಡಗಳು, ಮಳಿಗೆಗಳ ಮುಂದೆ ನಿಂತಿದ್ದಾರೆ. ಬಿಡುವು ಕೊಡದೆ ಮಳೆ ಸುರಿಯುತ್ತಿರುವುದರಿಂದ ಜನರು ಮನೆ ಸೇರಲು ಸರ್ಕಸ್ ಮಾಡುವಂತಾಗಿದೆ.
ಕೈ ಕೊಟ್ಟ ವಿದ್ಯುತ್
ಗುಡುಗು, ಮಿಂಚು, ಮಳೆ ಆರಂಭವಾಗುತ್ತಿದ್ದಂತೆ ವಿದ್ಯುತ್ ಕೈ ಕೊಟ್ಟಿದೆ. ಹಲವು ಕಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಶಿವಮೊಗ್ಗ ನಗರ ಮಾತ್ರವಲ್ಲದೆ ಭದ್ರಾವತಿ, ತೀರ್ಥಹಳ್ಳಿ, ಸಾಗರ, ಹೊಸನಗರದಲ್ಲೂ ಭಾರಿ ಮಳೆಯಾಗುತ್ತಿರುವ ವರದಿಯಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422