ಶಿವಮೊಗ್ಗ : ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಆಯೋಜಿಸಿದ್ದ ಜನಾಕ್ರೋಶ ಯಾತ್ರೆಗೆ (Protest) ಮಳೆ ಅಡ್ಡಿಯಾಗಿದೆ. ಮೆರವಣಿಗೆ ಮುಗಿದು ವೇದಿಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮಳೆ ಶುರುವಾಯಿತು. ಜೋರು ಗಾಳಿಗೆ ಕೆಲ ಹೊತ್ತು ವೇದಿಕೆಯ ನಡುಗಿತು.
ರಾಮಣ್ಣಶ್ರೇಷ್ಠಿ ಪಾರ್ಕ್ನಿಂದ ಗೋಪಿ ಸರ್ಕಲ್ವರೆಗೆ ಬಿಜೆಪಿಯ ಜನಾಕ್ರೋಶ ಯಾತ್ರೆ ನಡೆಯಿತು. ಗೋಪಿ ಸರ್ಕಲ್ನಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿತ್ತು.
ಸಭೆ ಆರಂಭದಲ್ಲೆ ಮಳೆ ಅಬ್ಬರ
ಸಭೆ ಆರಂಭವಾಗುತ್ತಿದ್ದಂತೆ ಗಾಳಿ, ಗುಡುಗು ಸಹಿತ ಭಾರಿ ಮಳೆ ಅಬ್ಬರಿಸಲು ಆರಂಭಿಸಿತು. ಮಳೆಯಲ್ಲೇ ವೇದಿಕೆ ಕಾರ್ಯಕ್ರಮ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಳೆಯಲ್ಲೇ ಭಾಷಣ ಮುಂದುವರೆಸಿದರು. ಆದರೆ ಮಳೆ ಅಬ್ಬರ ಜೋರಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅಕ್ಕಪಕ್ಕದ ಕಟ್ಟಡಗಳ ಅಡಿ ರಕ್ಷಣೆಗೆ ನಿಂತರು. ಕೆಲವು ವೇದಿಕೆ ಕಳೆಗೆ ಇದ್ದ ಜಾಗದಲ್ಲಿ ಕುಳಿತರು.
ಇದನ್ನೂ ಓದಿ » ಭಾರಿ ಮಳೆಗೆ ಈಜು ಕೊಳದಂತಾದ ಶಿವಮೊಗ್ಗದ ಬಿ.ಹೆಚ್.ರಸ್ತೆ
ಗಢಗಢ ನಡುಗಿದ ವೇದಿಕೆ
ಜೋರು ಗಾಳಿಯಿಂದಾಗಿ ಜನಾಕ್ರೋಶ ಯಾತ್ರೆಯ ವೇದಿಕೆ ಅಲುಗಾಡಿತು. ವೇದಿಕೆ ಹಿಂಬದಿ ಅಳವಡಿಸಿದ್ದ ಫ್ಲೆಕ್ಸ್ ಮುರಿದು ಬೀಳುವಂತಾಯಿತು. ಕೂಡಲೆ ಅಲ್ಲಿಗೆ ದೌಡಾಯಿಸಿದ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಹಿಡಿದರು. ಆದರೆ ಗಾಳಿ ರಭಸಕ್ಕೆ ಫ್ಲೆಕ್ಸ್ ಮುರಿದು ಬಿತ್ತು. ಅಷ್ಟರಲ್ಲಿ ವೇದಿಕೆ ಮೇಲಿಂದ ಮುಖಂಡರು ಕೆಳಗಿಳಿದಿದ್ದರು.
ಮಳೆಯಲ್ಲಿ ವಿಜಯೇಂದ್ರ ಹೊತ್ತು ಕುಣಿತ
ಇನ್ನು, ಭಾರಿ ಮಳೆಯ ನಡುವೆಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಹೆಗಲ ಮೇಲೆ ಹೊತ್ತ ಕಾರ್ಯಕರ್ತರು, ಗೋಪಿ ಸರ್ಕಲ್ನಲ್ಲಿ ಕುಣಿದರು. ಅಕ್ಕಪಕ್ಕದ ಕಟ್ಟಡಗಳ ಅಡಿ ನಿಂತಿದ್ದ ಕಾರ್ಯಕರ್ತರು ಇದನ್ನು ಕಂಡು ಘೋಷಣೆ ಕೂಗಿದರು. ಅಲ್ಲದೆ ತಮ್ಮ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದರು.
ಗುಡುಗು, ಗಾಳಿ ಸಹಿತ ಮಳೆಯಿಂದಾಗಿ ಬಿಜೆಪಿ ಜನಾಕ್ರೋಶ ಯಾತ್ರೆ ಅರ್ಧಕ್ಕೆ ಮೊಟಕುಗೊಳಿಸುವಂತಾಯಿತು.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200