ಶಿವಮೊಗ್ಗ : ಭಾರಿ ಗಾಳಿ, ಗುಡುಗು (Thunder) ಸಹಿತ ಸಂಜೆ ಸುರಿದ ಜೋರು ಮಳೆಗೆ ಶಿವಮೊಗ್ಗ ನಗರದ ವಿವಿಧೆಡೆ ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ತಗ್ಗು ಪ್ರದೇಶಗಳಲ್ಲಿ ಕಟ್ಟಡಗಳಿಗೆ ನೀರು ನುಗ್ಗಿದೆ. ವಿವಿಧೆಡೆ ವಾಹನಗಳು ಕೂಡ ಮುಳುಗಿವೆ.
ಇಂದು ಸಂಜೆ ಶಿವಮೊಗ್ಗ ನಗರದಲ್ಲಿ ಒಂದು ಗಂಟೆಗು ಹೆಚ್ಚು ಹೊತ್ತು ಗುಡುಗು (Thunder) ಸಹಿತ ಭಾರಿ ಮಳೆಯಾಯಿತು. ಜೊತೆಗೆ ಜೋರು ಗಾಳಿ ಬೀಸಿದ್ದರಿಂದ ಮರದ ರೆಂಬೆ, ಕೊಂಬೆಗಳು, ಗರಿಗಳು ಬಿದ್ದು ಹಾನಿ ಉಂಟಾಗಿದೆ.
ಎಲ್ಲೆಲ್ಲಿ ಏನೇನು ಹಾನಿಯಾಗಿದೆ?
ಭಾರಿ ಮಳೆಗೆ ಚರಂಡಿಗಳಲ್ಲಿ ನೀರು ತುಂಬಿ ಹೊರಕ್ಕೆ ಹರಿದಿದೆ. ನೀರು ಸರಾಗವಾಗಿ ಹರಿದು ಹೋಗದೆ ವಿವಿಧೆಡೆ ರಸ್ತೆ ಮೇಲೆ ಹರದಿದೆ. ಕೆ.ಆರ್.ಪುರಂ ರಸ್ತೆಯಲ್ಲಿನ ಸರ್ಕಲ್‌ನಲ್ಲಿ ಕಟ್ಟಡಗಳಿಗೆ ನೀರು ನುಗ್ಗಿದೆ. ವಾಹನಗಳು ಕೂಡ ಜಲಾವೃತವಾಗಿದ್ದವು.
ಪ್ರತಿ ಭಾರಿ ಜೋರು ಮಳೆಯಾದಾಗಲು ಇಲ್ಲಿ ನೀರು ನಿಲ್ಲುತ್ತದೆ. ಅಮೀರ್ ಅಹಮದ್ ಸರ್ಕಲ್ ಕಡೆಯಿಂದ ಹರಿದು ಬರುವ ನೀರು, ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಕಡೆಯ ರಸ್ತೆಯಿಂದ ಹರಿದು ಬರುವ ನೀರು ಇಲ್ಲಿ ಸೇರುತ್ತದೆ. ಈ ಸರ್ಕಲ್‌ನಲ್ಲಿ ನಾಲ್ಕು ಕಡೆಯ ಚರಂಡಿಗಳು ಭರ್ತಿಯಾಗಿ ನೀರು ಹರಿದು ಹೋಗದೆ ಹೊರಗೆ ಹರಿಯುತ್ತದೆ. ನೆಲ ಮಹಡಿಯ ಅಂಗಡಿಗಳು, ಮನೆಗಳಿಗೆ ನೀರು ನುಗ್ಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕಿದೆ.
– ಪ್ರಶಾಂತ್, ಸ್ಥಳೀಯರು
ನಗರದ ಜೈಲ್ ರಸ್ತೆಯಲ್ಲಿಯು ಚರಂಡಿಗಳು ಭರ್ತಿಯಾಗಿ ರಸ್ತೆಯ ಮೇಲೆ ಮಳೆ ನೀರು ಹರಿದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಇದನ್ನೂ ಓದಿ » ಗೋಪಿ ಸರ್ಕಲ್‌ನಲ್ಲಿ ಮಳೆಯಲ್ಲೇ ವಿಜಯೇಂದ್ರ ಭಾಷಣ, ಭಾರಿ ಗಾಳಿಗೆ ನಡುಗಿದ ವೇದಿಕೆ
ಶಂಕರಮಠದಿಂದ ಸೈನ್ಸ್ ಮೈದಾನದ ಸಮೀಪ ಇರುವ ಏಥರ್ ಶೋ ರೂಂವರೆಗೆ ಬಿ.ಹೆಚ್.ರಸ್ತೆಯಲ್ಲಿ ಎರಡು ಬದಿಯಲ್ಲಿ ನೀರು ನಿಂತಿತ್ತು. ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಾಯಿತು. ಕೆಲಹೊತ್ತು ಟ್ರಾಫಿಕ್ ಜಾಮ್ ಆಗಿತ್ತು.
ಇದನ್ನೂ ಓದಿ » ಭಾರಿ ಮಳೆಗೆ ಈಜು ಕೊಳದಂತಾದ ಶಿವಮೊಗ್ಗದ ಬಿ.ಹೆಚ್.ರಸ್ತೆ
ಹೊಸಮನೆ ಬಡಾವಣೆಯ ಶರಾವತಿ ನಗರದ ಬಿ ಬ್ಲಾಕ್‌ನ 2ನೇ ಅಡ್ಡರಸ್ತೆಯಲ್ಲಿ ಮರ ರೆಂಬೆ ತುಂಡಾಗಿ ಬಿದ್ದು ಎರಡು ಕಾರುಗಳಿಗೆ ಹಾನಿಯಾಗಿದೆ.
ಭಾರಿ ಮಳೆಗೆ ರಾಗಿಗುಡ್ಡದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ದಿನಸಿ ಸೇರಿದಂತೆ ಹಲವು ವಸ್ತುಗಳ ಹಾನಿಯಾಗಿವೆ.
ಸಂಜೆ ವ್ಯಾಪಾರಕ್ಕೆ ತೊಂದರೆ
ಗಾಳಿ, ಗುಡುಗು ಸಹಿತ ಸುರಿದ ಭಾರಿ ಮಳೆಯಿಂದಾಗಿ ನಗರದಲ್ಲಿ ಸಂಜೆ ವೇಳೆಯ ವ್ಯಾಪಾರಕ್ಕೆ ತೊಂದರೆ ಉಂಟಾಗಿದೆ. ಮತ್ತೆ ಮಳೆಯಾಗಬಹುದು ಎಂಬ ಭೀತಿಯಿಂದ ಜನ ಮನೆ ಬಿಟ್ಟು ಹೊರಬಾರದ ಹಿನ್ನೆಲೆ ವೀಕೆಂಡ್ ವ್ಯಾಪಾರ ವಹಿವಾಟು ಕುಸಿತ ಕಂಡಿದೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200