ಶಿವಮೊಗ್ಗದಲ್ಲಿಲ್ಲ ಚಿಕನ್, ಮಟನ್, ಮೀನಿಗೆ ಭಾರಿ ಡಿಮಾಂಡ್, ಮಾರುಕಟ್ಟೆಯಲ್ಲಿ ಕರೋನಾ ಬಗ್ಗೆ ಕ್ಯಾರೆ ಇಲ್ಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Covid 19 Vaccination Kan poster 1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 APRIL 2021

ವೀಕೆಂಡ್ ಕರ್ಫ್ಯೂ ಎರಡನೆ ದಿನದ ರಿಲ್ಯಾಕ್ಸ್ ಅವಧಿಯಲ್ಲಿ ಮೀನು ಮಾರುಕಟ್ಟೆಯಲ್ಲಿ ಭಾರಿ ಜನ ಸಂದಣಿ ಸೇರಿದೆ. ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಹಲವರು ಖರೀದಿಯಲ್ಲಿ ತೊಡಗಿದ್ದಾರೆ.

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದಲೆ ಜನ ಸಂದಣಿ ಇದೆ. ಮೀನು ಖರೀದಿಗೆ ಭಾರಿ ಸಂಖ್ಯೆಯ ಜನರು ಸೇರಿದ್ದಾರೆ.

ಚಿಕನ್, ಮಟನ್ ಇಲ್ಲ

ಮಹಾವೀರ ಜಯಂತಿ ಹಿನ್ನೆಲೆ ಮಾಂಸ ಮಾರಾಟ ನಿಷೇಧಿಸಲಾಗಿದೆ. ನಗರದ ಬಹುತೇಕ ಕಡೆ ಚಿಕನ್ ಮತ್ತು ಮಟನ್ ಸ್ಟಾಲ್‍ಗಳು ಬಂದ್ ಆಗಿವೆ. ಹೊರ ವಲಯದಲ್ಲಿ ಕದ್ದು ಮುಚ್ಚಿ ವ್ಯಾಪಾರ ನಡೆಯುತ್ತಿದೆ. ಆದರೆ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೇ ಕಾರಣಕ್ಕೆ ಮೀನು ಮಾರುಕಟ್ಟೆಯಲ್ಲಿ ಹೆಚ್ಚು ಜನ ಸೇರಿದ್ದಾರೆ.

ಇವತ್ತು ದುಬಾರಿ ರೇಟು

ವೀಕೆಂಡ್ ಕರ್ಫ್ಯೂ ಹಿನ್ನೆಲೆ ಮಾರಾಟಗಾರರಿಗೆ ತಮ್ಮ ಬಳಿ ಇರುವ ಮೀನು ಮಾರಾಟವಾಗಬೇಕಿದೆ. ಮಾರುಕಟ್ಟೆಗೆ ಬಂದವರು ಕರ್ಫ್ಯೂ ಜಾರಿಗೆ ಮುನ್ನ ಖರೀದಿ ಮುಗಿಸಬೇಕಿದೆ. ಹಾಗಾಗಿ ಮಾರಾಟಗಾರರು ಕೇಳಿದಷ್ಟು ರೇಟಿಗೆ ಮೀನು ಖರೀದಿಸುತ್ತಿದ್ದಾರೆ. ಸಾಮಾನ್ಯ ದಿನಕ್ಕಿಂತಲೂ ಇವತ್ತು ಪ್ರತಿ ಕೆಜಿಗೆ ಐವತ್ತು, ನೂರು ನೂರು ಹೆಚ್ಚಿಗೆ ರೇಟಿದೆ ಎಂದು ಗ್ರಾಹಕರು ಆರೋಪಿಸುತ್ತಾರೆ.

ತರಕಾರಿ ಮಾರುಕಟ್ಟೆಯಲ್ಲೂ ಜನ ಜಂಗುಳಿ

ಗಾಂಧಿ ಬಜಾರ್‍ನ ತರಕಾರಿ ಮಾರುಕಟ್ಟೆಯಲ್ಲೂ ಜನ ಜಂಗುಳಿ ಇದೆ. ಬೆಳಗ್ಗೆಯಿಂದಲೇ ಖರೀದಿಗೆ ಜನ ಸೇರಿದ್ದಾರೆ. ಕರ್ಫ್ಯೂ ಹಿನ್ನೆಲೆ ತರಕಾರಿ ದರವು ದುಬಾರಿಯಾಗಿದೆ.

ಸಾಮಾಜಿಕ ಅಂತರದ ಪ್ರಶ್ನೆಯೇ ಇಲ್ಲ

ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವಿಲ್ಲ. ಕೆಲವರು ಮಾಸ್ಕ್ ಧರಿಸಿಲ್ಲ. ಇದನ್ನು ಪ್ರಶ್ನಿಸಲು ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿಲ್ಲ. ಹತ್ತು ಗಂಟೆ ಬಳಿಕ ಕರ್ಫ್ಯೂ ಜಾರಿಯಾಗುವುದರಿಂದ ಜನರು ಗಡಿಬಿಡಿಯಲ್ಲಿ ಅಂತರ, ಮಾಸ್ಕ್ ‍ವಿಚಾರವನ್ನೇ ಮರೆತಂತಿದೆ.

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment