ನೇಪಾಳದಲ್ಲಿ ಸಿಲುಕಿದ್ದವರ ಮಾಹಿತಿ ನೀಡುವಂತೆ ಸೂಚನೆ

ಶಿವಮೊಗ್ಗ: ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಮತ್ತು ಪ್ರವಾಹದಲ್ಲಿ ಕರ್ನಾಟಕ ಮೂಲದ ಪ್ರವಾಸಿಗರು ಅಥವಾ ಶಿವಮೊಗ್ಗದ ನಾಗರಿಕರು ನಾಪತ್ತೆಯಾಗಿದ್ದಲ್ಲಿ ಕೂಡಲೇ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ನೇಪಾಳದಲ್ಲಿರುವ ಕುಟುಂಬಸ್ಥರು, ಸ್ನೇಹಿತರು, ಪರಿಚಿತರ ಬಗ್ಗೆ ಮಾಹಿತಿ ಸಿಗದೆ ಆತಂಕವಿದ್ದಲ್ಲಿ, ನಾಪತ್ತೆಯಾದವರ ಹೆಸರು, ಮೊಬೈಲ್ ಸಂಖ್ಯೆ, ಸ್ಥಳ ಹಾಗೂ ಕಾಯಂ ವಿಳಾಸದ ವಿವರ ಒದಗಿಸುವಂತೆ ಸೂಚಿಸಲಾಗಿದೆ. ಸಂತ್ರಸ್ತರು ಮತ್ತು ಅವರ ಕುಟುಂಬದವರ ತುರ್ತು ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ 24 ಗಂಟೆಯ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು 1070 ಅಥವಾ 080-22253707 ಸಂಖ್ಯೆಗೆ ಕರೆ ಮಾಡಬಹುದು ಅಥವಾ seockarnataka@gmail.com ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು.

himoga-DC-office-and-Police-jeep-in-front-of-office