SHIVAMOGGA LIVE NEWS | 20 OCTOBER 2023
SHIMOGA : ಹೈದರಾಬಾದ್, ಗೋವಾ ಮತ್ತು ತಿರುಪತಿಗೆ ಶಿವಮೊಗ್ಗದಿಂದ ವಿಮಾನಯಾನ ಸೇವೆ (Flight) ಆರಂಭದ ಘೋಷಣೆಯಾಗುತ್ತಿದ್ದಂತೆ ಜನರಲ್ಲಿ ಕುತೂಹಲ ಹೆಚ್ಚಿದೆ. ವಿಚಾರಣೆ ಮತ್ತು ಟಿಕೆಟ್ ಬುಕಿಂಗ್ ಪ್ರಕ್ರಿಯೆ ಕೂಡ ಬಿರುಸು ಪಡೆದುಕೊಂಡಿದೆ.
ನ.21ರಿಂದ ಸ್ಟಾರ್ ಏರ್ ಸಂಸ್ಥೆ ಶಿವಮೊಗ್ಗದಿಂದ ಮೂರು ನಗರಗಳಿಗೆ ವಿಮಾನಯಾನ ಸೇವೆ ಆರಂಭಸಲಿದೆ. ಈ ಕುರಿತು ತಮ್ಮ ವೆಬ್ಸೈಟ್ನಲ್ಲಿಯು ಪ್ರಕಟಣೆ ಹೊರಡಿಸಿದೆ. ವಿಚಾರ ತಿಳಿಯುತ್ತಲೆ ಜನರು ಎನ್ಕ್ವಯರಿ ಮತ್ತು ಬುಕಿಂಗ್ ಮಾಡಲು ಮುಂದಾಗಿದ್ದಾರೆ.
ವಾರದಲ್ಲಿ ನಾಲ್ಕು ದಿನ
ವಾರದಲ್ಲಿ ನಾಲ್ಕು ದಿನದ ವಿಮಾನ ಹಾರಾಟ ನಡೆಯಲಿದೆ. ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ಸ್ಟಾರ್ ಏರ್ ವಿಮಾನ ಶಿವಮೊಗ್ಗದಿಂದ ಮೂರು ನಗರಕ್ಕೆ ಹಾರಲಿದೆ. ಈಗಾಗಲೆ ಸೀಟ್ ಬುಕಿಂಗ್ ಆರಂಭವಾಗಿದೆ. (ಟಿಕೆಟ್ ಬುಕಿಂಗ್ಗೆ ಮೊ . 8123002917, 9449502917)
ಯಾವ ರೂಟ್ಗೆ ಡಿಮಾಂಡ್ ಜಾಸ್ತಿ?
‘ಮೂರು ಮಾರ್ಗಗಳ ಬಗ್ಗೆ ಪ್ರತ್ಯೇಕ ವಿಭಾಗದ ಜನರಿಂದ ಎನ್ಕ್ವಯರಿ ಬರುತ್ತಿದೆ. ಗೋವಾ ರೂಟ್ ಬಗ್ಗೆ ಹೆಚ್ಚಿನ ಮಂದಿ ವಿಚಾರಣೆ ಮಾಡುತ್ತಿದ್ದಾರೆ. ತಿರುಪತಿಗೆ ತೆರಳುವವರು ವಿಮಾನದ ಟೈಮಿಂಗ್, ದರ್ಶನದ ವ್ಯವಸ್ಥೆಯ ಕುರಿತು ಕೇಳುತ್ತಿದ್ದಾರೆ. ವಿಮಾನ ಹಾರಾಟ ಶುರುವಾದ ಮೇಲೆ ಎನ್ಕ್ವಯರಿ ಮತ್ತು ಬುಕಿಂಗ್ ಮತ್ತಷ್ಟು ಹೆಚ್ಚಾಗುತ್ತದೆʼ ಅನ್ನುತ್ತಾರೆ ಶಿವಮೊಗ್ಗದ ಬ್ಲೂ ಬೆಲ್ ಹಾಲಿಡೇಸ್ ಸಂಸ್ಥೆಯ ಮಂಜುನಾಥ ಮೂರ್ತಿ.
ಗೋವಾಗೆ ಸಿಕ್ಕಾಪಟ್ಟೆ ಡಿಮಾಂಡ್
ಶಿವಮೊಗ್ಗದ ಉದ್ಯಮ ಕ್ಷೇತ್ರ ಹೈದರಾಬಾದ್ ಜೊತೆಗೆ ನಂಟು ಹೊಂದಿದೆ. ಇಲಿಯ ಉದ್ಯಮಿಗಳು ಆಗಾಗ ಹೈದಾರಾಬಾದ್ಗೆ ತೆರಳುತ್ತಾರೆ. ಶಿವಮೊಗ್ಗದಿಂದ ನೇರವಾಗಿ ವಿಮಾನಯಾನ ಸೇವೆ ಆರಂಭವಾಗುತ್ತಿರುವುದು ಉದ್ಯಮಿಗಳಿಗೆ ಅನುಕೂಲ. ಆದರೆ ಸಂಜೆ ಹೊತ್ತಿಗೆ ಶಿವಮೊಗ್ಗದಿಂದ ಹೈದರಾಬಾದ್ಗೆ ವಿಮಾನ ಹಾರುತ್ತದೆ. ಇದು ಉದ್ಯಮಿಗಳಿಗೆ ಅಷ್ಟೇನು ಅನುಕೂಲಕರ ಅಲ್ಲ ಎಂಬ ಅಭಿಪ್ರಾಯವಿದೆ.
ಶಿವಮೊಗ್ಗದಿಂದ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರ ಸಂಖ್ಯೆ ಕಡಿಮೆ ಏನಿಲ್ಲ. ರೈಲ್ವೆ ಇಲಾಖೆ ಶಿವಮೊಗ್ಗದಿಂದ ತಿರುಪತಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯು ವ್ಯಕ್ತವಾಗುತ್ತಿದೆ. ಈಗ ಇದೆ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲಿದೆ. ಇದೆ ಕಾರಣಕ್ಕೆ ತಿರುಪತಿಗೆ ತೆರಳುವ ವಿಮಾನದ ಕುರಿತು ಜನ ವಿಚಾರಣೆ ನಡೆಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದಿಂದ ಹೊರಡಲಿದೆ. ಮಧ್ಯಾಹ್ನ ತಲುಪಿದಾಗ ದರ್ಶನವಾಗುತ್ತದೆಯೋ ಇಲ್ಲವೋ ಎಂಬುದರ ಕುರಿತು ಜನಕ್ಕೆ ಗೊಂದಲವಿದೆ.
ಇದನ್ನೂ ಓದಿ – ಶಿವಮೊಗ್ಗ TO ಹೈದರಾಬಾದ್, ಗೋವಾ, ತಿರುಪತಿ ವಿಮಾನದ ಹಾರಾಟದ ದಿನಾಂಕ ಬದಲು, ಯಾವುದು ಹೊಸ ಡೇಟ್?
ವೀಕೆಂಡ್ನಲ್ಲಿ ಶಿವಮೊಗ್ಗದಿಂದ ಗೋವಾಗೆ ತೆರಳುವವರ ಸಂಖ್ಯೆ ದೊಡ್ಡದಿದೆ. ಈಗ ವಿಮಾನಯಾನ ಸೇವೆ ಆರಂಭವಾಗುತ್ತಿರುವುದು ‘ಗೋವಾ ಪ್ರಿಯ’ರಿಗೆ ಅನುಕೂಲವಾಗಲಿದೆ. ಇದೇ ಕಾರಣಕ್ಕೆ ಗೊವಾಗೆ ತೆರಳುವವರು ಈಗಾಗಲೆ ಬುಕಿಂಗ್ ಕೂಡ ಆರಂಭಿಸಿದ್ದಾರೆ.
ಶಿವಮೊಗ್ಗದಿಂದ ಸದ್ಯ ಮೂರು ಹೊಸ ಮಾರ್ಗಗಳಲ್ಲಿ ವಿಮಾನಯಾನ ಆರಂಭವಾಗುತ್ತಿದೆ. ಮತ್ತಷ್ಟು ಮಾರ್ಗಗಳಿಗೆ ವಿಮಾನ ಹಾರಾಟ ಶುರುವಾಗುವ ನಿರೀಕ್ಷೆ ಇದೆ. ಅಲ್ಲದೆ ಮಧ್ಯೆ ಕರ್ನಾಟಕದ ಪಾಲಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಪ್ರಮುಖ ಸಂಪರ್ಕ ಕೇಂದ್ರವಾಗಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200