ಶಿವಮೊಗ್ಗದ ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರೆಲ್ಲ ಹೈ ಜಂಪ್ ಮಾಡಲೇಬೇಕು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

 SHIVAMOGGA LIVE NEWS 

SHIMOGA | ವಾಹನ ಸವಾರರ ಪಾಲಿಗೆ ಇದು ಅಕ್ಷರಶಃ ಹೈ ಜಂಪ್ (HIGH JUMP) ಸ್ಪಾಟ್. ಹತ್ತಿರ ಬರುವವರೆಗೂ ಇಲ್ಲಿ ರಸ್ತೆ ತಗ್ಗಿದೆ ಅನ್ನುವುದು ವಾಹನ ಸವಾರರಿಗೆ ಗೊತ್ತಾಗುವುದೆ ಇಲ್ಲ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Shimoga Nanjappa Hospital

ಇದು ಕುವೆಂಪು ರಸ್ತೆಯಲ್ಲಿನ ದುಸ್ಥಿತಿ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಇತ್ತೀಚೆಗಷ್ಟೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ರಸ್ತೆಯಲ್ಲಿ ಈಗಾಗಲೇ ದೊಡ್ಡದೊಂಡು ತಗ್ಗು ಸೃಷ್ಟಿಯಾಗಿದೆ.

(HIGH JUMP)

ತಗ್ಗು ಇದೆ ಅನ್ನೋದು ಗೊತ್ತಾಗಲ್ಲ

ಸವಳಂಗ ರಸ್ತೆಯಿಂದ ಕುವೆಂಪು ರಸ್ತೆಗೆ ಬರುವಾಗ ಮತ್ತು ಕುವೆಂಪು ರಸ್ತೆಯಿಂದ ಸವಳಂಗ ರಸ್ತೆ ಕಡೆ ತೆರಳುವವರಿಗೆ ಈ ಗುಂಡಿಯ ದರ್ಶನವಾಗುತ್ತದೆ. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಯವರೆಗು ಗುಂಡಿ ಹರಡಿಕೊಂಡಿದೆ. ಡಾಂಬಾರ್ ಮತ್ತು ಡಿವೈಡರ್ ಲೈನ್ ಇರುವುದರಿಂದ ರಸ್ತೆ ತಗ್ಗಿದೆ ಅನ್ನುವುದು ಯಾರಿಗೂ ಗೊತ್ತಾಗುವುದಿಲ್ಲ.

Shimoga Nanjappa Hospital

ಸ್ಮಾರ್ಟ್ ಸಿಟಿ ಯೋಜನೆ ಅಡಿ ಕುವೆಂಪು ರಸ್ತೆಯಲ್ಲಿ ಕಾಮಗಾರಿ ನಡೆಸಲಾಯಿತು. ಈ ವೇಳೆ ಪೈಪ್ ಅಳವಡಿಸಲು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿವರೆಗೆ ಗುಂಡಿ ಅಗೆಯಲಾಗಿತ್ತು. ಆದರೆ ಅದನ್ನು ಸಮರ್ಪಕವಾಗಿ ಮುಚ್ಚಿಲ್ಲ. ಅದರ ಮೇಲೆ ಡಾಂಬಾರ್ ಹಾಕಿ, ಡಿವೈಡರ್ ಲೈನ್ ಎಳೆಯಲಾಗಿದೆ.

(HIGH JUMP)

ವೇಗವಾಗಿ ಬಂದರೆ ಹೈ ಜಂಪ್ ಫಿಕ್ಸ್

ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ರಸ್ತೆ ತಗ್ಗಿದೆ. ಹಾಗಾಗಿ ಎಲ್ಲಾ ವಾಹನಗಳು ಈ ಗುಂಡಿಯಲ್ಲಿ ಇಳಿಯಲೇಬೇಕು. ಅಪ್ಪಿತಪ್ಪಿ ವೇಗವಾಗಿ ಬಂದರಂತು ಸವಾರರಿಗೆ ಹೈ ಜಂಪ್ ಅನುಭವವಾಗಲಿದೆ. ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುವ ಸಾದ್ಯತೆಯು ಇದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಕೆಲಸ ಮುಗಿಸಿ ರಾತ್ರಿ ಬಾರ್ ನಿಂದ ಹೊರ ಬಂದ ಕ್ಯಾಶಿಯರ್ ಗೆ ಕಾದಿತ್ತು ಶಾಕ್

‘ಬೈಕುಗಳಲ್ಲಿ ಬಂದವರು ವೇಗವಾಗಿ ಗುಂಡಿ ಹಾರಿಸಿದರೆ ಬ್ಯಾಲೆನ್ಸ್ ಸಿಗುವುದಿಲ್ಲ. ಈ ಗುಂಡಿ ಕಾಣಿಸುವುದೆ ಇಲ್ಲ. ಇಲ್ಲಿ ಒಂದೆರಡು ಭಾರಿ ಬ್ಯಾಲೆನ್ಸ್ ತಪ್ಪಿದ್ದೇನೆ. ಸದ್ಯಕ್ಕೆ ಏನೂ ಆಗಲಿಲ್ಲ.’ ಅನ್ನುತ್ತಾರೆ ಸ್ವಪ್ನಾ.

ಕ್ಲಿಕ್ ಮಾಡಿ ಇದನ್ನೂ ಓದಿ ಆಲ್ಕೊಳ ಸರ್ಕಲ್ ನಲ್ಲಿ ಟ್ಯೂಷನ್ ಗೆ ತೆರಳುತ್ತಿದ್ದ ಬಾಲಕನಿಗೆ ಬೊಲೆರೋ ಡಿಕ್ಕಿ

ಹಗಲು ಹೊತ್ತಿನಲ್ಲಿ ಹತ್ತಿರ ಬಂದಾಗಲಾದರು ರಸ್ತೆ ತಗ್ಗಿರುವುದು ಗೊತ್ತಾಗುತ್ತದೆ. ಆದರೆ ರಾತ್ರಿ ವೇಳೆ ತಗ್ಗು ಇರುವುದು ತಿಳಿಯುದಿಲ್ಲ. ರಾತ್ರಿ ವಾಹನ ದಟ್ಟಣೆ ಕಡಿಮೆ ಇರುವುದರಿಂದ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಇದರಿಂದ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾದ್ಯತೆ ಹೆಚ್ಚು.

jnnce college engineering

 

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment